ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಜಯಮಂಗಳಂ ಶುಭೋದಯ ಮಂಗಳಂ ಜಯ ಕಕುದ್ಗಿರಿ ಗಂಗಾಧರ ಲಿಂಗಗೆ ಪ ಜಡೆಯುಡುಪತಿಯು ಗಂಗೆಯೊಡಗೂಡ್ದ ಮಸ್ತಕಕೆ ಮಡುಹಿ ಮಾರನ ಭಸಿತದಾಳ್ದ ಪಣೆಗೆ ಪೆಡೆಯೆತ್ತಿ ಗಾನಗೈವಹಿ ಕುಂಡಲಂಗಳಿಗೆ ದೃಢಭಕತರಿಷ್ಟದಾಯಕ ಶಿವನಿಗೆ 1 ಸೋಮಸೂರ್ಯಾಗ್ನಿ ಲೋಚನೆಗೆ ವಿಷದಾಳಿ ಸುರ ಸ್ತೋಮವನು ಕಾಯ್ದ ಶೋಭನ ಕಂಠಕೆ ಭೀಮನಿಗೆ ಭಯಹರಗೆ ಪರಶುಮೃಗ ಹಸ್ತನಿಗೆ ಕಾಮಿತಾರ್ಥದ ವರಾಭಯ ಕರನಿಗೆ 2 ನಾಗಕಂಕಣಧರಗೆ ನಾಗೋತ್ತರೀಯನಿಗೆ ನಾಗಯಜ್ಞೋಪವೀತವ ತಾಳ್ದಗೆ ನಾಗಚರ್ಮಾಂಬರಗೆ ನಗರಾಜ ಚಾಪನಿಗೆ ಗಮನ ಬಾಣಗೆ ಶಿವನಿಗೆ 3 ಗಿರಿಜೆಗರ್ಧಾಂಗವನ್ನಿತ್ತ ಶುಭವಿಗ್ರಹಗೆ ವರ ವೃಷಭವನ್ನೇರಿ ಸಂಚರಿಪಗೆ ಬರೆದುಂಗುಟದಿ ಹೊಳೆದ ಚಕ್ರದಿಂ ದೈತ್ಯಕುಲ ಹರಣ ವರದಾಯಕಗೆ ಸರ್ವೆಶಗೆ 4 ತಿರುಪತಿಯ ವಾಸವನು ದೃಢಗೈದು ಕಕುದ್ಗಿರಿಯ ಪರಮ ಕ್ಷೇತ್ರದಿ ಮಹಿಮೆಗಳ ತೋರ್ಪಗೆ ವರದ ವೆಂಕಟಪತಿಗೆ ಗಂಗಾಧರೇಶ್ವರಗೆ ಶರಣಾಗತರ ಕಾಯ್ವ ಸಾಂಬಶಿವಗೆ 5
--------------
ತಿಮ್ಮಪ್ಪದಾಸರು
ದೇವ ಫಣಿಭೂಷಣನೆ ಬಾ ಸಕಲ ಜನ ಜೀವಚೈತನ್ಯ ಬಾರೈ ದೇವತೆಗಳುಯ್ಯಲೆಯನು ಭಯಭಕ್ತಿ ಭಾವದಿಂ ತೂಗತಿಹರು ಪ ಅವನಿಯೊಳಗಯನವೆರಡು ಸರಪಣಿಗೆ ಭುವನವೇಳರ ಪೀಠವು ಶಿವನೆ ತೊಡಿಸಿರಲು ಮೇಲೆ ಕುಣಿಕೆ ತಾ ಧ್ರುವನ ಕೈಲಿಹುದುಯ್ಯಲೆ 1 ಧರಣಿಯಿದು ಮೇಲುಮಣೆಯು ಗಗನದಿ ಸ್ಫುರಿಸುತಿಹ ಶಶಿಸೂರ್ಯರು ದೀಪವಾ ಗಿರಲೊಪ್ಪುತಿಹದುಯ್ಯಲೆ 2 ಇಂದ್ರಾದಿ ದಿಕ್ಪಾಲಕರು ಮಿಕ್ಕಾದ ಗಂಧರ್ವ ಸುರ ಸಿದ್ಧರು ವಂದಿಸುತ ಸ್ತುತಿಗೈಯುತ ಸಂದಣಿಸಿ ಮುಂದೆ ನಿಂದಿಹರು ಮುದದಿ 3 ಕುಸುಮಮಾಲೆಗಳಾಗಿವೆ ನಕ್ಷತ್ರ ವೆಸೆದು ಗಗನದಲೊಪ್ಪುತ ಅಸಮತೇಜೋರಾಶಿಯೆ ಮದನಹರ ನಸುನಗುತ ಬಂದು ನೆಲೆಸು 4 ಮಂಗಳ ಮಹಾಮಹಿಮನೆ ಶಿವಗಂಗೆ ಗಂಗಾಧರೇಶ ನೀನೆ ಲಿಂಗವೆಂದೆನಿಸುತಿಲ್ಲಿ ತಿರುಪತಿಯ ರಂಗ ವೆಂಕಟನೆನಿಸುವೆ 5
--------------
ತಿಮ್ಮಪ್ಪದಾಸರು