ರುದ್ರಕುಮಾರನ ಚರಣಕ್ವಂದನೆ ಮಾಡಿ
ವಿದ್ಯಾಭಿಮಾನಿ ವಾಣಿಯ ಸು -
ಪದ್ಮ ಪಾದಗಳಿಗೆ ಎರಗಿ ನಾ ಪೇಳುವೆ
ಶುದ್ಧವಾಗಿ ಕೊಡು ಮತಿಯ 1
ಶ್ರಾವಣಮಾಸ ಶುಕ್ಕುರುವಾರ ಶುಭಮೂರ್ತೆ (ಮುಹೂರ್ತೆ?)
ಕಾಲದಿ ಕಮಲಾಕ್ಷಿಯನು
ಆಲಯದೊಳಗಿಟ್ಟಾದರದಿಂದ ಪೂಜಿಸೆ
ಬೇಡಿದಭೀಷ್ಟ ನೀಡುವಳು 2
ಇರುತಿರಲೊಂದು ಪಟ್ಟಣದಲ್ಲಿ ರಾಜನು
ತನಯರಿಲ್ಲದ ಕಾರಣವು
ವಿವಹದುತ್ಸವಕೆಂದು ತೆರಳೋ ಪತಿಯ ಕಂಡು
ತೆಗೆದಿಟ್ಟಳಾತನಾಯುಧವ 3
ಪಟ್ಟದ ಕತ್ತಿಯ ಬಿಟ್ಟು ಬಂದೆನೆಂದು
ಅಟ್ಟಿಹ ತನ್ನ ದೂತರನು
ನೆಟ್ಟನೆರಡು ಕಾಲು ಚಾಚಿ ಕುಳ್ಳಿರಲಾಗ
ತಟ್ಟನೆ ದಾಟಿ ನಡೆದನು 4
ಮೂರು ತಿಂಗಳು ಗರ್ಭಸಾಕ್ಯಾ (ವಾಸಕ್ಕಾ?)ಗಿ ಬಂದಿತು
ನೀನೀಗ ದಾಟಿ ಪೋಗುವರೆ
ಕೇಳಿ ಸಂಭ್ರಮದಿಂದ ಹೇಳೆ ರಾಜಗೆ ಬಂದು
ತಾಳಿದ ಪರಮ ಹರುಷವನು 5
ಸದ್ದು ಮಾಡದೆ ಸೂಲಗಿತ್ತಿ ಕರೆಸಿ ತಾ-
ನಿದ್ದ ವಾರ್ತೆಗಳ ಹೇಳಿದಳು
ಮುತ್ತಿಲು ತುಂಬ್ಹೊನ್ನು ಕೊಡುವೆ 6
ಹುಡುಕುತ ಬಂದಳು ಕಡೆಯ ಬಜಾರಕ್ಕೆ
ಬಡವ ಬ್ರಾಹ್ಮಣನ ಮಂದಿರದಿ
ಮಡದಿಗೆ ಮೂರು ತಿಂಗಳು ಗರ್ಭವಾಗಿದೆ
ಕÀಡೆಹಾಯ್ಸಲೆನ್ನ ಕರೆಸೆಂದ್ಲು 7
ಮೂರು ತಿಂಗಳ ರಾಜನರಸಿಗೆ ಮೊಗ್ಗೆಯು
ಏಳು ತಿಂಗಳು ಹೂವ ಮುಡಿಸಿ
ಎಂಟು ತಿಂಗಳಿಗೆ ಶ್ರೀಮಂತದುತ್ಸವ ಮಾಡಿ
ಬಂತಾಗ ನವಮಾಸಗಳು 8
ವಿಪ್ರನ ಮಡದಿಗೆ ಒತ್ತಿ ಬಂದವು ಬ್ಯಾನೆ
ಕಟ್ಟಿ ಕಣ್ಣುಗಳ ನಿಚ್ಚಣಿಕೆ
ಹತ್ತಿ ಇಳಿದು ಹಡೆದಳ ಗಂಡುಕುಮಾರನ
ಎತ್ತಿಕೊಂಡೊಯ್ದಳಾಕ್ಷಣವೆ 9
ಕಲ್ಲು ಗುಂಡನೆ ಹಡೆದಿಯೆ ನೀನೆಂಬಂಥ
ಸೊಲ್ಲು ಕೇಳುತಲೆ ತಲ್ಲಣಿಸಿ
ಎಲ್ಲಿದ್ದರೆನ್ನ ಕುಮಾರನು ಸುಖಬಾಳಲೆಂ-
ದಲ್ಲಿ ನೇಮವ ನಡೆಸಿದಳು 10
ಜಾತಕ ಬರೆಸಿ
ಸಕ್ಕರೆ ಸಗಟದಿಂದ್ಹಂಚಿ
ದಕ್ಷಿಣೆ ತಾಂಬೂಲ ಸಹಿತ ಬ್ರಾಂಬರಿಗೆಲ್ಲ
ಇಟ್ಟು ಭೋಜನವ ಮಾಡಿಸಿದ 11
ನಾಮಕರಣ ಜಾವಳ ಜುಟ್ಟು ಉಪÀನಯನ
ಪ್ರೇಮದಿಂದ್ವಿದ್ಯವ ಕಲಿಸಿ
