ಏನು ಕೊಟ್ಟನೆ ಮಗಳಾ ಉದಾ |
ಸೀನದಿ ಭಿಕ್ಷುಕ ಶಿವಗೀಂದು ಗಿರಿಜಾ ಪ
ಹೆತ್ತವಳಿಲ್ಲಾ ಸೀ ಹುಟ್ಟತ ಪರದೇಶೀ |
ನೆತ್ತಿಗೆ ಎಣ್ಣಿಲ್ಲಾ ನೆರೆಬಿಸಿ ನೀರಿಲ್ಲಾ |
ದೊತ್ತಿದ ಕೂದಲು ದುರ್ಜಟಿ ಯಾಗಲು |
ಹೊತ್ತಿದ ತಲೆಯಿಂದ ಹಣೆ ಉರಿಗಣ್ಣಾದ |
ಇತ್ತಿ ಹೊದಿಯಲಿಲ್ಲಾದೀ ಭಸ್ಮ ಲೇಪನಾ |
ಮೆತ್ತಿದ ಗುಣದಿಂದ ಮೈ ಯಲ್ಲ ಬೆಳ್ಚಾದಾ |
ಎತ್ತ ನೇವುವನು ಭೂತ ಗಣಾ |
ಯೋಗಿ - ಕು |
ಲೋತ್ತ ಮನೆನಿಸಿದನು ಇಂಥ |
ಹತ್ತು ಭುಜವ ತಾಳಿ ದೈದು ಮೊರೆಯುಗವ 1
ಶರಥಿ ಮಥನದಲ್ಲಿ ಸಲೆ ವಿಷ ಹೊರಡಲಿ |
ಸುರರ ಮಾತು ಕೇಳಿ ಶೀಘ್ರದಿ ಸುರಿಯಲಿ |
ಉರಿಹೆಚ್ಚಿ- ಮೈಯ್ಯಲಿ ಉಬ್ಬಸ ಗೊಳುತಲಿ |
ಸುರಗಂಗಿಯ ಹೊತ್ತ ಸೀತಾಂಶು ಕಳೆವತ್ತ |
ಮರುಳವೆ ತಿರುಗುವ ಮತ್ತೆ ಭೋಳಾದೇವ |
ತ್ವರಿತವ ಕೋಪದಯ ಮನಿಯೊಳು ಹಿಡಿದಿಹ |
ಸುರರಿಗೆ ವಲಿದಿಹನು ಬೇಡಿದ |
ವರಗಳನ್ನು ಕೊಡತಿಹನು ಬೆನ್ನಟ್ಟಿ |
ಬರೆ ದುಷ್ಟ ಓಡಿದನು ಶ್ರೀ ವಿಷ್ಣು |
ಕರುಣದಿ ಶರೆಯ ಬಿಡಿಸೆ ಕೊಂಡವನಿಗೆ 2
ಕರಿಚರ್ಮ ತಾಳಿದಾ ಕಾಡೊಳು ಸೇರಿದಾ |
ಉರಗ ಭೂಷಣನಿವ ಊಧ್ರ್ವರೇತಾದವ |
ಹೊರೆ ಹುಲಿದೊಗಲಾ ಹಾಸಿಗೆ ಮಾಡಿದಾ |
ಕೊರಳಳು ರುಂಡಮಾಲಾ ಕರದೊಳು ಕಪಾಲಾ |
ಧರಿಸಿದ ನೀತನು ದೊರೆಯಲ್ಲದಾತನು |
ನೆರೆದುಣ - ಲುಡಿಲಿಲ್ಲಾ ನರಸುರ ರೊಳಗಲ್ಲಾ |
ಪರಕ ಪರೆನಿಸುವರು ಸ್ಮರಿಸಿದಾ ಆ
ಗುರುವರ ಮಹಿಪತಿ ಪ್ರಭು ಸಾಂಬನೆಂಬವನಿಗೆ 3