ಅರ್ಚನೆ ಬಗೆ ಕೇಳಿ ಲೋಕ ಪ
ಕಣ್ಣು ಮುಚ್ಚಿ ಕುಳಿತರೆ ಕೊಡ ಹರಿ ಮುಕ್ತಿಲೋಕಾ ಅ.ಪ
ಜಡವ ಪೂಜಿಸಿದರಲ್ಲೇನೊ ತಾನು |
ಜಡ ತುಲ್ಯ | ನಾಗಿದ್ದಕೆ ಸಮವೇನು ||
ಕೆಡದಿರು ಇದರೊಳಗೆ ನೀನು ತಿಳಿ |
ಒಡನೆ ಕರ್ಮಗಳೆಲ್ಲೇನುಂಟು ಕಾಣೋ 1
ಏಕಾಂತದಲಿ ನಿನ್ನ ಮನಸು ಅ |
ನೇಕವಾಗುವುದು ನಿರಂತರ ಗುಣಿಸು ||
ನೀ ಕೇಳು ಯೋಚಿಸಿ ಗಣಿಸು |
ಸರ್ವ ಆಕಾರದಲ್ಲಿ ಶ್ರೀ ಹರಿಯನ್ನೆ ನೆನಸು 2
ತ್ರಿವಿಧ ಜೀವರು ಮಾಡುವಂಥ ನಡತಿ |
ಹವಣವ ನೋಡಿದು ಬಿಡು ನಿನ್ನ ಪಂಥ ||
ಕವಿಗಳೊಡನೆ ಸುಪಂಥದಿಂದ |
ಪವಮಾನಮತ ಪೊಂದಿ ಭಜಿಪುದು ಇಂಥ 3
ದ್ಯುಣುಕ ಪಿಡಿದು ಬಹುಕಾಲತನಕ |
ನಿತ್ಯ ಸುಶೀಲ ||
ಗುಣವಂತನಾಗೊ ನೀ ಬಹುಳ ಸುಖ- |
ವನಧಿ ರಂಗನ ವ್ಯಾಪಾರವೆನ್ನೊ ಬಾಲ 4
ಆವಾಗ ಮರೆಯದಿರು ಹರಿಯ ಕಂಡ |
ಠಾವಿನಲಿ ಯೋಚಿಸು ಅರಗಳಿಗೆ ಬಯಸದಿರು ಸಿರಿಯ ||
ದೇವ ವಿಜಯವಿಠ್ಠಲ ದೊರೆಯ ನಿನ್ನ
ಭಾವದಲಿ ತಿಳಿಯೊ ಆತನ ಚರಿಯಾ 5