ಪಾರ್ವತೀತನಯ ಪಾಲಿಸು ಎನ್ನಾ ಪ.
ಪಾರುಗಾಣಿಸುತೆನ್ನ ಮನದಲ್ಲಿನಿಂದು ಅ.ಪ.
ರಜತಾದ್ರಿವಾಸನ ರಮಣಿ ಪುತ್ರನೆ ನಿನ್ನ
ತ್ರಿಜಗÀ ಪೂಜಿಸುವುದೆಂದರಿತು ನಿನ್ನ
ಭುಜಗ ಭೂಷಣ ಸುತನೆÀ
ಕದನವ್ಯಾತಕೊ ದೇವಾ ಕಡೆಹಾಯಿಸೊ ಗಣಪಾ 1
ಗಂಗಜನಕÀನ ನಾಮ ಹಿಂಗದಲೆ ನುಡಿಸೆನಗೆ ಭೂ
ಜಂಗುಳಿಗೆ ವಿದ್ಯಾಧಿದೇವದೇವಾ
ಹಿಂಗಿಸುತಲಜ್ಞಾನ ರಂಗನಾ ಮರಿಮಗನೆ
ಕಂಗಳಿಂದಲಿ ನೋಡಿ ಸಲಹೆನ್ನನು ದೇವಾ 2
ಶ್ರೀ ಶ್ರೀನಿವಾಸನ್ನ ತೋರುತ ಮನದಲಿ
ಶ್ರೀಕರನೆ ಕರುಣಿಪುದು ಸ್ತುತಿಪ ಮತಿಯಾ
ಏಕಭಕುತಿಯಲಿ ಸ್ತುತಿಸುವಾ ನರರಿಗೆ
ಶ್ರೀಕಮಲನಾಭನ್ನ ತೋರುವಾ ಗಣಪ 3