ಮುದ್ದು ಕೃಷ್ಣಯ್ಯನ ನೋಡಾನ ಬನ್ನಿ ಪ
ಕೃಷ್ಣಗೆ ಪೂಜೆಯ ಮಾಡಾನ ಬನ್ನಿ ಅ.ಪ
ಚಿನ್ನದ ತೊಟ್ಟಿಲಲ್ಲಿ ಚೆನ್ನಾಗಿ ಕುಂತವ್ನೆ
ಚೆನ್ನ ಚೆಲುವನಕ್ಕೋ ನಗುತವ್ನೇ
ಕನ್ನೆ ರಾಧಮ್ಮಗೆ ಸನ್ನೆಯ ಮಾಡುತವ್ನೆ
ಬನ್ನಿ ಬನ್ನಿ ಎಂದು ಕರಿತವ್ನೆ 1
ಹುಬ್ಬಹಾರಿಸ್ತವ್ನೆ ಮಬ್ಬ ತೋರಿಸ್ತವ್ನೆ
ಅಬ್ಬಬ್ಬ ಇವನಾಟ ಬಲ್ ತಮಾಸೆ
ಒಬ್ಬಿಟ್ಟು ಬೇಕಂತ ಕೈಲೇ ತೋರಿಸ್ತಾನೆ
ಅಬ್ಬ ಇವ ಏಳೋದು ಒಂಥರ ಬಾಸೆ 2
ಎಂಥ ಮುದ್ದಿನ ಮೊಗ ಚೆಂದುಳ್ಳಿ ಚೆಲುವ
ಇಂಥವ್ನ ನೀವೆಲ್ಲೂ ಕಂಡಿಲ್ಲ ಬನ್ರೋ
ನಿಂತು ನೋಡಬೇಕಿವಗೆ ಆಲು ಮೊಸರು ಬೆಣ್ಣೆ
ಹಣ್ ತುಂಬಿದ ಗಂಗಾಳ ತನ್ರೋ 3
ಕಿನ್ನರ ಗೆಜ್ಜೆ
ಕೈಗೆ ಔಜುಬಂದಿ ತೊಟ್ಟವ್ನೆ
ಕಣ್ಗೆ ಕಪ್ಪಾ ಹಚ್ಚಿ ನವಿಲ್ಗರಿ ತಲ್ಗಿಟ್ಟಿ
ಹಣೆ ಉದ್ದಾದ ತಿಲಕ ಇಟ್ಟವ್ನೇ 4
ರಾಮ್ನೂ ನಾನೆಂತಾನೇ ಭೀಮ್ನೂ ನಾನೆಂತಾನೇ
ಕಾಮ್ನಪ್ಪನೂ ನಾನೆ ನೋಡಂತಾನೆ
ನಿಮ್ಮೂರ ದೇವ್ರಾಣೆ ನಾನೆ ಮಾಂಗಿರಿರಂಗ
ನಿಮ್ನ ಕಾಯೋಕ್ಬಂದೆ ಅಂತಾನೆ 5