ಒಟ್ಟು 10 ಕಡೆಗಳಲ್ಲಿ , 10 ದಾಸರು , 10 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದುಸ್ನಾನ ಇದುಸ್ನಾನ ಇದುಸ್ನಾನವಯ್ಯ ಸದಮಲಜ್ಞಾನಿಗಳು ಮನವೊಪ್ಪಿ ಮಾಡ್ವ ಪ ಇಟ್ಟು ಹಂಗಿಸದ್ದೆ ಸ್ನಾನ ಕೊಟ್ಟು ಕುದಿಯದ್ದೆ ಸ್ನಾನ ಕೊಟ್ಟದ್ದು ಕೊಡುವುದೇ ಶಿಷ್ಟ ತುಂಗಾಸ್ನಾನ ನಿಷ್ಠರಾಡದ್ದೆ ಸ್ನಾನ ದುಷ್ಟಸಂಗಳಿವುದೇ ಸ್ನಾನ ಶಿಷ್ಟಜನಸಂಗವೇ ನಿಜ ಕೃಷ್ಣಾಸ್ನಾನ 1 ಭವ ಅದು ಸ್ನಾನ ಕ್ಷೀರಸಾಗರ ಸ್ನಾನ ರಾಗನೀಗ್ವುದೆ ಸ್ನಾನ ಜಾಗರಣ ಸದಾಸ್ನಾನ ಭಾಗವತರೊಲುಮೆ ನಿಜ ಭಾಗೀರಥೀಸ್ನಾನ 2 ಮರೆವ ತರಿವುದೆ ಸ್ನಾನ ಅರಿವು ತಿಳಿವುದೆ ಸ್ನಾನ ಪರಮಜ್ಞಾನ ನಿಜ ಸುರಗಂಗಾಸ್ನಾನ ಕರುಣ ಪಡೆವುದೆ ಸ್ನಾನ ಮರಣಗೆಲಿವುದೆ ಸ್ನಾನ ಹರಿದಾಸರೊಡನಾಟ ಸರಸ್ವತೀ ಸ್ನಾನ 3 ವಾದನೀಗ್ವುದೆ ಸ್ನಾನ ಭೇದ ಅಳಿವುದೆ ಸ್ನಾನ ಮಾಧವನ ಕಥಾಶ್ರವಣ ಸದಾ ಯಮುನಾ ಸ್ನಾನ ವೇದವನರಿವುದೆ ಸ್ನಾನ ಬೋಧಪಡೆವುದೆ ಸ್ನಾನ ಸಾಧುಸಜ್ಜನಸೇವೆ ಗೋದಾವರೀಸ್ನಾನ 4 ನೇಮನಿತ್ಯವೆ ಸ್ನಾನ ತಾಮಸ್ಹರಣವೆ ಸ್ನಾನ ಕಾಮತೊಳೆವುದೆ ನಿಜ ಭೀಮಾನದೀಸ್ನಾನ ಕ್ಷೇಮಸಾಗರ ತ್ರಿಭೂಮಿಯೊಳಧಿಕ ಶ್ರೀ ರಾಮನಡಿಭಕುತಿಮುಕ್ತಿ ಹೇಮಾನದೀಸ್ನಾನ 5
--------------
ರಾಮದಾಸರು
ಉದಿಸೀದಾ ರವಿಯು ತಾನುದಿಸಿದ ಪ ಉದಿಸಿದ ರವಿಯು ತಾನೆನಿಸೀ | ಗುರುಮುದಮುನಿ ಮತವ ವಿಸ್ತರಿಸೀ | ಆಹಬುಧಜನರಂತಸ್ಥ ಬಹು ವಿಧ ತಿಮಿರವಒದೆದು ಛೇದಿಸುವಂಥ ವಿಜಯಾರ್ಯ ತರಣಿಯು ಅ.