ಹರಿಯ ಮರೆದುದಕಿಂತ ಪಾಪವಿಲ್ಲಾ |
ಹರಿ ಸ್ಮರಣೆಯಿಂದಧಿಕ ಪುಣ್ಯ ಮತ್ತೊಂದಿಲ್ಲಾ ಪ
ಗೋಹತ್ಯ ಸುರಾಪಾನ ಕನಕತಸ್ಕರ ಸುಜನ- |
ಕಪಟ ವ್ಯಸನ ||
ಬಾಹಿರವಾಗ್ ದ್ವೇಷ ಪರದಾರಗಮನ ವಿ- |
ವಾಹಗಳ ಮಾಣಿಸುವ ಪಾಪಕಿಂತಲಿ ಮೇಲು 1
ಗಂಗಾನದಿಯಲ್ಲಿ ಸ್ನಾನ ಪ್ರಣವ ಆಚಮನ |
ಹಿಂಗದಲೆ ಗಾಯತ್ರಿ ಮಂತ್ರ ಮೌನ ||
ಕರುಂಗ ದಾನ-ಧರ್ಮ ವೃತ್ತಿ ಕ್ಷೇತ್ರ ರತುನ |
ಬಂಗಾರಯಿತ್ತಧಿಕ ಬಹಳ ಪುಣ್ಯ ಮೇಲು 2
ಹಾಸ್ಯ ವಿರೋಧ ಮದ ಮತ್ಸರ ಪರಕಾರ್ಯ |
ದಾಸ್ಯದಲಿ ಕೆಡಿಸುವ ಶಠನ ಲೋಭಿ ||
ವೈಶ್ವ ದೇವಾಹಿತ ಅತಿಥಿಗಳ ನಿಂದ್ಯರ- |
ಹಸ್ಯ ದೂರುವ ಬಲು ಪಾಪಕಿಂತಲು ಮೇಲು 3
ಭಾಗವತ ಪುರಾಣ |
ಸಾರ್ಥತ್ಯವಾದ ಪ್ರವಚನ ಶಾಸ್ತ್ರ ||
ಸಾರ ಪ್ರಬಂಧ |
ಅರ್ಥ ಪೇಳುವ ಬಲು ಪುಣ್ಯಕಿಂತಲಿ ಮೇಲು4
ಮಿತ್ರಘ್ನ್ಯಗರಳ ಪ್ರಯೋಗ ಗರ್ಭಿಣಿವಧ |
ಗೋತ್ರಸಂಸರ್ಗ ಬಲು ಪ್ರಾಣಹಿಂಸಾ ||
ಕ್ಷೇತ್ರ ಅಪಹಾರ ಕ್ಷುದ್ರವಾಣಿ ನಿಜಕ- |
ಳತ್ರದಿ ದ್ರೋಹ ಬಲು ಪಾಪಕಿಂತಲಿ ಮೇಲು 5
ಕರ್ಮ ಸರ್ವದಲ್ಲಿ ಗಯಾ ಶ್ರಾದ್ಧ |
ಭೂಧರ ಸಮಾಗಮ ಸತ್ ಶ್ರªಣಾ ||
ಆದಿತ್ಯ ಚಂದ್ರ ಉಪರಾಗ ಪರ್ವಣಿ ನಾನಾ |
ರಾಧನೆಯರೆ ಬಲು ಪುಣ್ಯಕಿಂತಲು ಮೇಲು 6
ಆವಾವ ಪಾಪ-ಪುಣ್ಯಗಳದವರ ಕಿಂಕರವು |
ದೇವನ ನೆನಸಿದಂಥ ನೆನೆಯದಂಥ ||
ಜೀವರೊಳಗೊಬ್ಬ ಮುಕ್ತನು ಒಬ್ಬ ತಮಯೋಗ್ಯ |
ಕೈವಲ್ಯಪತಿ ನಮ್ಮ ವಿಜಯವಿಠ್ಠಲ ಪ್ರೇರಕ7