ಪೀತಾಂಬರಧರ ದಶರಥಬಾಲಾ
ಸೀತಾ ಮನೋಹರ ದಶಶಿರಕಾಲಾ ಪ
ಭೀತಜನಾಶ್ರಯ ಮಣಿಮಯ ಮಾಲಾ
ಶೀತಕರೋಪಮ ವದನವಿಶಾಲಾ ಅ.ಪ
ಗೌತಮ ಮುನಿಸಂಪೂಜಿತ ಚರಣಾ
ಖ್ಯಾತ ವಿಭೀಷಣ ಪರಮಾಭರಣಾ
ಪಾತಕಹರ ದಾನವ ಸಂಹರಣಾ
ವಾತಾತ್ಮಜಸಂಸೇವಿತ ಚರಣಾ1
ಮಂಗಳಮೂರ್ತಿ ಗರುಡ ತುರಂಗ
ಸಂಗರಭೀಮ ಶುಭಾಂಗ ಕೃಪಾಂಗ
ಗಂಗಾಧರನುತ ದಿವ್ಯರಥಾಂಗ
ಮಾಂಗಿರಿರಂಗ ಮೋಹನಾಂಗ ನೀಲಾಂಗ 2