ಪ. ಸುರಮುನಿ ಪಾದವ ಭಜಿಸೀ | ಯುಗವೆರಡರೊಳ್ ಸುರಲೀಲ ನೆನಿಸೀ | ಯುಗಮೂರರೊಳ್ ನಿಕಂಪನೆನಿಸೀ | ಯುಗಮೂರೊಂದರಲಿ ಕರುವೆನಿಸೀ | ಆಹಪುರಂದರ ದಾಸರ ಗೃಹದೊಳಗುದಿಸುತ 1 ಕರಣೀಕ ಶೀನಪ್ಪ ತನು | ತನ್ನವರಪ್ರಿಯ ಸತಿಕೂಸಮ್ಮನು | ಬಲುಪರಿಪರಿ ಸೇವಿಸಿ ವರವನು | ಪೊಂದಿಎರಡೊಂದು ತನಯರುಗಳು | ಆಹಪರಿ ಪಾಲಿಸುತ್ತಲಿ ಪರಿಪರಿ ಭವಣೇಲಿಪೊರೆಯವು ಉದರವ ಸರಿಯಿತು ಕಾಲವು 2 ಬಡತನ ಭವಣೇಲಿ ಬಂದೂ | ಒಂದುಕುಡಿತೆ ಗಂಜಿಗಾಗಿ ನೊಂದೂ | ಛಾಗಿಒಡೆಯನ ಮನೆಯೊಳಗಂದೂ | ಮೆದ್ದುಒಡಲ ತುಂಬಿಕೊಂಡು ಬಂದೂ | ಆಹಬಡಗ ದಿಕ್ಕಿನ ಗಂಗೆ ಮಡುವ ಕಾಣುವೆನೆಂದುಸಡಗರದಲಿ ಪೋದ ಬಡ ಕೂಸೀಮಗದಾಸ 3 ವತ್ಸರ ತರಳ | ತನ್ನಹಿರಯರಿಗ್ಹೇಳದೆ ಪೊಳಲ | ಬಿಟ್ಟುತಿರುಗುತ ತೀರ್ಥ ಕ್ಷೇತ್ರಗಳ | ಮಿಂದುಮರಳಿ ತಾ ಮಾತಾ ಪಿತೃಗಳ | ಆಹಬೆರೆದು ಮಾನವರಂತೆ ಸಂಸಾರ ವೃತ್ತಿಲಿಚರಿಸಿದವೆರಡುಂಟು ವರುಷವ ಕಳೆಯುತ 4 ಮತ್ತೆ ತಾ ವೈರಾಗ್ಯದಲ್ಲಿ | ಹರಿಪೆತ್ತ ಗಂಗೆಯ ಸ್ನಾನದಲ್ಲಿ | ಮನತೆತ್ತು ಗಯಾದೇಶದಲ್ಲಿ | ಪಿಂಡವಿತ್ತು ವಾರಣಾಸಿಯಲ್ಲಿ | ಆಹಉತ್ತಮರ ಸಂಗ ನಿತ್ಯಸ್ನಾನ ಸಂಧ್ಯಕೃತ್ಯವನೆಸಗಿ ಸುಚಿತ್ತದಿ ಮಲಗಿರೆ 5 ಸತ್ಯ ಸ್ವಪ್ನದಿ ನರಹರಿಯು | ತನ್ನಪುತ್ರನೆಬ್ಬಿಸಿದಂತೆ ಪರಿಯು | ದಾಸರಂತೆ ರೂಪವ ತಾಳಿ ಹರಿಯು | ತನ್ನಹತ್ತಿರ ಕರೆಯುತ ಧೊರೆಯು | ಆಹಚಿತ್ತಜ ಪಿತ ಪೆತ್ತ ಸರಿತವ ದಾಂಟಿಸಿಉತ್ತಮ ಕಾಶಿಯ ವ್ಯಾಸರ ಕಂಡವ 6 ಪರಿ ಪರಿಯ | ಆಹಅಚ್ಚ ಕವನ ಪೇಳಿ ನೆಚ್ಚಿನ ಮನದವರಸ್ವಚ್ಛತನಕೆ ತಿದ್ದಿ ಅಚ್ಚ್ಯುತಗಿಂತವ 7 ಎರಡೊಂದನೇ ಬಾರಿ ಪೋಗಿ | ಕಾಶಿಪುರದಿ ಗಂಗಾಸ್ನಾನಕಾಗಿ | ಕೂಡೆಸುರನದಿ ಪೆಚ್ಚಿ ಮೇಲಾಗಿ | ಸಿರಿವರದ್ವಿಜಗಭಿಷೇಕವಾಗಿ | ಆಹಸರಿತವು ಮುಂಚಿನ ಪರಿಯಂತೆ ಪ್ರವಹಿಸೆಸುರನರೋರುಗರೆಲ್ಲ ಪರಿಪರಿ ಕೊಂಡಾಡೆ 8 ತುತಿಸುತಲಲ್ಲಿಂದ ಸೇತು | ಸ್ನಾನರತಿಯಿಂದ ಗೈಯ್ಯುತ ಹೊತ್ತು | ಹರಿಕಥೆಗಳ ಪೇಳಿ ಯಾವತ್ತು | ಜನತತಿಗೆ ಸನ್ಮಾರ್ಗವನಿತ್ತು | ಆಹತೀರ್ಥ ಕ್ಷೇತ್ರಂಗಳ ನತಿಸುತ ದಶಮತಿಮತವ ಬೀರಿದನೀತ ಸುಜನರ ಪೊರೆಯಲು 9 ಸಾರ | ಸೊಳ್ಹಾದಿಗಳ್ ಮೊದಲಾದ ಹಾರ | ದಿಂದಭೇದ ವಾದಿಯ ಮತೋದ್ಧಾರ | ಗೈದುಶ್ರೀಶ ಗೊಪ್ಪಿಸೀದ ಧೀರ | ಆಹನಾದ ಮೂರುತಿ ಗುರು ಗೋವಿಂದ ವಿಠಲನಪಾದವ ಸ್ಮರಿಸುತ್ತ ಮೋದವ ಪಡುತ್ತಿದ್ದ 10
--------------
ಗುರುಗೋವಿಂದವಿಠಲರು
ದೇವ ಬೆಳಗಾಯಿತೋ ಎನ್ನಯ ಸೇವಾ ಪ ಸ್ವೀಕರಿಸೋ ಮಹಾನುಭಾವ ದೇವ ಅ.ಪ ಮಧುರ ಗಾನವೇ ಗಂಗಾಸ್ನಾನ ಹೃದಯ ಶುದ್ಧಿಯೇ ಬದರಿಸ್ನಾನ ಬದಿಯಲಿರುವ ಭಕುತರ ಸಹವಾಸವೇ ನದಿನದಗಳವಗಾಹನ ಸ್ನಾನವೋ 1 ಹಾಲಿಗೆ ಕರದಲಿ ಥಾಲಿಯ ಪಿಡಿದು ಕೋಲಾಹಲ ಕಲಭಾಷಣ ಮಾಡುವ ಬಾಲರ ನಗುಮೊಗ ನೋಡಲು ಕೃಷ್ಣನ ಲೀಲೆಯ ಸಂದರ್ಶನಾನಂದವೋ 2 ಮಲ್ಲಿಗೆ ಸಂಪಿಗೆ ಜಾಜಿ ಸೇವಂತಿಗೆ ಕುಸುಮ ರಾಶಿಯ ಚಿಲ್ಲೆ ಪಲ್ಲೆಗಳ ಬಹುರೂಪದಿ ಶ್ರೀ ನಲ್ಲ ನಿನಗೆ ಸಲ್ಲಿಸುವುದೇ ಭಾಗ್ಯವೋ 3 ತಾತನೆಂದು ಮೊರೆಯಿಡುವರು ನೀ ಅನ್ನ ದಾತನೆಂದು ಮೊರೆಯುತಿಹರೋ ತಾತನ ಕಿವಿಗೀ ಮಾತನು ತಿಳಿಸಲು ದೂತನು ನಾ ಕಾದಿಹೆನೊ ಪ್ರಸನ್ನನೇ 4
--------------
ವಿದ್ಯಾಪ್ರಸನ್ನತೀರ್ಥರು
ಧರ್ಮದ ನೀತಿಯ ಅರಿತೇನು ಮರ್ಮದ ರೀತಿಯ ತಿಳಿದೇನು ಪ ಧರ್ಮಕರ್ಮಗಳು ಹರಿಗರ್ಪಣವೆಂದು ನಿರ್ಮಲಚಿತ್ತದಿ ಧ್ಯಾನಿಸದವನು ಅ.ಪ ಗಂಗಾಸ್ನಾನವ ಮಾಡಿದರೇನು ಅಂಗುಲಿಯೂರುವ ಯೋಗದೊಳೇನು ಪಂಗನಾಮ ಬೂದಿಯ ಬಳಿದೇನು ರಂಗನ ಸ್ಮರಿಸದ ಮನವಿದ್ದೇನು 1 ದೇಶ ದೇಶಂಗಳ ತಿರುಗಿದರೇನು ಆಶೆಯ ಬಿಡದ ಕಾಷಾಯದಿಂದೇನು ಕಾಶಿರಾಮೇಶ್ವರಕೋಡಿದರೇನು ಶ್ರೀಶನನಾಮವೇ ಗತಿಯೆನದವನು 2 ಚಿತ್ತದಿ [ನೆನೆದರೆ] ಹರಿ ಕಿರಿದೇ ಸತ್ತು ಹುಟ್ಟುವುದೇ ಜಗದೊಳು ಹಿರಿದೇ ಎತ್ತೆತ್ತಲು ಹರಿಯಿಹನೆನಬಾರದೇ ಕರ್ತಶ್ರೀ ಮಾಂಗಿರಿರಂಗನ ನೆನೆಯದೆ3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್
