ಕೇಶವದಾಸಗೆ ಚರಣವ ನೀಡೋ
ವಾಸುದೇವನೇ ನಿನ್ನ ಪಾದವ ನೀಡೋ ಪ
ಚರಣವ ಗಂಗಾಮೃತದಿಂದ ತೊಳೆಯುವೇ
ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ
ಚರಣಕ್ಕೆ ಆರತಿ ಬೆಳಗುವೆ ಹರಿಯೇ 1
ಪಾದದೊಳೆನ್ನಯ ಶಿರವಿತ್ತು ಬೇಡುವೆ
ನಿತ್ಯ ಕುಡಿಯುತ್ತಲಿರುವೇ
ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ
ಪಾದದೊಳೀ ತನುವನ್ನು ನಾ ಬಿಡುವೇ 2
ಅಡಿಯನ್ನು ನೋಡಿ ಸಂತೋಷಗೊಳ್ಳುವೆನು
ಅಡಿಯನ್ನು ಸೇವಿಸಿ ಭಕ್ತನಾಗುವೆನು
ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು
ಅಡಿಯನ್ನು ಸೇರಿ ನಾ ಮುಕ್ತನಾಗುವೆನು 3