ಜಯಜಯ ಜಲದುರ್ಗೆ ತ್ರಿಜಗನ್ಮಯೆ ಸದ್ಗುಣವರ್ಗೆ ಪ.
ದಯಾಸಾಗರೆ ದಾರಿದ್ರ್ಯದುಃಖ ಭವ-
ಭಯನಾಶಿನಿ ಮಣಿಮಯಕೃತಭೂಷಿಣಿಅ.ಪ.
ಗಜವದನನ ಮಾತೆ ಸುಜನ-
ವ್ರಜಸತ್ಫಲದಾತೆ
ಕುಜನಭಂಜನಿ ನಿರಂಜನಿ ಶೈಲಾ-
ತ್ಮಜೆ ಮಹೋಜೆ ನೀರಜದಳಲೋಚನಿ1
ಇಂದ್ರಾದ್ಯಮರನುತೆ ಪೂರ್ಣಾ
ನಂದೆ ನಂದಜಾತೆ
ಚಂದ್ರಾಸ್ಯೇ ಯೋಗಿವೃಂದವಂದಿತೆ ಮೃ-
ಗೇಂದ್ರವಾಹಿನಿ ಮದಾಂಧರಿಪು ಮಥನಿ2
ಅಂಗಜಶತರೂಪೆ ಸದಯಾ-
ಪಾಂಗೆ ಸುಪ್ರತಾಪೆ
ಗಂಗಾಧರವಾಮಾಂಗಶೋಭೆ ಸಾ-
ರಂಗನೇತ್ರೆ ಶ್ರೀರಂಗಸಹೋದರಿ3
ದಾಸಜನರ ಪೋಷೆ ರವಿಸಂ-
ವಾಸುದೇವನ ಸ್ಮರಣಾಸಕ್ತಿಯ ಕೊಡು
ಭಾಸುರಜ್ಞಾನಪ್ರಕಾಶವಿಲಾಸಿನಿ4
ಸೌಖ್ಯವು ಭಕ್ತರ್ಗೆ ಸಲಿಸಲು
ಸೌಖ್ಯವು ನೀ ಭರ್ಗೆ
ಲಕ್ಕುಮಿನಾರಾಯಣನ ಭಗಿನಿ ನಿ-
ರ್ದುಃಖಪ್ರದಕಟಿಲಾಖ್ಯಪುರೇಶ್ವರಿ5