ಕ್ಷೀರಾಂಬುಧಿ ಸಂಭವೆ ಅಮ್ಮ
ನಾರಾಯಣಾಂತರ್ಯ ಭಾವೇ ಸ್ವಭಾವೇ ಪ
ಶ್ರೀರಂಗ ಧಾಮೆ | ಕೈವಲ್ಯನಾವೆ ಅ.ಪ
ರಾಕೇಂದು ಸಹಜಾತೆ ಸಾಕಾರ ಹರಿಪ್ರೀತೆ
ಲೋಕೇಶ್ವರಿ ಮಾತೆ ಸೌಭಾಗ್ಯದಾತೆ
ಸಾಕೇತ ರಾಜಿತೆ ಪ್ರೇಮಾನ್ವಿತೇ 1
ಗಂಗಾಪಿತಾನಂದ ಸಂದಾತೆ ಸುರಗೀತೆ
ಸಂಗೀತ ಸಾಹಿತ್ಯ ಪೂರ್ಣೇ ವಿಖ್ಯಾತೆ
ಗಂಗಾಧರಾದಿತ್ಯ ರಾಕೇಂದ್ರ ವಿನುತೆ
ಶೃಂಗಾರ ಸದನೆ ಮಾಂಗಿರೀಂದ್ರ ಸಹಿತೇ 2