ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಪಾಂಡುರಂಗನೆ ಪಾಲಿಸೆನ್ನನು ಬೇಡಿಕೊಂಬೆನು ವರವ ನೀಡಯ್ಯ ನೀನು ಪ. ಸುರರು ನಿರುತ ನಿನ್ನನು ಬಿಡರು ಕರಗಳನೆ ಜೋಡಿಸುವರು ವರಗಳನೆ ನೀಡೆಂಬರು ಭರದಿ ಹದಿನಾಲ್ಕು ಜಗದ ಉದರದಿ ಇಂಬಿಟ್ಟ ಭೋಜ ಸಿರಿಸ್ತುತಿಗೆ ಸಿಲ್ಕ ರಾಜವರ ರವಿಶತರ ತೇಜ ಭೀಮರಥಿಯ ತೀರದಲ್ಲಿ ಮಹಾನಂದ ಭರಿತ ನಂದನ ಕಂದ ಪೂರ್ಣಸುಖವನ್ನೆ ಕೊಟ್ಟು ಅನುದಿನ ಸೇರಿಸೊ ವೈಕುಂಠ 1 ಇಂದು ನಾ ಮಾಡ್ದ ಪುಣ್ಯ ಬಂದು ಕೈಸೇರಿತಿನ್ನ ಸುಂದರಾಂಗನೆ ಎನ್ನ ಬಂಧ ಪರಿಹರಿಸಿ ಬೇಗದಿಂದ ಉದ್ಧರಿಸೋ ಈಗ ನಂದನ ಕಂದ ರಂಗ ಬಂಧುವೇ ಪಾಂಡುರಂಗ ಕಮಠ ವರಹ ವೇಷಧಾರಕನೆ ನಾರಸಿಂಹನೆ ದೈತ್ಯಸಂಹಾರಿ ಗಂಗಾಪದಧಾರಿ ಕ್ಷತ್ರಿಯ ಕುಲವೈರಿ ಪೊಗಳಲು ಜೀಯಾ ಶೇಷಗೊಶವಲ್ಲವಯ್ಯಾ 2 ಪುಟ್ಟ ಧ್ರುವರಾಯಗಿನ್ನ ಕೊಟ್ಟೆ ಸ್ಥಿರ ಪಟ್ಟವನ್ನ ಎಷ್ಟು ವರ್ಣಿಸಲಿ ನಿನ್ನ ಇಷ್ಟ ಫಲದಾಯಕನ್ನ ಇಟ್ಟಿಗೆ ಪೀಠನಿಲಯ ದಿಟ್ಟ ಶ್ರೀ ಕೃಷ್ಣರಾಯ ಕಷ್ಟಪರಿಹರಿಸು ಗೋಪಾಲಕೃಷ್ಣವಿಠ್ಠಲ ಜೀಯ ಪಾಡಲಿ ಹಗಲಿರುಳು ಕೊಡದಿರು ವಿಠ್ಠಲಯ್ಯ ಬಲವಂತÀ ರಕ್ಷಿಸೆನ್ನ ವಸಂತ ಶ್ರೀದ ಕೈಯ ಮುಗಿವೆ ಸರ್ವದಾ 3
--------------
ಅಂಬಾಬಾಯಿ