ಸೋಮನಂದದಿ ಹೊರಗ್ಹೊರಟು ತ-
ಮ್ಮಮ್ಮನ ನೋಡಿ ಮೋಹಿಸಿದÀನಾಕ್ಷಣದಿ 12
ಕತ್ತಲೊಳಗೆ ಬರುತಿರಲು ಬಾಗಿಲ ಮುಂದೆ
ಕಟ್ಟಿದ ಗೋವು ಕಾಣದಲೆ
ವತ್ಸದ ಕಾಲು ತುಳಿಯಲಾಗ ಅದು ಬಾಯಿ
ಬಿಟ್ಟೊದರಿತು ಭಯದಿಂದ 13
ಅಮ್ಮ ನೀ ಬಾರೆ ತಮ್ಮಮ್ಮನರಿಯದವ
ನಮ್ಮನು ಬಲ್ಲನೆ
ಒಮ್ಮ್ಯಲ್ಲದೆರಡುಬಾರ್ಯಾಲಿಸ್ಯದರ ಮಾತು
ತಮ್ಮಿ ್ಹರಿಯರನು ಕೇಳಿದನು 14
ಮಂದಾಕಿನಿಯ ಸ್ನಾನವ ಮಾಡಿ ಬಂದರೆ
ಸಂದೇಹ ಪರಿಹಾರವಾಗುವುದು ಹಾ-
ಗೆಂದು ಹೇಳಿದ ಹಿರಿಯರ ವಾಕ್ಯವ ಕೇಳಿ
ಗಂಗಾಯಾತ್ರೆಗೆ ತೆರಳಿದನು 15
ನಡೆದು ಬಂದನು ನಡುಮಾರ್ಗದಿ ಪಟ್ಟಣ
ಹಡೆದ ಮನೆಯ ಬಾಗಿಲಲ್ಲಿ
ಕೊಡಬೇಕು ನಮಗಿಷ್ಟು ಸ್ಥಳಗಳೆಂದೆನುತಲಿ
ನುಡಿದು ಪವಡಿಸಿದ ತಾನಲ್ಲಿ 16
ಹೊರಗಿಂದ ಶೆಟವಿ ಬಂದಳು ಮಹಾಲಕ್ಷುಮಿ
ಒಳಗಿಂದ ಬಂದಳು
ಎನ್ನ ವರಪುತ್ರ ಇವನ ದಾಟಲು ನಿನ್ನ ಶಿರವು
ಸಿಡಿದು ಸಾ(ಸಹ?)ಸ್ರೊ ್ಹೀಳಾಗೋದೆನಲು17
ಅದು ಕೇಳಿ ಶೆಟವಿ ತಾ ತಿರುಗಿ ಪೋಗುತಲಿರೆ
ಬದಿಯಲ್ಲಿ ಬದುಕಿದ್ದ ಶಿಶುವು
ಇದು ನಿನ್ನ ಪುಣ್ಯದಿಂದುಳಿದಿತೆಂದೆನುತಿರೆ
ಅಧಿಕ ಸಂತೋಷವಾಗಿ ಹೊರಟು 18
ಭಾಗೀರಥಿಯ ಸ್ನಾನವಮಾಡಿ ತಾನು ಪ್ರ-
ಯಾಗಕೆ ನಡೆತರಲು
ಬ್ಯಾಗ ಮಾಡಿದ ದಾನಧರ್ಮಕಾರ್ಯಗಳ ತಾ-
ನಾಗ ಕಂಡನು ಚತುರ್ಹಸ್ತ 19
ನಾಲ್ಕು ಹಸ್ತಗಳ ಕಂಡಕಾರಣೇನೆಂದು ವ್ಯಾ-
ಕುಲದಿಂದ ಕೇಳಿದನು
ಸಾಕಿದವರು ಹಡೆದವರುಂಟು ನಿನಗೆಂದ್ವಿ-
ವೇಕಬುದ್ಧಿ ಅವರು ಹೇಳಿದರು 20
ಗೊತ್ತಿಲೆ ಬಂದನು ಪಟ್ಟಣದೊಳಗೊಂಡು
ಹೆತ್ತರಂದಿನದ (?) ಮಂದಿರದಿ
ಹೊಸ್ತಿಲೊಳಗೆ ಅಡ್ಡಮಲಗಿದ್ದ ಕಾಲಕ್ಕೆ
ಮತ್ತಾಗ ಬಂದಳು ಶೆಟವಿ 21
ಚೊಚ್ಚಿಲ ಮಗನ ದಾಟಲು ನಿನ್ನ ಶಿರವು
ಬಿಚ್ಚಿ ಸಾಸ್ರೊ ್ಹೀಳಾಗೋದೆನಲು
ಲಕ್ಷ್ಮಿ ಮಾತಿಗೆ ತಿರುಗಿದಳೆನ್ನ ತುತ್ತಿಗೆ
ಮಿತ್ರ್ಯಾದ ಪಾಪಿ ಎಂದೆನುತ 22
ಸತ್ಯವಂತನೆ ನಿನ್ನ ಪುಣ್ಯದಿಂದಿಬ್ಬರು
ಪುತ್ರರು ಉಳುದÀರಂತಿಹರು