(ಕೊಕ್ರಾಡಿ ಸುಬ್ರಹ್ಮಣ್ಯ)
ಕಾಯೊ ಸುಬ್ರಹ್ಮಣ್ಯ ಸಜ್ಜನ-
ಪ್ರೀಯ ಸುರವೇಣ್ಯ ಪ.
ತೋಯಜಾಕ್ಷ ನಿಖಿಲಾಮರಸೇವಿತ
ಶ್ರೇಯಸ್ಕರಫಲದಾಯಕ ಶಂಕರ ಅ.ಪ.
ನಿತ್ಯಾನಂದಕರ ನಿಜಾಶ್ರಿತ-
ವತ್ಸಲ ರಣಶೂರ
ಕೃತ್ತಿವಾಸಸುತ ದೈತ್ಯಾಂತಕ ರಿಪು-
ಮತ್ತಗಜೇಂದ್ರಮೃಗೋತ್ತಮ ಸಂತತ 1
ನಿಗಮಾಗಮವಿನುತ ನೀರಜ-
ದೃಗಯುಗ ಸಚ್ಚರಿತ
ಅಗಜಾಲಿಂಗನ ಅಘಕುಲನಾಶನ
ಸುಗುಣಾಂಬುಧಿ ತ್ರೈಜಗದೋದ್ಧಾರಕ 2
ಅಂಬುಧಿಗಂಭೀರ ಧೀರ ತ್ರೀ-
ಯಂಬಕ ಸುಕುಮಾರ
ತುಂಬುರು ನಾರದಯೋಗಿಸಭಾಂಗಣ-
ಸಂಭಾವಿತ ಚರಣಾಂಬುಜಯುಗಳ 3
ಅಂಗಜ ಶತರೂಪ ಸಮರೋ-
ತ್ತುಂಗಸುಪ್ರತಾಪ
ಗಂಗಾಸುತ ವೇದಾಂಗಪಾರಜ್ಞ
ಮಂಗಲಚರಿತ ವಿಹಂಗಾರೂಢಾ 4
ಶಕ್ರಾರಾತಿಹರ ತ್ರಿಜಗ-
ಚ್ಚಕ್ರಾನಂದಕರ
ಚಕ್ರಾಂಕಿತ ಶ್ರೀಲಕ್ಷ್ಮೀನಾರಾಯಣ-
ವಿಕ್ರಮಸಿಂಹ ಕೊಕ್ರಾಡಿ ಪುರೇಶ್ವರ5
ಪಾವಂಜೆಯ ಸುಬ್ರಹ್ಮಣ್ಯ