ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸ್ಮರಿಸಿ ಸುಖಿಸೆಲೋ ಮಾನವಾ ಪ ಸರಸಿಜಾಸನ ಸತತ ನೆನೆವ ಹರಿನಾಮವನು ಅ.ಪ ಜವರಾಯ ಕಿಂಕರರ ಹಿಮ್ಮೆಟ್ಟಸಿದ ನಾಮ ಧ್ರುವರಾಯಗೊಲಿದ ಘನವು ಈ ನಾಮ ನವನೀತರೂಪದಿಂದ ಘನವ ತಾಳ್ದಿಹ ನಾಮ ಸುವಿಲಾಸದಿಂ ಪಾರ್ಥಗೊಲಿದಿರ್ಪನಾಮವನು 1 ಸನಕಾದಿ ಮುನಿಗಳು ಸತತ ಭಜಿಸುವ ನಾಮ ಅನಿಲಜಾತನಿಗೊಲಿದ ಪರಮನಾಮ ವನಚಾರಿಯಾಗಿದ್ದ ಶಬರಿಗೊಲಿದ ನಾಮ ವನಚರರ ಗರುವವನು ಮುರಿಯುವ ನಾಮ 2 ಪಾಂಚಾಲಿಗಕ್ಷಯದ ವರವನಿತ್ತಾ ನಾಮ ಪಾಂಚಜನ್ಯವ ಸಿರಿಯೊಳೆಸೆಯುತಿಹ ನಾಮ ವಂಚಕರ ಹೃದಯಗಳ ಭೇದಿಸುತ್ತಿಹನಾಮ ಚಂಚಲೆಯರುತ್ಸಾಹದಿಂ ಭಜಿಪ ನಾಮವನು 3 ದುರುಳದೈತ್ಯರ ಮನವ ಕದಡಿ ಕಲಕುವ ನಾಮ ಶರಣಾಗತಾವಳಿಯ ಪೊರೆಯುತಿಹನಾಮ ತರಳಪ್ರಹ್ಲಾದ ತಾ ಪಿತಗೊರೆವ ನಾಮವನು 4 ಮಾಂಗಿರೀ ವರಾಗ್ರದೊಳು ಮರೆಯುತಿಹ ಸಿರಿನಾಮ ಶೃಂಗಾರ ಶ್ರೀ ಪಾಂಡುರಂಗ ನಾಮ ಗಂಗಾಧರಾನುತ ಸುಖದಾತ ಶ್ರೀನಾಮ ಮಂಗಳಕರ ರಾಮದಾಸನುತ ನಾಮವನು 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್