ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಶ್ರೀಶ ವೇದವ್ಯಾಸನಾದನು ಪ ಶ್ರೀಶ ವೇದವ್ಯಾಸನಾಗಲು ಸಾಸಿರ ನಯನ ಸಾಸಿರ ವದನ ಕರ ಮಿಕ್ಕ ಸುರರೆಲ್ಲ ತು- ತಿಸಿ ಹಿಗ್ಗುತ ಹಾರೈಸಲಂದು ಅ.ಪ. ದರ್ಪಕ ಜನಕ ಸರ್ಪತಲ್ಪನಾಗಿ ತಪ್ಪದನುಗಾಲ ಇಪ್ಪ ವಾರಿಧೀಲಿ ಕಂದರ್ಪ ಹರನೈಯ ಸುಪರ್ಣರಥನಾಗಿ ಒಪ್ಪಿಕೊಂಡು ಇಪ್ಪತ್ತು ಲಕ್ಷಗಲಿಪ್ಪ ಯೋಜನದ ಅಪ್ಪನ ಅರಮನೆ ದರ್ಪಣದಂತೆ ತಾ ರಪ್ಪಥ ಮೀರಿದಂತಿಪ್ಪದು ನೋಡಿ ಸಾ- ಮೀಪಕ್ಕೆ ವಾಣೀಶ ಬಪ್ಪ ಬೇಗಾ 1 ಬಂದು ಬೆನ್ನೈಸಿದ ಮಂದಮತಿ ಕಲಿ- ಯಿಂದ ಪುಣ್ಯಮೆಲ್ಲ ಹಿಂದಾಯಿತೆನೆ ಮು ಕುಂದ ಭಕ್ತನಿಗೆ ಒಂದೆ ಮಾತಿನಲಾ- ನಂದ ಬಡಿಸಿ ಪೋಗೆಂದು ಪೇಳೆ ಅಂದು ಸುಯೋಜನಗಂಧಿ ಗರ್ಭದಲ್ಲಿ ನಿಂದವತರಿಸುತ ಪೊಂದಿದ ಅಜ್ಞಾನ ಅಂಧಕಾರವೆಲ್ಲ ಹಿಂದು ಮಾಡಿ ಸುರ- ಸಂದಣಿ ಪಾಲಿಸಿ ನಿಂದ ದೇವ 2 ಕೆಂಜೆಡೆವೊಪ್ಪ ಕೃಷ್ಣಾಜಿನ ಹಾಸಿಕೆ ಕಂಜಾಪ್ತನಂದನದಿ ರಂಜಿಸುವ ಕಾಯ ಮಂಜುಳ ಸುಜ್ಞಾನ ಪುಂಜನು ವಜ್ಜರ- ನಿತ್ಯ ಅಂಜಿದಗೆ ಸಂಜೆಯ ತೋರಿ ಧನಂಜಯ ಶಿಷ್ಯ ನೀ- ಗಂಜದಂತೆ ಕರಕಂಜವ ತಿರುಹಿ ನಿರಂಜನ ಪೇಳಿದ ಕುಂಜರ ವೈರಿಯ ಭಂಜನನು 3 ಗಂಗಾತೀರದಲಿ ಶೃಂಗಾರ ಉಪವ- ನಂಗಳದರೊಳು ಶಿಂಗಗೋಮಾಯು ಭು ಮೂಷಕ ಮಾತಂಗ ಸಾರಮೇಯ ಕೊಂಗಹಂಗ ಸರ್ವಾಂಗ ರೋಮ ಶರಭ ವಿಹಂಗ ಶಾರ್ದೂಲ ಸಾ- ರಂಗ ಕುರಂಗ ಕುಳಿಂಗ ಪಾಳಿಂಗ ಪ್ಲ ವಂಗ ತುರಂಗ ಪತಂಗ ಭೃಂಗಾದಿ ತು- ರಂಗವು ತುಂಬಿರೆ ಮಂಗಳಾಂಗ 4 ಬದರಿ ಬೇಲವು ಕಾದರಿ ಕಾಮರಿ ಮಧುಮದಾವಳಿ ಅದುಭುತ ತೆಂಗು ಕದಳಿ ತಪಸಿ ಮದಕದಂಬ ಚೂ- ತದಾರು ದ್ರಾಕ್ಷಿಯು ಮೃದು ಜಂಬೀರವು ಬಿದಿರು ಖರ್ಜೂರ ಮೋದದಿ ದಾಳಿಂಬ ತುದಿ ಮೊದಲು ಫ ಲದ ನಾನಾವೃಕ್ಷ ಪದಲತೆಯ ಪೊದೆಯು ಫಲ್ಲಸೈ ಇದೆ ಆರು ಋತು ಸದಾನಂದ 5 ವನದ ನಡುವೆ ಮುನಿಗಳೊಡೆಯ ಕಾನನ ಸುತ್ತಲು ಆ- ನನ ತೂಗುತ್ತ ಧ್ವನಿಯೆತ್ತಿ ಬಲು- ಗಾನ ಪಾಡಿದವು ಗುಣದಲ್ಲಿ ಕುಣಿದು ಖಗಾದಿ ಗಣಾನಂದದಿಂದಿರೆ ವನನಿಕರ ಮೆಲ್ಲನೆ ಮಣಿದು ನೆ- ಲನ ಮುಟ್ಟುತಿರೆ ಅನಿಮಿಷರು ನೋ ಡನಿತಚ್ಚರಿಯನು ಪೇಳೆ 6 ಮೌನಿ ನಾರದನು ವೀಣೆ ಕೆಳಗಿಟ್ಟು ಮೌನವಾದನು ಬ್ರಹ್ಮಾಣಿ ತಲೆದೂಗಿ ಗೀರ್ವಾಣ ಗಂಧರ್ವರು ಗಾನ ಮರೆದು ಇದೇನೆನುತ ಮೇನಕೆ ಊರ್ವಸಿ ಜಾಣೀರು ತಮ್ಮಯ ವಾಣಿ ತಗ್ಗಿಸಿ ನರ್ತನೆಯ ನಿಲ್ಲಿಸಿ ದೀನರಾದರು ನಿಧಾನಿಸಿ ಈಕ್ಷಿಸಿ ಎಣಿಸುತ್ತಿದ್ದರು ಶ್ರೀನಾಥನ 7 ನಮೋ ನಮೋಯೆಂದು ಹಸ್ತ- ಕಮಲ ಮುಗಿದು ನಮಗೆ ನಿಮ್ಮಯ ಅಮಲಗುಣ ನಿಗಮದಿಂದೆಣಿಸೆ ಕ್ರಮಗಾಣೆವು ಉತ್ತಮ ದೇವ ಕೂರ್ಮ ಖಗಮೃಗ ಸಮವೆನಿಸಿ ಅ- ಚಮತ್ಕಾರದಲ್ಲಿ ನಾಮಸುಧೆಯಿತ್ತ ರಮೆಯರಸ ಆಗಮನತ8 ಇದನು ಪಠಿಸೆ ಸದಾ ಭಾಗ್ಯವಕ್ಕು ಮದವಳಿ ದಘವುದದಿ ಬತ್ತೋದು ಸಾಧನದಲ್ಲಿಯೆ ಮದುವೆ ಮುಂಜಿ ಬಿಡದಲ್ಲಾಗೋದು ಶುಭದಲ್ಲಿ ಪದೆಪದೆಗೆ ಸಂಪದವಿಗೆ ಜ್ಞಾನ- ನಿಧಿ ಪೆಚ್ಚುವುದು ಹೃದಯ ನಿರ್ಮಲ ಬದರಿನಿವಾಸ ವಿಜಯವಿಠ್ಠಲ ಬದಿಯಲ್ಲೆ ಬಂದೊದಗುವ 9
--------------
ವಿಜಯದಾಸ
ತದಿಗೆಯ ದಿವಸ(ಶೇಷ ದೇವರನ್ನು ಕುರಿತು)ರಂಭೆ :ನ್ಯಾರೆಂಬುದನೆನಗೆ ಪೇಳೆಕ್ರೂರತನದಿ ತಾ ತೋರುವನೀಗ ಮ-ಹೋರಗನೆನ್ನುತ ಕೋರಿಕೆ ಬರುವದು 1ಒಂದೆರಡು ಶಿರವಲ್ಲ ಬಹುಹೊಂದಿಹವು ಸಟೆಯಲ್ಲಕಂಧರದಲಿ ಕಪ್ಪಂದದಿ ತೋರ್ಪವುಚಂದಿರಮುಖಿ ಯಾರೆಂದೆನಗರುಹೆಲೆ 2ಊರ್ವಶಿ : ಕೋಮಲಗಾತ್ರೆ ಮಹಾಮಹಿಮನು ಇವನ-ಸಾಮಾನ್ಯನೆ ಕಾಣೆಭೂಮಿಯ ಪೊತ್ತ ನಿರಾಮಯನಾದಸುಧೀಮನಿವನು ಜಾಣೆ 1ವಾಸುದೇವಗೆ ಈತ ಹಾಸಿಗೆಯವ ನಿ-ರ್ದೋಷನಿವನು ಜಾಣೆಸಾಸಿರಮುಖದ ವಿಲಾಸನಾಗಿಹ ಮಹಾ-ಶೇಷನಿವನು ಕಾಣೆ 2ಅದರಿಂದಲಿ ಕೇಳ್ ತದಿಗೆಯ ದಿವಸದಿಮಧುಸೂದನನಿವನಅಧಿಕಾನಂದದಿ ಒದಗಿಸಿ ಬರುವನುಇದೆಯಿಂದಿನಹದನ3ಎಂದಿನಂತೆ ಪುರಂದರವಂದ್ಯ ಮುಕುಂದಸಾನಂದದಲಿಅಂದಣವೇರಿ ಗೋವಿಂದ ಬರುವನೊಲ-ವಿಂದತಿ ಚಂದದಲಿ 4ಕಂಟಕಗಳು ಎಲ್ಲುಂಟೆಂಬಂತೆ ನೃಪ-ಕಂಠೀರವಗೈದಘಂಟಾನಾದದಿ ಮಂಟಪದೊಳು ವೈ-ಕುಂಠನು ಮಂಡಿಸಿದಾ 5ಕಾಂತಾಮಣಿ ಕೇಳಿಂತೀಪರಿ ಶ್ರೀ-ಕಾಂತ ನತತಂಡಸಂತವಿಸುತ ಮಹಾಂತಮಹಿಮನೇ-ಕಾಂತಸೇವೆಯಗೊಂಡ 6* * *ಪರಶಿವನನ್ನು ಕುರಿತುರಂಭೆ : ಯಾರಮ್ಮಾ ಮಹಾವೀರನಂತಿರುವನುಯಾರಮ್ಮಾ ಇವನ್ಯಾವ ಶೂರ ಯಾವಊರಿಂದ ಬಂದ ಪ್ರವೀರ ಆಹಾಮಾರಜನಕನ ವಿಸ್ತಾರಪೂಜೆಯ ವೇಳ್ಯಧೀರನಂದದಿ ತಾ ವಿಚಾರ ಮಾಡುವನೀತ 1ಕರದಿ ತ್ರಿಶೂಲವ ಧರಿಸಿ ಮತ್ತೆವರಕೃಷ್ಣಾಜಿನವನುಕರಿಸಿಹರಿಚರಣಸನ್ನಿಧಿಗೆ ಸತ್ಕರಿಸಿ ಆಹಾಜರಿಯ ದುಕೂಲವ ನಿರಿದುಟ್ಟುಕೊಂಡು ವಿ-ಸ್ತರವಾದ ತೋಷದಿ ಮೆರದು ನಲಿವ ಕಾಣೆ 2ಊರ್ವಶಿ : ಈತನೀಗ ಕಾಲಭೈರವ ಕೇಳೆಲೆಗೆ ನೀರ ಪ.ಈತನೀಗ ಪೂರ್ವದೊಳಗೆಭೂತನಾಥ ಸೇವೆಯೊಲಿದಓತು ವಿಷ್ಣುಭಕ್ತಿಯಿಂದಪೂತನಾದ ಪುಣ್ಯಪುರುಷ ಅ.ಪ.ಊರು ಇವಗೆ ಮೊದಲು ಗಂಗಾತೀರವಾಯ್ತುವೇಣುತಾ ವಿ-ಚಾರದಿಂದ ಪೊದನೈಉದಾರತನದಿ ರಾಮೇಶ್ವರಕೆಸಾರಗ್ರಹಿತ ಮುಕ್ತಿ ಪಥವನು ಕರುಣದಿಂದತೋರಿಸುವನು ವಿಷ್ಣುವೆಂದೆನುತ ಗಿರಿಯನೇರಿ ಕರುಣ ವಾರಿಧಿಯಪದಾರವಿಂದಸೇವೆಗೈದುಮಾರಪಿತನ ಭಕ್ತಿಯೊಳು ತಾ ಹೇರಿನಲಿವ ಚಾರುಚರಿತ 1ಪರಮಪುರುಷ ಹರುಷದಿಂದೀಪುರಕೆಬರುವಕಾಲದಲ್ಲಿಚರಣವನ್ನು ಬಿಡದೆ ಯಿಲ್ಲಿರುವನೈ ಮಹಾತ್ಮನೀತಸ್ಫುರಿತತೇಜೋಮೂರ್ತಿ ಈತನು ಲೋಕದೊಳಗೆಚರಿಸುವ ತ್ರಿಕಾಲಪ್ರಜÕನು ಇವನ ಗುಣವ-ನರಿವರ್ಯಾರು ಮನುಜಭುಜಂಗರಲಿಮಹತ್‍ಕಾರಣೀಕಪುರುಷನಿವ ಮಹಾ ಬಲಾಢ್ಯಕರುಣವುಳ್ಳ ವಿಷ್ಣುಭಕ್ತ 2ಶ್ರೀನಿವಾಸ ಕರುಣದಿಂಪ್ರಧಾನಿಯೆಂದು ನಡೆಸಿಕೊಡುವಏನಗೈದರೀತ ಮನದಿ ತಾನುತೋಷಪಟ್ಟು ಇರುವಕಾಣಿಕೆಗಳ ತರಿಸಿ ಇರಿಸುವ ಬೇತಾಳಪ್ರೇತನಾನಾ ಉಪದ್ರವಗಳ ಬಿಡಿಸುವ ಧನಿಯ ಆಜೆÕಏನ ದೊರಕಿತದನು ಬೇಗ ತಾನೆಬಂದು ಪೇಳಿ ಜನರಮಾನಿಸುತ ನಿಧಾನಗೊಳಿಸಿಕ್ಷೋಣಿಯೊಳಗೆ ಕೀರ್ತಿಪಟ್ಟ 3
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಸ್ಮರಿಸುವೆ ನಾ ನಿಮ್ಮ ಚರಣಕಮಲಗುರುವಿಜಯರಾಯಜನ್ಮಾರಭ್ಯವು ನಿಮ್ಮ ಗುಣಕರ್ಮಗಳೆಲ್ಲ ವಿಜಯರಾಯದಿವಿಜರ ವೇಷದಿಂದವನಿಯೊಳುದಿಸಿದ್ಯೊ ವಿಜಯರಾಯಭಾಗವತಧರ್ಮವಹಿಸಿ ತ್ರಿರಾವರ್ತಿ ವಿಜಯರಾಯಕಂಚಿಕಾಳ್ಹಸ್ತಿ ಶ್ರೀರಂಗ ಸೇತುಯಾತ್ರೆ ವಿಜಯರಾಯಮರಿಯಾದೆಯಿಲ್ಲದೆ ವರಗಿರಿಯಾತ್ರೆಯ ವಿಜಯರಾಯಮಹಿಯಲ್ಲಿ ತಿರುಗಿ ಸರ್ವಕ್ಷೇತ್ರದಿ ವಿಜಯರಾಯಗುರೂಪದೇಶಕನಾಗಿ ವ್ಯಾಸಕಾಶಿಯಲ್ಲಿದ್ಯೊ ವಿಜಯರಾಯಸ್ವಚ್ಛವಾಗಿ ಗಂಗಾತೀರ ವಾಸಮಾಡಿ ವಿಜಯರಾಯತುಂಗಾತೀರದಿ ಕುಳಿತು ಗಂಗೆ ಪೆಚ್ಚಿಸಿದಿ ವಿಜಯರಾಯಮಧ್ವಮತದಸಾರಕವನದಿ ರಚಿಸಿದ್ಯೊ ವಿಜಯರಾಯಶುದ್ಧ ತತ್ವಸಾರ ಸುಳಾದಿ ಪದಮಾಡಿ ವಿಜಯರಾಯಸದಾಚಾರಸಂಪತ್ತು ಮಧುಕರವೃತ್ತಿಯು ವಿಜಯರಾಯಭಕ್ತರ ಅಪಮ್ಯತ್ಯುಬಿಡಿಸಿ ಆಯುನಿತ್ತೆ ವಿಜಯರಾಯನಿತ್ಯಾನ್ನ ಪುತ್ರೋತ್ಸವಗಳು ಭೃತ್ಯರಿಗೆ ವಿಜಯರಾಯಭಕ್ತಜನರಿಗೆ ತತ್ವೋಪದೇಶವ ಮಾಡಿ ವಿಜಯರಾಯಎಲ್ಲರಲಿ ಸಿರಿನಲ್ಲನ ಅಂಶವ ವಿಜಯರಾಯಬಲ್ಲಿದನೀನೊಂದುರೂಪದಿ ಎನ್ನಲ್ಲಿ ವಿಜಯರಾಯನಿಮ್ಮ ಪುಣ್ಯದ ಶೇಷವಿನ್ನು ಉಂಬೆವೊ ನಾವು ವಿಜಯರಾಯಎನ್ನಿಂದ ಆಗೋ ಸಾಧನವೆಲ್ಲ ನಿನ್ನದೊ ವಿಜಯರಾಯಈಗ ಈ ಯುಗದಿ ಸಾಧನವೆಂಬುದು ಕಾಣೆ ವಿಜಯರಾಯಗುರುನಿನ್ನ ಕರುಣಕವಚತೊಟ್ಟ ಭಕುತರ್ಗೆ ವಿಜಯರಾಯ
--------------
ಗೋಪಾಲದಾಸರು