ನಿನಗೆ ನಿನ್ನ ನಾಮ ಗುಣಗಳಿಂದರ್ಚನೆ ಗೈವೆನು ಸ್ವಾಮಿ ಪ
ಎನಗೊಂದು ಪದಾರ್ಥವು ದೊರೆಯದು
ಮನ್ಮನದಿ ನೀನೆ ನಿಂತು ಮಾಡಿಸನುದಿನಾ ಅ.ಪ
ಧೇನುಸುವೆನು ವಾಙ್ಮಯನೆನ್ನುತ ಜೀವ ದೇವ ನಿನ್ನಾ
ನಾನಾ ದಿವ್ಯ ಸ್ವರೂಪನೆನ್ನುತಾವಾಹನೆಯನುಗೈವೆ
ಗಾನಲೋಲ ಗಂಗಾಜನಕನು ಎಂದಾನು ಪಾದ್ಯವನು
ಸಮರ್ಪಣೆ ಮಾಳ್ಪೆನು 1
ಶರಣರಿಗಭಯವ ಕೊಡುವನೆಂದು ಅಘ್ರ್ಯಗಳ ಸಮರ್ಪಿಸುವೆನು
ಪರಮ ಪವಿತ್ರನು ನೀನೆನ್ನುತಲಾಚಮನ ಮಾಡಿಸುವೆನು
ಸಮರ್ಪಣೆಗೈವೆನು 2
ಹನುಮತ್ಪ್ರಿಯನಿಗೆ ದಿವ್ಯ ಚಂದನಾಕ್ಷತೆಗಳ ಧರಿಸುವೆನೂ
ಮುದದಲಿ 3
ಭಕ್ತವತ್ಸಲನು ನೀನೆನ್ನುತ ಧೂಪವನೀವೆನು ಸ್ವಾಮಿ
ಭವ ಭಯಹರ ನೀನೆಂದೂ
ನಿತ್ಯತೃಪ್ತಗೆ ಮಹಾ ನೈವೇದ್ಯ ತಾಂಬೂಲವನೀವೆ
ನೀರಾಜನವರ್ಪಿಸುವೆನು 4
ಸೇವೆಯ ಕೊಡೊ 5