ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾಸಕೂಟ ವರ್ಣನೆ ಸಾಟಿಯುಂಟೆ ಶ್ರೀನಿವಾಸನ ದಾಸಕೂಟದ ಮ್ಯಾಳಕೆ ಬೂಟಕದ ಮಾತಲ್ಲ ಕೇಳಿರಿ ಭಜನೆ ಮಾಡುತ ತಾಳಕೆ ಪ. ವಾಸುದೇವನ ವರ್ಣಿಸಲು ಕಮಲಾಸನಾದಿ ಸುರೇಂದ್ರರು ದಾಸಜನರ ಸಮೂಹದೊಳಗಾವಾಸವಾಡುತ ನಲಿವರು ಸೂಸುತಿಹ ಗಂಗಾದಿನದಿಗಳು ಬ್ಯಾಸರದೆ ಬಂದಿರುವವು ಕೇಶವನ ಕೊಂಡಾಟ ಧರೆಯೊಳು ಮೀಸಲಳಿಯದೆ ಮಧುರವು 1 ಬಾರಿಸುತ ತಂಬೂರಿ ತಾಳವ ನಾರದರ ಸಂಸ್ಮರಿಸುತ ಭೂರಿ ಕಿಂಕಿಣಿ ಮದ್ದಳೆಯ ಶೃಂಗಾರ ರಸವನು ಸುರಿಸುತಾ ವಾರಿಜಾಕ್ಷನ ಪರಮಮಂಗಳ ಮೂರುತಿಯ ಮುಂದಿರಿಸುತ ಮಾರುತನ ಮತವರಿತು ಬಹುಗಂಭೀರ ಸ್ವರದಿಂದರುಹುತಾ 2 ಹಿಂದೆ ಗಳಿಸಿದ ಹಲವು ದುರಿತವು ಕುಂದುವುದು ನಿಮಿಷಾರ್ಧದಿ ಅಂದಿನಂದಿನ ದೋಷದುಷ್ಕøತವೊಂದು ನಿಲ್ಲದು ಕಡೆಯಲಿ ಇಂದಿರಾಧವ ಶೇಷ ಭೂಧರ ಮಂದಿರನು ಮಹ ಹರುಷದಿ ಮುಂದೆ ನಲಿವುತ ಮನಕೆ ಪೂರ್ಣಾನಂದವೀವನು ನಗುತಲಿ 3
--------------
ತುಪಾಕಿ ವೆಂಕಟರಮಣಾಚಾರ್ಯ