ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಧರ್ಮದ ನೀತಿಯ ಅರಿತೇನು ಮರ್ಮದ ರೀತಿಯ ತಿಳಿದೇನು ಪ ಧರ್ಮಕರ್ಮಗಳು ಹರಿಗರ್ಪಣವೆಂದು ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ ಗಂಗಾಸ್ನಾನವ ಮಾಡಿದರೇನು ಅಂಗುಲಿಯೂರುವ ಯೋಗದೊಳೇನು ಪಂಗನಾಮ ಬೂದಿಯ ಬಳಿದೇನು ರಂಗನ ಸ್ಮರಿಸದ ಮನವಿದ್ದೇನು 1 ದೇಶ ದೇಶಂಗಳ ತಿರುಗಿದರೇನು ಆಶೆಯ ಬಿಡದ ಕಾಷಾಯದಿಂದೇನು ಕಾಶಿರಾಮೇಶ್ವರಕೋಡಿದರೇನು ಶ್ರೀಶನನಾಮವೇ ಗತಿಯೆನದವನು 2 ಚಿತ್ತದಿ [ನೆನೆದರೆ] ಹರಿ ಕಿರಿದೇ ಸತ್ತು ಹುಟ್ಟುವುದೇ ಜಗದೊಳು ಹಿರಿದೇ ಎತ್ತೆತ್ತಲು ಹರಿಯಿಹನೆನಬಾರದೇ ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಿಲ್ವಪತ್ರೆಯ ಪೂಜೆಗೊಲಿವನು ಜಗದ್‍ವಲ್ಲಭನಾದ ರಾಮೇಶ್ವರನು ಪ ಕೋಟಿ ಕನ್ಯಾದಾನವ ಮಾಡಿದ ಫಲಕೋಟಿ ತುರಗದಾನದ ಫಲವುಕೋಟಿ ಸಂಖ್ಯಾ ಗಜದಾನದ ಫಲ ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ 1 ಕೋಟಿ ಗಂಗಾಸ್ನಾನವ ಮಾಡಿದ ಫಲಕೋಟಿ ಪ್ರಯಾಗ ಸ್ನಾನದ ಫಲವುಕೋಟಿ ಗೋದಾನದ ಫಲ ಬರುವುದು ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ2 ಲಕ್ಷ ಪಂಚಾಕ್ಷರಿ ಜಪವ ಮಾಡಿದ ಫಲಲಕ್ಷಭೂಮಿಯ ಪ್ರದಕ್ಷಿಣ ಫಲವುಲಕ್ಷಾಶ್ವಮೇಧಯಾಗವ ಮಾಡಿದ ಫಲತ್ರ್ಯಕ್ಷಗೊಂದೆ ಬಿಲ್ವಪತ್ರೆಯೇರಿಸಿದರೆ 3 ವೇದಪುರಾಣವ ಪಠಿಸಿದ ಫಲ ಸರ್ವಮೇದಿನಿ ದಾನವನಿತ್ತ ಫಲವುಭೂದಿವಿಜರ ಸಂರಕ್ಷಿಸಿದ ಫಲ ಶ್ರೀಮಾದೇವಗೇಕ ಬಿಲ್ವವನೇರಿಸಿದರೆ4 ಸೋಮವಾರದ ದಿನ ನೇಮದಿಂದಲಿ ಬಹುಕೋಮಲ ಬಿಲ್ವಪತ್ರೆಗಳ ತಂದುಶ್ರೀ ಮಹಾದೇವಗರ್ಪಿಸಿದಂಥ ಭಕ್ತರ್ಗೆರಾಮೇಶಲಿಂಗ ಮುಕ್ತಿಯನೀವನು 5
--------------
ಕೆಳದಿ ವೆಂಕಣ್ಣ ಕವಿ
ವಾಣಿ ಬಾರೆ ಬೇಗ ವದನದಿ ವಾಣಿ ಬಾರೆ ಬೇಗ ಪ. ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ. ಹೃದಯ ಮಂದಿರದಿಲಿದು ಸುವರ್ಣದ ಪದುಮ ಮಂಟಪಕೆ ಮುದವ ಬೀರುತೆನ್ನ ವದನದಿ ಸೇರುತ ಮುದ ಸುವಾಣಿಯ ಚದುರೆ ನುಡಿಸುವ ಶುಕವಾಣಿ 1 ಮಂಗಳ ಮಹಿಮನ ಅಂಗುಟದಿಂ ಬಂ ದಂಬರದಿಂದುದಿಶಿದಾಮರ ತರಂಗಿಣಿ ಗಂಗಾಸ್ನಾನವ ಮಾಡಿಶಿ ನಿನಗೆ ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ 2 ಭಕ್ತಿಯರಿಶಿಣ ಯುಕ್ತಿಯ ಕುಂಕುಮ ಶಕ್ತಿಯ ಗಂಧವ ಪರಶಕ್ತಿಯ ಪೂವನು ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ 3
--------------
ಸರಸ್ವತಿ ಬಾಯಿ