ಒಟ್ಟು 4 ಕಡೆಗಳಲ್ಲಿ , 4 ದಾಸರು , 4 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಂಕಾರ ಪ್ರತಿಪಾದ್ಯ ಶಂಖಚಕ್ರಾಭಯಕರ ಬಿಂಕದಿಂದ ಬಾಕು ಟೊಂಕದಿ ಕಟ್ಟಿ ಮೆರೆವ ದೇವ 1 ಇಷ್ಟು ಜನರ ರೋಗ ತೊಟ್ಟಿ ತೀರ್ಥದಿಂದ ಕಳೆವ ಕಷ್ಟದ ಕಂಕಣ ಕಟ್ಟಿ ಮೆರೆವ ದೇವಾ 2 ದೇಶದೇಶದಿ ಬರುವ ದಾಸ ಜನರ ಅರ್ಥಿ ಕಾಸುವೀಸಕೆ ಕೊಟ್ಟು ಲೇಸಾಗಿರುವಿಯಿಲ್ಲಿ 3 ನಾಮ ತೀರ್ಥ ಪ್ರಸಾದ ಕಾಮಿಸೆ ವಿಕ್ರಯಿಸುವ ನೇಮಗಳನೆ ಕೊಟ್ಟು ತ್ರಿಧಾಮ ನಿಲಯನೆ 4 ಮಂಗಳ ಮಹಿಮನೆ ಗಂಗಾಜನಕನೆ ಅಂಗಜನಯ್ಯನೆ ವೆಂಕಟರಮಣನೆ 5 ತಾಳ ತಂಬೂರಿ ದಮ್ಮಡಿ ಮೇಳದೊಳು ದಾಸರು ವೇಳೆ ವೇಳೆಗೆ ಸೇವಿಸೆ ಕಾಳ ದೋಷವ ಕಳೆವ 6 ರಮಾ ಸೇವಿತÀ ವಿಜಯ ರಾಮಚಂದ್ರವಿಠಲ ನಿತ್ಯ ನಿನ್ನ ನಾಮಗಳನೆ ನುಡಿಸೊ 7
--------------
ವಿಜಯ ರಾಮಚಂದ್ರವಿಠಲ
ನಿನ್ನ ವಲಿಸುವ ಭಾಗ್ಯ ನಿನ್ನ ಭಕ್ತರಿಗೆ ನೀ ಕೊಟ್ಟು ಸನ್ನುತ ಚರಿತರಿಗೀವೆಯಲ್ಲದೆ ನಿನ್ನ ಮಹಿಮೆಯ ತೋರುವ ಅನ್ಯರಿಗೆ ಈ ಭಾಗ್ಯವುಂಟೆ ನಿನ್ನ ವಲಿಸಲು ಸಂಪನ್ನ ಶ್ರೀ ಶ್ರೀನಿವಾಸ 1 ಸೂರ್ಯ ತೇಜಕೆ ಪ್ರತಿ ಕೋಟಿಸೂರ್ಯ ತೇಜ ಧರಿಸಿ ಆರ್ಯ ರಾಮರಾಯರಾ ಕರಗತದಿ ಮೆರೆದೊ ಜಗತ್ಸಿರಿಯೆ ಆ ಆರ್ಯರಾ ಮಡದಿ ಸೀತಾಬಾಯಿ ಎಂಬುವರಾ ಆ ಈರ್ವರಾ ಸೇವೆಯಲಿ ಮೆರೆದ ಸುರತರುವೆ ಶ್ರೀ ಶ್ರೀನಿವಾಸ 2 ನಿನ್ನ ಸೇವಾಕಾರ್ಯ ಆವಾವುದೆಂದ್ಯೋಚಿಸದೆ ನಿನ್ನ ಸೇವಾಕಾರ್ಯದಲಿ ನಿರುತ ತಪವನೆಗೈಯೆ ಮಾನವ ವೇಷಧಾರಿಣಿಯರಾಗಿ ಪುಟ್ಟಿಹರೂ ಜಗದಿ ಬಕುಳಾವತಿಯ ತೆರದಿ ನಿನ ಸೇವ ನಿರತದಿ ಶ್ರೀ ಶ್ರೀನಿವಾಸ 3 ಸಾರ ಗುರುಮುಖದಿಂದ ತಿಳಿದು ನಿ ಲಕುಮಿ ಆವಾಹಿಸಿದ ಬಿಲ್ವರÀಸವ ನಿನಗರ್ಪಿಸಿ ಅಕಳಂಕ ಮಹಿಮರು ಸೇವಿಸಿ ಸೌಳ ವರುಷ ತಪವಗೈದಿಹರೊ ಗುರುವಾಜ್ಞೆಯಲಿ ನಿನ್ನ ಸೇವಿಸೆ ಶ್ರೀ ಶ್ರೀನಿವಾಸ 4 