ಹರಿಯೆ ನಿನಗನ್ಯ ದೈವರು ಸರಿಯೆ
ಮೂರ್ಲೋಕ ದೊರೆಯೆ ಪ.
ಭೂತಿದೇವತಿಯು ನಿನ್ನರಸಿಯು ಮೂರ್ಲೋಕದೊಳು
ಖ್ಯಾತೆಯಾಗಿರುವ ಭಾರತಿ ಸೊಸೆಯು ಸುತೆ ಭಾಗೀರಥಿಯು
ಭೂತೇಶನ ಪಡೆದವನಣುಗನು ಪುರು
ಹೂತ ಮುಖ್ಯರು ಸಕಲೋತ್ತಮನೆಂಬರು 1
ನಿನ್ನ ಪೋಲುವ ಕರುಣಾಳುಗಳನ ಕಾಣೆನು ಮೋಹವ
ಅನ್ಯಾಯ ಘಟಿತ ಕರ್ಮಗಳನ್ನ ಮಾಡುವ ಎನ್ನನ್ನ
ಮನ್ನಿಸಿ ಪಾವನ ಮಾಡುವದನ್ನ
ಅನ್ಯರು ತಿಳಿವರೆ ಸುರಗಣ ಮಾನ್ಯ 2
ಪಾತಕ ಬಂಧ ನಿರ್ಮೋಕಗೈವ
ವಿತತಾಚಿದಾನಂದ ಮುಕುಂದ ಪಾಲಿಸು ಕೃಪೆಯಿಂದ
ಕ್ಷಿತಿವರಗತ ಬಹು ಮತಿಯನು ಕರುಣಿಪ
ಹಿತ ಶೇಷಾಚಲಪತಿ ಗೋವಿಂದ 3