ಅಂಗವ ಶಿಂಗರಿಸೊ ಶ್ರೀ ರಾಮಗೆ ಪ.
ರಥವೆಂದು ಮಂಗಳ ಮಹಿಮನ
ಉಂಗುಟದಿಂದ ಬಂದ ಗಂಗೆಯ
ಸ್ನಾನದಿ ಹಿಂಗಿಸು ಭವವೆಂದು ಅ.ಪ.
ಗಂಗಾಜನಕನ ಸ್ಮರಿಸುತ ನಿನ್ನ
ಅಂಗವನುಜ್ಜಿ ಕಲಿಮಲ ತೊಳೆದು
ಭಂಗ ತರದ ಪರಿ
ರಂಗುರಂಗುಗಳ್ವಸ್ತ್ರ ರಂಗಗೆ ಪೀತಾಂಬರವೆಂದು 1
ಗೋಪೀ ಚಂದನ ಲೇಪಿಸುತಂಗಕೆ
ಶ್ರೀಪ ವಲಿವನೆಂದ್ಹರುಷದೊಳು
ಧೂಪಾರತಿ ಅಂಗಾರದಕ್ಷತೆ ಸೊಬಗ
ಶ್ರೀಪತಿ ನೋಟಕೆ ಭೂಪನಾಗಿಹೆನೆಂಧು 2
ಮಂಗಳದನ್ನ ವೀಳ್ಯವ ಮೆದ್ದು ತನ್ನ
ಅಂಗನೆಯೊಳು ಅನಂಗಜನಕನ
ರಂಗನಲೀಲೆಯಂದದಿ ಹರುಷಿಸೀ ಇಂಥಾ 3