ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕೇಶವದಾಸಗೆ ಚರಣವ ನೀಡೋ ವಾಸುದೇವನೇ ನಿನ್ನ ಪಾದವ ನೀಡೋ ಪ ಚರಣವ ಗಂಗಾಮೃತದಿಂದ ತೊಳೆಯುವೇ ಚರಣಕ್ಕೆ ಶ್ರೀಗಂಧವನ್ನು ಲೇಪಿಸುವೆ ಚರಣಕ್ಕೆ ಆರತಿ ಬೆಳಗುವೆ ಹರಿಯೇ 1 ಪಾದದೊಳೆನ್ನಯ ಶಿರವಿತ್ತು ಬೇಡುವೆ ನಿತ್ಯ ಕುಡಿಯುತ್ತಲಿರುವೇ ಪಾದಧೂಳಿಗಳನ್ನು ಬಿಡದೆ ನಾ ಹÉೂರುವೇ ಪಾದದೊಳೀ ತನುವನ್ನು ನಾ ಬಿಡುವೇ 2 ಅಡಿಯನ್ನು ನೋಡಿ ಸಂತೋಷಗೊಳ್ಳುವೆನು ಅಡಿಯನ್ನು ಸೇವಿಸಿ ಭಕ್ತನಾಗುವೆನು ಅಡಿಯನ್ನು ಪೂಜಿಸಿ ಭಜಿಸಿ ಪಾಡುವೆನು ಅಡಿಯನ್ನು ಸೇರಿ ನಾ ಮುಕ್ತನಾಗುವೆನು 3
--------------
ಕರ್ಕಿ ಕೇಶವದಾಸ
ಡಂಭ ತೋರಿದರೆ ಬಂತೆ ಇಂಬವಾಗದ ಗುಂಭಗುರುತ ಪಥ 1 ಶಬ್ದ ಜ್ಞಾನದಿಂದ ನಿಗಗೇನು ಲಬ್ಧ ಲಬ್ಧಾ ಲಬ್ಧ ತಿಳಿಯಗೊಡುದು ನಿನ್ನ ಪ್ರಾರಬ್ಧ ಧ್ರುವ ನೀರ ಕಡಿದರೆ ಬಂತೆ ಸಾರಸದ ನವನೀತ ಮಾರಪೀತನಂಘ್ರಿ ಗುರುತಾಗುದೇ ಹಿತ 2 ಹರಿವ ಮೃಗಜಲವಾಯಿತೆ ಅರಿತುಕೊಂಬಗೆ ಗಂಗಾಮೃತ ಅಮೃತ ಹಸ್ತ 3 ಮಣಿ ಆದೀತೆ ರಾಜಿಸುವ ನವರತ್ನ ನಿಜತತ್ವ ತಿಳಿಯುದೊಂದೇ ವಾಜಿಯ ಯತ್ನ 4 ಹೊಂದಿ ಬದುಕಿರೊ ಮಹಿಪತಿ ತಂದೆಯ ಗುರುಪಾದ ಬೋಧ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ದೀನ ಪರಿವಾರ ಪಾಹಿ ದಾತಾರ ಮಾಂ ದೇಹಿಮೇ ಚರಣಸೇವಾಂ ಪ ಬೃಂದಾವನಶೈಲವಾಸ ಪರಮಕೃಪಾಕರ ಪಾಪನಾಶ ಸುಧೀಂದ್ರ ವಿಭೂಷ ಹೃದಯೋಲ್ಲಾಸ ಅ.ಪ ಸರ್ವೇಶ ವೆಂಕಟೇಶ ಗುರುವರ ಸುಖಧಾಮ ಸುರರಂಜನ ಅಖಿಲ ಬೃಂದಾಳಿಭೀಮ ಶ್ರೀರಾಮ ಪರಿಭಾಷಾ ಮನಿವೇಶ ಜಿತಸೋಮ 1 ಪ್ರಾಣೇಶಸುತ ಭಜನ ಸತತ ವಿರಾಜ ಪರಿ ಪೂರ್ಣದರ್ಶನ ನಿರಂತರದಾಯಕ ಮುನಿಪುಂಗವ ಹರಿಣ ಸಾರಾಂಗ 2 ಮಂಗಳ ಚರಣ ತುರಂಗ ಗಂಗಾಮೃತ ಪೂರ್ಣತೀರ್ಥ [ತುಂಗಾತೀರ ನಿವಾಸಿನೀಂ] ಮಾಂಗಿರಿರಂಗ ಸಂಪ್ರೀತ ಮಾಂ 3
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್