ಸೆರೆಯೊಳಗೆ ಹರಿಸೆರೆಯೆ ಮುಖ್ಯಾ
ಭಾವದೊಳಗೆ ಗುರುಭಾವನÉಯೆ ಮುಖ್ಯಾ ಪ
----ದೊಳಗೆ ಪ್ರಥಮ -----ರಾರÉೀ ಮುಖ್ಯಾ
ಸೇವನೆಯೊಳಗೆ ಪುಣ್ಯ ಸೇವನೆ ಮುಖ್ಯಾ
ದೇವರೊಳಗೆ ವಿಷ್ಣು ದೇವಾರೆ ಮುಖ್ಯಾವು
ಯಾವ ಶಾಸ್ತ್ರಗಳಿಗೂ ವೇದವೇ ಮುಖ್ಯಾ 1
ವನದೊಳು ಫಲವುಳ್ಳಾ -----ಮುಖ್ಯಾ
ದೀನದಾನವರೊಳಗೆ -----ದೀನನೆಂಬುವದೇ ಮುಖ್ಯ
ಜನರೊಳು ಸಾಧು ಸಜ್ಜನರಾದವರೇ ಮುಖ್ಯಾ
ಮನೆಗೆ ಹಿರಿಯನಾದ ಯಜಮಾನನೇ ಮುಖ್ಯಾ 2
ಮಾಸಗಳೊಳು ಚೈತ್ರಮಾಸವೆ ಮುಖ್ಯವು
ವಾಸನೆಯೊಳು ಲಕ್ಷ್ಮೀವಾಸನೆ ಮುಖ್ಯ
ಭೂಸುರರೊಳಗೆಲ್ಲ ಪೂರ್ಣ ಪಂಡಿತರೆ ಮುಖ್ಯ
ವಾಸು ದೇವರಿಗೆ ----ದಾಸನೆ ಮುಖ್ಯ 3
ಸ್ಥಾನದೊಳಗೆ ಗಂಗಾಸ್ಥಾನವೇ ಮುಖ್ಯವು
ಧೇನುಗಳೊಳು ಕಾಮಧೇನುವೇ ಮುಖ್ಯ
ಜ್ಞಾನದಲ್ಲಿ ಹರಿಸರ್ವೋತ್ತಮ ಜ್ಞಾನವೆ ಮುಖ್ಯ
ಗಾನದೊಳಗೆ ಸಾಮಗಾನವೇ ಮುಖ್ಯ 4
ವೃಕ್ಷಗಳೊಳು ತುಲಸೀ ವೃಕ್ಷವೇ ಮುಖ್ಯವು
ಭಿಕ್ಷಗಳೊಳು ಯತಿ ಭಿಕ್ಷವೇ ಮುಖ್ಯವು
ಪಕ್ಷಿಗಳೊಳು ಗರುಡ ¥ಕ್ಷಿಯೇ ಮುಖ್ಯ
ಲಕ್ಷಾಧಿಕಾರರಿಗೆ ಲಕ್ಷ್ಮೀಯೆ ಮುಖ್ಯ 5
ಪರ್ವತಗಳೊಳು ಮೇರು ಪರ್ವತವೆ ಮುಖ್ಯ
ಉರೆಗೆ ಮಳೆ ಬೆಳೆ ಉರುವೆ (ಬರುವೆ?) ಮುಖ್ಯ
ಮರ್ಯಾದೆ ನ್ಯಾಯಗಳಿಗೆ ಹಿರಿಯರಾದವರೇ ಮುಖ್ಯ
ಸರ್ವಾಧಿಕಾರರಿಗೆ ಸರ್ವಸಮತವೆ ಮುಖ್ಯ 6
ಕ್ಷೇತ್ರಗಳೊಳು ಕುರುಕ್ಷೇತ್ರವೆ ಮುಖ್ಯ
ಯಾತ್ರಿಗಳೊಳು ಗಂಗಾಯಾತ್ರಿಯೆ ಮುಖ್ಯ
ಸೂತ್ರಗಳೊಳು---------ಮುಖ್ಯವು
ಸ್ತೋತ್ರಗಳೊಳು ಹರಿಸ್ತೋತ್ರವೇ ಮುಖ್ಯ 7
ಗ್ರಾಮಗಳೊಳು ಸಾಲಿಗ್ರಾಮವೇ ಮುಖ್ಯ
ಭೂಮಿಗಳೊಳು ಪುಣ್ಯ ಭೂಮಿಯೇ ಮುಖ್ಯ
ಆರು-------ಳಿಗೆಲ್ಲ ಆರೋಗ್ಯವೆ ಮುಖ್ಯ
ಕಾಮುಕ ಸ್ತ್ರೀಯರಿಗೆಲ್ಲ ಕಾಮಪುರುಷನೇ ಮುಖ್ಯ 8
ಸನ್ಮಾರ್ಗಗಳೊಳಗೆ ಸನ್ಯಾಸಿ ಮಾರ್ಗವೆ ಮುಖ್ಯ
ಅನಿಮೇಷಾ ಜಾಗರದೊಳಗೆ ಅನಿಮೇಷರೆ ಮುಖ್ಯ
ಧನ್ಯ `ಹೆನ್ನೆ ವಿಠ್ಠಲನ ' ದಯವು ಇದ್ದರೆ ಮುಖ್ಯ 9