ಬಿಲ್ವಪತ್ರೆಯ ಪೂಜೆಗೊಲಿವನು ಜಗದ್‍ವಲ್ಲಭನಾದ ರಾಮೇಶ್ವರನು ಪ ಕೋಟಿ ಕನ್ಯಾದಾನವ ಮಾಡಿದ ಫಲಕೋಟಿ ತುರಗದಾನದ ಫಲವುಕೋಟಿ ಸಂಖ್ಯಾ ಗಜದಾನದ ಫಲ ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ 1 ಕೋಟಿ ಗಂಗಾಸ್ನಾನವ ಮಾಡಿದ ಫಲಕೋಟಿ ಪ್ರಯಾಗ ಸ್ನಾನದ ಫಲವುಕೋಟಿ ಗೋದಾನದ ಫಲ ಬರುವುದು ಶಶಿಜೂಟಗೊಂದೆ ಬಿಲ್ವಪತ್ರೆಯೇರಿಸಿದರೆ2 ಲಕ್ಷ ಪಂಚಾಕ್ಷರಿ ಜಪವ ಮಾಡಿದ ಫಲಲಕ್ಷಭೂಮಿಯ ಪ್ರದಕ್ಷಿಣ ಫಲವುಲಕ್ಷಾಶ್ವಮೇಧಯಾಗವ ಮಾಡಿದ ಫಲತ್ರ್ಯಕ್ಷಗೊಂದೆ ಬಿಲ್ವಪತ್ರೆಯೇರಿಸಿದರೆ 3 ವೇದಪುರಾಣವ ಪಠಿಸಿದ ಫಲ ಸರ್ವಮೇದಿನಿ ದಾನವನಿತ್ತ ಫಲವುಭೂದಿವಿಜರ ಸಂರಕ್ಷಿಸಿದ ಫಲ ಶ್ರೀಮಾದೇವಗೇಕ ಬಿಲ್ವವನೇರಿಸಿದರೆ4 ಸೋಮವಾರದ ದಿನ ನೇಮದಿಂದಲಿ ಬಹುಕೋಮಲ ಬಿಲ್ವಪತ್ರೆಗಳ ತಂದುಶ್ರೀ ಮಹಾದೇವಗರ್ಪಿಸಿದಂಥ ಭಕ್ತರ್ಗೆರಾಮೇಶಲಿಂಗ ಮುಕ್ತಿಯನೀವನು 5
--------------
ಕೆಳದಿ ವೆಂಕಣ್ಣ ಕವಿ
ವಾಣಿ ಬಾರೆ ಬೇಗ ವದನದಿ ವಾಣಿ ಬಾರೆ ಬೇಗ ಪ. ಜಾಣೆ ಕಲ್ಯಾಣಿ ಬ್ರಹ್ಮನ ರಾಣಿ ಭಾರತಿ ವಾಣಿ ಅ.ಪ. ಹೃದಯ ಮಂದಿರದಿಲಿದು ಸುವರ್ಣದ ಪದುಮ ಮಂಟಪಕೆ ಮುದವ ಬೀರುತೆನ್ನ ವದನದಿ ಸೇರುತ ಮುದ ಸುವಾಣಿಯ ಚದುರೆ ನುಡಿಸುವ ಶುಕವಾಣಿ 1 ಮಂಗಳ ಮಹಿಮನ ಅಂಗುಟದಿಂ ಬಂ ದಂಬರದಿಂದುದಿಶಿದಾಮರ ತರಂಗಿಣಿ ಗಂಗಾಸ್ನಾನವ ಮಾಡಿಶಿ ನಿನಗೆ ರಂಗನ ದಯಸೈತ ಪೀತಾಂಬರನುಡಿಸುವೆ ವಾಣಿ 2 ಭಕ್ತಿಯರಿಶಿಣ ಯುಕ್ತಿಯ ಕುಂಕುಮ ಶಕ್ತಿಯ ಗಂಧವ ಪರಶಕ್ತಿಯ ಪೂವನು ಮುಕ್ತಿದಾತೆ ಪೂಜಿಪೆ ಶ್ರೀ ಶ್ರೀನಿವಾಸ ಮುಕ್ತಿಪಥದಪೂರ್ವ ಮುತ್ತಿನರಗಿಣಿ ವಾಣಿ 3