ನಿನ್ನ ಸೇವಕರಾದ ಆ ಮಾನುನಿಯರನುದ್ಧರಿಶೆ ನಿನ್ನ ಇಂಥ ಆಟಗಳ ಗೋಪಿಗೆ ಕೃಷ್ಣ ತೋರಿದಂದದಲಿ ಸನ್ನುತಾಂಗನೆ ತೋರಿ ಭಕ್ತರಭೀಷ್ಟವನು ಉನ್ನತದಿ ಸಲಿಸೆ ಜಗದಿ ಘನ್ನ ಸಂಪನ್ನ ಲೀಲೆನೋಡಲು ಶ್ರೀ ಶ್ರೀನಿವಾಸ 5 ಗಂಗಾಜನಕನೆ ನಿನ್ನುಂಗುಟದಿಂ ಬಂದ ಗಂಗೆಯ ಕೇಸರಿತೀರ್ಥದಾ ಸೊಬಗೇನೆಂದು ಬಣ್ಣಿಪೆನೊ ಶ್ರೀ ರಂಗನಾಥಾ ಸರ್ವರಿಗೆ ದಾತಾ ರಂಗನಾಥನೇ ನಿನ್ನ ಪಂಚಾಮೃತದ ಅಭಿಷೇಕ ಕಂಗಳಿಗ್ಹಬ್ಬವೊ ಜಗದ ಜಂಗುಳಿ ಭಕ್ತರಿಗೆನುತೆ ಶ್ರೀ ಶ್ರೀನಿವಾಸಾ 6 ತನ್ನ ತೊಡೆಯೊಳಗಿಟ್ಟು ಉನ್ನತದ ಆಭರಣ ಗೋಪಿ ಇಡುವ ತೆರದಿ ಇನ್ನು ನಿನಗಲಂಕಾರ ಮಾಡುವದೇನ ಬಣ್ಣಿಪೆನೋ ಸನ್ನುತ ಚರಿತರವರೈಸೇ ನಿನ್ನ ನೇವೇದ್ಯ ಘನ್ನ ಮಂಗಳಾರುತಿ ಬೆಳಗಿ ನಿನ್ನ ಸ್ತುತಿ ಮಾಡುತ್ತ ನಿನ್ನ ತೀರ್ಥವನ್ಹಂಚುವರೊ ಭಕ್ತರಿಗೆಲ್ಲ ಶ್ರೀ ಶ್ರೀನಿವಾಸ 7 ಏನು ಸುಕೃತವ ಮಾಡಿ ಈ ಮಾನುನೀಯರು ಪುಟ್ಟಿಹರೊ ಗಾನಲೋಲನೆ ನಿನ್ನ ಲೀಲೆ ಜಗಕೆ ಬೇರೆ ತೋರೆ ಮನಸಾರೆ ಸಾನುರಾಗದಿ ಬಂದು ನಿನ್ನ ಭಕ್ತರಾ ಮಂದಿರಕೆ ದೀನನಾಥನೆ ನಿನ್ನ ಸಹಿತದಲಿ ಮಾನುನಿಯು ದಾನವಾಂತಕ ನಿನ್ನ ಮಹಿಮೆ ತೋರುವರೊ ಏನೆಂದು ಬಣ್ಣಿಸಲಿ ಎನ್ನಳವೇ ಶ್ರೀ ಶ್ರೀನಿವಾಸ 8 ಒಬ್ಬೊಬ್ಬ ಭಕ್ತರಲಿ ಒಂದೊಂದು ಮಹಿಮೆಯನು ಅಬ್ಬರದಿ ತೋರುವರೊ ನಿನ್ನ ಮಹಿಮೆಯ ದೇವ ಮತ್ತೊಬ್ಬರಾ ಮನೆಯಲ್ಲಿ ಪ್ರಸಾದದಾ ಮಹಿಮೆಯನು ಮತ್ತೊಬ್ಬರಾ ಮನೆಯಲಿ ತೀರ್ಥದಾ ಮಹಿಮೆ ತೋರಿ ಅಬ್ಬರದಿ ಮೆರೆಸುವರೋ ಶ್ರೀ ಶ್ರೀನಿವಾಸ 9 ಗಾನ ಪ್ರಿಯನೆ ನಿನ್ನ ಕಲ್ಯಾಣದುತ್ಸವವು ಏನೇನು ಮಾಡುವ ಕಾರ್ಯ ನಿನ್ನದೇ ಎಂದು ಆನಂದದಿಂದ ಮಾಡುವರೊ ಹರಿಯೆ ದೋರೆಯೆ ದೀನನಾಥ ಎನ್ನ ಹೃದಯದಲಿ ನೀನಿಂತು ನುಡಿದಂತೆ ನುಡಿದಿರುವೆ ಅನಾಥ ಬಂಧು ಶ್ರೀ ಶ್ರೀನಿವಾಸಾ ಶ್ರೀಶಾ 10
--------------
ಸರಸ್ವತಿ ಬಾಯಿ
ಪದುಮಾವತಿ ಕಾಂತ ಪ ಬ್ರಹ್ಮಾದ್ಯರ ತಾತ ಅ.ಪ. ನಿನ್ನ ದರ್ಶನವು ಸಂಸಾರ ಸಮೇತ | ಬೇಡನೆ ಜನವ್ರಾತ ಮನ್ನಿಸಲಿಲ್ಲವೊ ನಾನವರ ಮಾತ | ಪಾವನ ಶುಭಚರಿತ ನಾ ಮಾಡಿದೆ ಶಪಥ ಸದ್ಗುಣ ಗಣಭರಿತ 1 ದ್ವಿಜರಾಜ ವರೂಥ ಇದು ಏನಧಿಕವೊ ನಿನ್ನಸಮದಾತ | ರಿಲ್ಲವೊ ಶುಭಗಾಥ ಭವ ಶರಧಿಗೆ ಪೋತ ನಾಗಯ್ಯಾತ್ವರಿತ 2 ವತ್ಸರ ಪ್ರತಿಪದ ಬುಧಸಹಿತ ಊಧ್ರ್ವಪುಂಡ್ರವಿಡುತ ಏರಿದೆ ಪರುವತ ಸಿರಿ ನಿನ ಕಂಡೆವೊ ತಾತ 3 ಸುಕೃತ | ಈ ದಿನ ಒದಗುತ ಫಲವಾದುದಕೆ ನಾವೆಲ್ಲ ಬಹುಪ್ರೀತ | ರಾದೆವು ಶ್ರೀಕಾಂತ ಉತ್ಸವ ನೋಡುತ ಒಲಿದು ನಿನ್ನ ತೀರ್ಥಪ್ರಸಾದವ ಕೊಳುತ | ನಾವಿದ್ದೆವೊ ಸತತ 4 ತುಂಗ ವಿಕ್ರಮನೆ ರಣದೊಳು ನಿರ್ಭೀತ | ಬಲರಿಪು ಸಹಜಾತ ಗಾಂಡೀವಿಯ ಸೂತ ಗಂಗಾಜನಕನೆ ತ್ರಿಗುಣಾತೀತ | ಭುವನದಿ ವಿಖ್ಯಾತ ರಂಗೇಶವಿಠಲನೆ ನಾ ನಿನ್ನ ದೂತ | ಯದುಕುಲ ಸಂಭೂತ 5
--------------
ರಂಗೇಶವಿಠಲದಾಸರು
ಭೂಷಣವಿದು ಭೂಷಣ ಕೇಶವಧ್ಯಾನ ಪಭೂಷಣವದನಾ ವಿಭೀಷಣ ಧರಿಸುತೆನಾಶರಹಿತ ಪೌರುಷವಾಂತ ಧರಣಿಯೊಳು ಅ.ಪಶೇಷಶಯನನಾಮ ಭೂಷಣದೋಷರಹಿತ ಶಿರೋಧಿ ಭೂಷಣಶ್ರೀಶ ವಿಠ್ಠಲನಾಮ ಭೂಷಣಶೇಷಫಣಿಮಣಿಧೃತ ಭೂಷಣ1 ಕರಯುಗಗಳ ಭೂಷಣ ಹರಿಪೂಜೆಯುಶಿರಕೆ ವಂದನೆ ಭೂಷಣಹರಿಪಾದದರ್ಶನ ವರನೇತ್ರಭೂಷಣವರಕ್ಷೇತ್ರಸಂಚಾರ ಚರಣಕೆ ಭೂಷಣ 2 ಹರಿಯ ಚರಿತೆಯು ಕರ್ಣಭೂಷಣಹರಿತುಳಸಿ ನಾಸಿಕಕೆ ಭೂಷಣಹರಿಯ ಕೊಂಡಾಡುವುದೆ ರಸನೆಗೆ ಭೂಷಣಹರಿಯ ಭಜನೆಯು [ಜಿಹ್ವಾಭೂಷಣ] 3 ಧರೆಯೊಳು ಜನಿಸಿದ ಮಾನವರಿಗೆಹರಿನಾಮವೆ ಭೂಷಣಾಸಿರಿರಮಣನಾಮ ಕಿರೀಟವಯ್ಯವರದನೆಂಬುವನಾಮ ವರಕರ್ಣಾಭರಣವು 4 ಗಂಗಾಜನಕನೆಂಬ ನಾಮವೆ ಅಂತರಂಗಕೆ ಮಣಿಭೂಷಣಾರಂಗನೆಂಬುವ ನಾಮ ಹಸ್ತಸಿಂಗರದ ಪೀತಾಂಬರವು ತಾಮಾಂಗಿರೀಶನ ನಾಮ ಮಂಗಳಕರ ಭೂಷಣವೈ 5
--------------
ಅಸೂರಿ ರಾಮಸ್ವಾಮಿಅಯ್ಯಂಗಾರ್