ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀರಂಗಪುರದೊಳ್ ಮೆರೆವ ಗಂಗಾಪಿತಗೆ ಮಂಗಳಂ ಶ್ರೀರಂಗನಾಯಕಿ ಮನೊಹರಂಗೆ ಮಂಗಳಂ ಪ. ವರದೆಕಾವೇರಿ ಸುತ್ತುವರಿಸಿ ಮೆರೆಯಲು ಉರಗತಲ್ಪದಿ ಶಿರಕೆ ಬಲದಕರವೆÀ ದಿಂಬಿರಲ್1 ಚರಣತಲದಿ ಮೆರೆಯೆ ಸಿರಿಯು ಧರೆಯು ಕುಳ್ಳಿರೆ ಪರಮಭಾಗವತರು ಮುಂದೆ ನೆರೆದು ನಿಂದಿರೆ 2 ಇಕ್ಕೆಲದಿ ಮೆರೆವ ಗಂಗಾ ಗೌರಿ ಅಕ್ಕತಂಗಿಯರ್ ನಕ್ಕುನಲಿವನೊಂದೆಡೆ ಮುಕ್ಕಣ್ಣ ಸನಿಯದಿ 3 ಆರ್ತಜನರ ಪೊರೆವನೆಂಬ ಕೀರ್ತಿಗೊಂಡಿಹ ಕರ್ತೃನೃಹರಿ ತನ್ನರಸಿಯೊಡನೆ ಇತ್ತ ಮೆರೆಯುವ 4 ಉಭಯಕಾವೇರಿ ಮಧ್ಯದಿ ಪ್ರಭುವು ತಾನೆನೆ ವಿಭವದಿಂದ ಮೆರೆವನೀಪರಿ ಪ್ರಭೆಯ ಬೀರುತ 5 ಶರಣಜನರಿಗೆರೆಯ ಶೇಷಗಿರಿಯ ವರದನ ಕರುಣ ಶರಧಿರಂಗಪುರದ ವರದನೆಂಬೆನೆ 6
--------------
ನಂಜನಗೂಡು ತಿರುಮಲಾಂಬಾ