ಹೋಗಿ ಬರತೇವ ಸಾಗರನ ಮಗಳೆ ಹೋಗಿ ಬರತೇವ ಪ.
ರುಕ್ಮಿಣಿದೇವಿ ನಿನ್ನ ದುರ್ಗೆರೂಪವ ಕಂಡು ಅಬ್ಬರಿಸುತಾರೆ ಜನರೆಲ್ಲ ಅಬ್ಬರಿಸುತಾರೆ ಜನರೆಲ್ಲ ಮುಯ್ಯಕ್ಕೆನಿರ್ಭಯದಿಂದ ಬರಬೇಕು ಸಖಿಯೆ 1
ಹಿಂಡು ಹಿಂಡು ಕರೆಸಿ ಕುಣಿಸುತ ಖ್ಯಾತಿಲೆ ಮುಯ್ಯ ತಿರುಗಿಸೆ ಸಖಿಯೆ2
ಹಿಂಡು ಕರೆಸವ್ವ ಸಖಿಯೆ 3
ರಂಭೆ ಸತ್ಯಭಾವೆ ಸಂಭ್ರಮದಿ ಬರುವಾಗ ಒಂಭತ್ತು ವಾದ್ಯ ನಿನಗೆಲ್ಲೆಒಂಭತ್ತು ವಾದ್ಯ ನಿನಗೆಲ್ಲೆ ಮುಯ್ಯಕ್ಕೆಡೊಂಬರ ಡೊಳ್ಳು ಹೊಯಿಸವ್ವ ಸಖಿಯೆ 4
ಹಿಂಡು ಬರಲೆವ್ವ ಸಖಿಯೆ 5
ಆವ್ವ ರುಕ್ಮಿಣಿ ನಿನಗೆ ದಿವ್ಯವಾಹನ ವೆಲ್ಲಿಸಿಂಹ ಶಾರ್ದೂಲ ಕರೆಸವ್ವಸಿಂಹ ಶಾರ್ದೂಲ ಕರೆಸಿ ಏರಿಕೊಂಡುಬಾವಾನ ಹಾಂಗೆ ಬಾರವ್ವ ಸಖಿಯೆ 6
ಕೋಗಿ¯ ಸ್ವರದಂತೆ ರಾಗದಿ ರಾಮೇಶನ ಪಾಡಿ ಕೊಂಡಾಡಿ ಅರಿತಿಲ್ಲಪಾಡಿ ಕೊಂಡಾಡಿ ಅರಿತಿಲ್ಲ ಒಡಗೂಡಿ ಕಾಗೆ ಕೂಗಾಡಿ ಬರಲೆವ್ವ ಸಖಿಯೆ7