--------------
ಸರಸ್ವತಿ ಬಾಯಿ
ಹರಿಧ್ಯಾನವೆ ಗಂಗಾಸ್ನಾನ ವಿಷ- ಯಾನುಭವ ಜಯವೆ ಮೌನ ಪ್ರಾಣೇಶನೆ ಸರ್ವೋತ್ತಮ ವೇದ ಪು- ರಾಣ ಪ್ರಮಾಣವೆ ಜ್ಞಾನ1 ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ- ವೃತ್ತಿಯೊಳಿರುವುದೆ ಮಾನ ಸತ್ಯಾತ್ಮನ ರೂಪದೊಳು ಭೇದರಾ- ಹಿತ್ಯವೆ ಸರ್ವಸಮಾನ2 ಕರ್ತ ಲಕ್ಷ್ಮೀನಾರಾಯಣನ ಪಾದ ಭಕ್ತಿ ವಿರಹಿತನೆ ಹೀನ ಚಿತ್ತಜೋದ್ಭವ ಪರಾತ್ಪರ ತ್ರಿಜಗವು ಪ್ರತ್ಯಗಾತ್ಮನಾಧೀನ 3
--------------
ತುಪಾಕಿ ವೆಂಕಟರಮಣಾಚಾರ್ಯ
139-6ಶ್ರೀ ರಮಣಿ ಕರಕಮಲ ಪೂಜಿತ ಪದಾಂಬೋಜಸರಸಿಜಾಸನ ಶಿವಾದ್ಯಮರ ಜನವಿನುತಉರುಗುಣಾರ್ಣವ ಜಗಜ್ಜನ್ಮಾದಿಕರ್ತ ನರ-ಹರಿಗೆ ಪ್ರಿಯ ಜಗನ್ನಾಥದಾಸಾರ್ಯ ಶರಣು ಪ.ಸ್ವರ್ಣಪುರಿಯಲಿ ಜಗತ್ ಪ್ರಖ್ಯಾತ ಸ್ವಾಮಿಗಳುಘನಮಹಿಮ ಸೂರಿವರ ಸತ್ಯಬೋಧಾರ್ಯರಸನ್ನಮಿಸಿ ಈ ಮಹಾಮೂರ್ತಿಗಳಾಹ್ವಾನದಿದಿನ ಕೆಲವು ನಿಂತರು ಜಗನ್ನಾಥ ಆರ್ಯ 1ಮೂರ್ಜಗವು ಅರಿವುದು ಸತ್ಯ ಬೋಧರ ಮಹಿಮೆವಾಜಿಮುಖ ಕೋಡ ನೃಹರಿ ರಾಮಪ್ರಿಯರುಪ್ರಜ್ವಲಿಪ ಸೂರ್ಯನ್ನ ರಾತ್ರಿಯಲಿ ತೋರಿಹರುಭಜಕರಸುರಧೇನುನಿವ್ರ್ಯಾಜ ಕರುಣೆ2ಶಿಷ್ಯರ ಸಹ ಜಗನ್ನಾಥದಾಸರು ತಮ್ಮನಿಯಮಗಳ ತಪ್ಪದೇ ಭಾಗವತಧರ್ಮಕಾಯವಾಙ್ಮನ ಶುದ್ಧಿಯಲಿ ಜ್ಞಾನ ಭಕ್ತಿಸಂಯುತದಿ ಮಾಳ್ಪುದು ಕಂಡರು ಮುನಿಗಳು 3ಹರಿದಾಸವರ ಜಗನ್ನಾಥದಾಸಾರ್ಯರಲಿಹರಿಯ ಒಲಿಮೆ ಅಪರೋಕ್ಷದ ಮಹಿಮೆನೇರಲ್ಲಿ ತಾ ಕಂಡು ಬಹುಪ್ರೀತಿ ಮಾಡಿದರುಹರಿಪ್ರಸಾದದ ಸವಿಯ ಅರಿತ ಆ ಗುರುಗಳು 4ಸ್ವರ್ಣಪುರಿಯಿಂದ ಜಗನ್ನಾಥದಾಸಾರ್ಯರುದಿಗ್ವಿಜಯದಿಂದಲಿ ಶಿಷ್ಯ ಜನಗುಂಪುಸೇವಕರ ಸಹ ಊರು ಊರಿಗೆ ಪೋದರುಆ ಎಲ್ಲ ಕ್ಷೇತ್ರದಲು ಧರ್ಮ ಪ್ರಚಾರ 5ಧರ್ಮ ಪ್ರಚಾರ ಹರಿಭಜನೆ ಪೂಜಾದಿಗಳುನಮಿಸಿ ಬೇಡುವವರ ಅನಿಷ್ಟ ಪರಿಹಾರಕರ್ಮಜ ದಾರಿದ್ರ್ಯಾದಿಗಳ ಕಳೆದು ಸಂಪದವಧರ್ಮ ಆಚರಣೆ ಬುದ್ಧಿಯ ಒದಗಿಸಿದರು 6ಸುರಪುರಾದಿ ಬಹು ಸ್ಥಳದಲ್ಲಿ ಪ್ರಮುಖರುಹರಿಭಕ್ತರು ಮಂಡಲೇಶ್ವರರು ಇವರಚರಣಕೆರಗಿ ಬಹು ಅನುಕೂಲ ಕೊಂಡರುಹರಿವಾಯು ಒಲಿಮೆ ಎಷ್ಟೆಂಬೆ ದಾಸರಲಿ 7ವರಪ್ರದ ವರದಾ ತೀರದಲಿ ಸಶಿಷ್ಯಧೀರೇಂದ್ರ ಯತಿವರ್ಯರ ಕಂಡು ನಮಿಸಿಆ ರಿತ್ತಿ ಕ್ಷೇತ್ರದಲಿ ವಾಸಮಾಡಿಹರುಧೀರೇಂದ್ರ ತೀರ್ಥರ ಅನುಗ್ರಹ ಕೊಂಡು 8ಸೂರಿಕುಲ ತಿಲಕರು ಉದ್ದಾಮ ಪಂಡಿತರುಧೀರೇಂದ್ರ ಗುರುಗಳು ಕಾರುಣ್ಯಶರಧಿಊರೊಳಗೆ ಹನುಮನ ಗುಡಿ ಇಹುದು ಪಾಶ್ರ್ವದಿಇರುವ ರಸ್ತೆಯ ಮೇಲೆ ದಾಸರ ಮನೆಯು 9ಸೋದಾಪುರ ಪೋಗೆ ತ್ರಿವಿಕ್ರಮ ದೇವರಮಂದಿರದ ಧ್ವಜಸ್ತಂಭದಲ್ಲಿವಾದಿರಾಜರು ಹಂಸಾರೂಢರಾಗಿರುವವರ್ಗೆವಂದಿಸಿ ತ್ರಿವಿಕ್ರಮರಾಯಗೆ ನಮಿಸಿದರು 10ಬದರಿಯಿಂದಲಿ ಈ ಸರಥ ತ್ರಿವಿಕ್ರಮನಭೂತರಾಜರ ಕೈಯಿಂದೆತ್ತಿ ತರಿಸಿಸೋದಾಪುರದಲ್ಲಿ ಪ್ರತಿಷ್ಠೆ ಮಾಡಿಹರುವಾದಿರಾಜರು ಭಾವಿಸಮೀರ ಲಾತವ್ಯ 11ಜಗನ್ನಾಥದಾಸರು ತ್ರಿವಿಕ್ರಮಗೆ ವಂದಿಸಿಅಗಾಧ ಸುಪವಿತ್ರೆ ಧವಳಗಂಗಾಸ್ನಾನಭಕುತಿಯಿಂ ಮಾಡಿ ಶಿವಹನುಮ ಕೃಷ್ಣರಿಗೆಬಾಗಿ ಅಶ್ವತ್ಥಸ್ಥರಿಗೆ ನಮಿಸಿದರು 12ಬಯಲಲ್ಲಿ ವೃಂದಾವನಗಳಲಿ ಗುರುಗಳಿಗೆವಿನಯದಿ ವಂದಿಸಿ ಭೂತನಾಥಗೆ ಬಾಗಿಶ್ರೀವ್ಯಾಸ ದೇವನಿಗೆ ಸನ್ನಮಿಸಿ ವೇದವೇದ್ಯರಿಗು ವಾದಿರಾಜರಿಗು ನಮಿಸಿದರು 13ಚತುದ್ರ್ವಾರ ಗೃಹದಲ್ಲಿ ಪಂಚವೃಂದಾವನವುಮಧ್ಯ ವೃಂದಾವನದಿ ಶ್ರೀವಾದಿರಾಜರುವೃಂದಾವನ ಮಹಿಮೆ ಚೆನ್ನಾಗಿ ತಿಳಿಯದಕೆಭಕ್ತಿ ಶ್ರದ್ಧೆಯಲಿ ನೋಡಿ ವೃಂದಾವನಾಖ್ಯಾನ 14ಹರಿಹರ ಕ್ಷೇತ್ರವು ಮದ್ದೂರು ಅಬ್ಬೂರುಪುರುಷೋತ್ತಮ ಬ್ರಹ್ಮಣ್ಯರ ವಂದಿಸಿಶ್ರೀರಂಗನಾಥನಿಗೆ ಎರಗಿ ಮಹಿಷೂರುಗರಳುಂಡ ಈಶ್ವರನ ಕ್ಷೇತ್ರಕ್ಕೆ ಪೋದರು 15ಕೇಶವನ ಪೂಜಿಸುತ ಪರ್ವತ ಗುಹೆಯಲ್ಲಿವಾಸಮಾಡುವ ಮಹಾ ಕರುಣಾಂಬುನಿಧಿಯುದಾಸಜನಪ್ರಿಯ ಶ್ರೀ ಪುರುಷೋತ್ತಮರಂಘ್ರಿಬಿ¸ಜಯುಗಳದಿ ನಾ ಶರಣು ಶರಣಾದೆ 16ಮಹಿಷೂರು ರಾಜ್ಯದ ಸರ್ಕಾರಿನಲ್ಲಿಮಹೋನ್ನತ ಸ್ಥಾನ ವಹಿಸಿದಧಿಕಾರಿಮಹಾಪಂಡಿತರುಗಳ ಸಭೆಯನ್ನು ಕೂಡಿಸಿವಿಹಿತದಿ ದಾಸರ ಪೂಜೆ ಮಾಡಿದನು 18ನಿರ್ಭಯದಿ ದಾಸರು ಘನತತ್ವ ವಿಷಯಗಳಸಭ್ಯರಿಗೆ ತಿಳಿಯದಿದ್ದವು ಸಹ ವಿವರಿಸಿದಸೊಬಗನ್ನು ಕಂಡು ವಿಸ್ಮಿತರು ಆದರು ಆಸಭೆಯಲ್ಲಿ ಕುಳಿತಿದ್ದ ದೊಡ್ಡ ಪಂಡಿತರು 19ಭಾಗವತಧರ್ಮದ ಪದ್ಧತಿ ಅನುಸರಿಸಿಭಗವಂತನ ಭಜನೆ ಸಭ್ಯರ ಮುಂದೆಆಗ ದಾಸರ ಅಪರೋಕ್ಷದ ಮಹಿಮೆರಂಗನೇ ಸಭ್ಯರಿಗೆ ತೋರಿಸಿಹನು 20ದಾಸರು ಶಿಷ್ಯರೊಡೆ ಯಾತ್ರೆ ಮಾಡಿದ್ದುಮೈಸೂರು, ಕೊಂಗು, ಕೇರಳ, ಚೋಳ, ಪಾಂಡ್ಯದೇಶಗಳು ಎಲ್ಲೆಲ್ಲೂ ಮರ್ಯಾದೆ ಸ್ವೀಕರಿಸಿಈಶಾರ್ಪಣೆ ಸರ್ವ ವೈಭವವೆನ್ನುವರು 21ಶ್ರೀಪಾದರಾಜರ ನಮಿಸಿ ವೆಂಕಟಗಿರಿಸುಪವಿತ್ರ ಘಟಿಕಾದ್ರಿ ಶ್ರೀಕಂಚಿಉಡುಪಿಶ್ರೀಪನ ಇಂಥಾ ಕ್ಷೇತ್ರಗಳಿಗೆ ಪೋಗಿಸ್ವಪುರಕ್ಕೆ ತಿರುಗಿದರು ಪೂಜ್ಯ ದಾಸಾರ್ಯ 22ಶ್ರೀಪಾದರಾಜರು ಪವಿತ್ರ ವೃಂದಾವನದಿಶ್ರೀಪತಿ ನರಹರಿ ಶಿಂಶುಮಾರನ್ನರೂಪಗುಣ ಕ್ರಿಯಾಮಹಿಮೆ ಧ್ಯಾನಿಸುತ ಇಹರುತಿರುಪತಿಮಾರ್ಗನರಸಿಂಹ ತೀರ್ಥದಲಿ23ಪುರುಷೋತ್ತಮರ ಸುತ ಬ್ರಹ್ಮಣ್ಯರ ಕುವರಶ್ರೀಕೃಷ್ಣ ಪ್ರಿಯತರ ವ್ಯಾಸಯತಿರಾಜಸೂರಿಕುಲ ಶಿರೋರತ್ನ ಶ್ರೀಪಾದರಾಜರಲಿಭಾರಿವಿದ್ಯೆಕಲಿತು ಪ್ರಖ್ಯಾತರಾದರು24ಹರಿರೂಪ ಗುಣಕ್ರಿಯ ಮಹಿಮೆಗಳ ಚೆನ್ನಾಗಿಪರಿಪರಿ ಸುಸ್ವರ ರಾಗದಲಿ ಕೀರ್ತನೆಸಂರಚಿಸಿ ಪಂಡಿತರು ಪಾಮರರು ಸರ್ವರಿಗುವರಸಾಧು ತತ್ವ ಬೋಧಿಸಿಹರು ದಾಸರು25ವಾರಿಜಾಸನ ಪಿತನು ಪೂರ್ಣ ಪ್ರಜÕರ ಹೃತ್‍ಸ್ಥಶಿರಿ ಪ್ರಸನ್ನ ಶ್ರೀನಿವಾಸನಿಗೆ ಪ್ರಿಯತರರುಪುರಂದರವಿಜಯಗೋಪಾಲದಾಸಾರ್ಯರಚರಣರತ ಜಗನ್ನಾಥ ದಾಸಾರ್ಯ ಶರಣು 26- ಇತಿ ಸಪ್ತಮ ಕೀರ್ತನೆ ಸಂಪೂರ್ಣಂ -
--------------
ಪ್ರಸನ್ನ ಶ್ರೀನಿವಾಸದಾಸರು
ಯದುವೀರ ಒದಗೆನ್ನ ನಾಲಿಗೆಗೆಉದಯಾದಿ ಅಸ್ತಾಂತ ಆವಾವಾಗೆ ಪ.ನಿನ್ನ ನಾಮದ ಸ್ಮರಣೆಯೆ ಶುಭಕರ್ಮವುಉನ್ನತ ಸಂಕೀರ್ತನೆ ಶತಕ್ರತುವುಪುಣ್ಯಗಂಗಾಸ್ನಾನದ ಫಲಕಧಿಕವುಘನ್ನ ಜಪದ ಬೀಜವೆÉ ನಾಮವು 1ಬಂಗಾರದಿಳೆಯಳೆದೊಲಿದೀವ ದಾನದಿಹಿಂಗದೆ ಉಭಯಸ್ಯ ಗೋಶತದಿಶೃಂಗಾರ ಕೋಟಿ ಕನ್ಯಾದಾನಕಧಿಕವುಮಂಗಳಮಹಿಮ ಮುಕುಂದನ ನಾಮವು 2ಧರ್ಮಾರ್ಥ ಕಾಮಮೋಕ್ಷಗಳ ಮೂಲವಿದೆಂದುನಿರ್ಮಲಶ್ರುತಿಸಾರುತಾವೆಂದುಮರ್ಮವರಿತು ನಾಮ ನಂಬಿದೆ ಶೇಷಾದ್ರಿಯಹಮ್ರ್ಯನಿಲಯ ಪ್ರಸನ್ವೆಂಕಟಯ್ಯ 3
--------------
ಪ್ರಸನ್ನವೆಂಕಟದಾಸರು
ಹರಿಧ್ಯಾನವೆ ಗಂಗಾಸ್ನಾನ ವಿಷ-ಯಾನುಭವ ಜಯವೆ ಮೌನಪ್ರಾಣೇಶನೆ ಸರ್ವೋತ್ತಮ ವೇದ ಪು-ರಾಣ ಪ್ರಮಾಣವೆ ಜ್ಞಾನ 1ಮತ್ತರ ಸಂಗ ಪ್ರವೃತ್ತಿಯೊಳಿರದೆ ನಿ-ವೃತ್ತಿಯೊಳಿರುವುದೆಮಾನಸತ್ಯಾತ್ಮನ ರೂಪದೊಳು ಭೇದರಾ-ಹಿತ್ಯವೆ ಸರ್ವಸಮಾನ 2ಕರ್ತಲಕ್ಷ್ಮೀನಾರಾಯಣನಪಾದಭಕ್ತಿ ವಿರಹಿತನೆ ಹೀನಚಿತ್ತಜೋದ್ಭವಪರಾತ್ಪರತ್ರಿಜಗವುಪ್ರತ್ಯಗಾತ್ಮನಾಧೀನ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