ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಸೋತುಹೋಗಣ್ಣ ಮಾತುಬಂದಲ್ಲಿ ಜಾಣನಾಗಿ ಸೋತುಹೋಗಣ್ಣ ಮಾತುಬಂದಲ್ಲಿ ಪ ಸೋತುಹೋಗದೆ ಮಾತುಮಾತಿಗೆ ವಾದಿಸಲ್ಕೆ ಘಾತಕತನದ್ವಿಧಿಯು ಬಂದು ಆತುಕೊಂಡು ಕೂತುಕೊಳ್ವುದು ಅ.ಪ ಸೋತೆನೆನ್ನಲು ನಾಚಬೇಡಣ್ಣ ದೇವರು ಕೊಟ್ಟಿಹ್ಯ ಖ್ಯಾತಿಯೇನು ಹೋಗೋದಿಲ್ಲಣ್ಣ ಸುಳ್ಳಲ್ಲವಣ್ಣ ಸೋತೆನೆಂಬುದು ಜಯದ ಮಾತಣ್ಣ ಸತ್ಯ ತಿಳಿಯಣ್ಣ ನೀತಿಗಡಕರ ಮಾತಿನ ತಳ್ಳಿಗೋತ ಕುಣಿಯೊಳೆಳೆವ ಬಳ್ಳ್ಯೆಂದು ಮಾತನಾಡದೆ ಸುಮ್ಮನ್ಹೋಗಲು ನೀತಿವಂತರು ಮೆಚ್ಚುತಾರ 1 ದುಡುಕುಮಾತಿಗೆ ಮಿಡುಕಬೇಡಣ್ಣ ಸತ್ಯದ್ಹೇಳುವ ದೃಢತರ್ವಚನದ ಅಡಕು ತಿಳಿಯಣ್ಣ ಪಡಕೊ ಸುಖವಣ್ಣ ನೀ ತೊಡರಿಕೊಂಡರೆ ತಪ್ಪದು ಕಡೆಯತನಕ 2 ಸೋತೆನೆನದ್ಹತ್ತುವದನಂದೇನಾಯ್ತು ಸೋತು ಓಡಿದ ನೀತಿವಂತ ವಿಭೀಷಣಂದೇನಾಯ್ತು ಮತ್ತು ನಳರಾಜ ಸೋತ ರಾಜ್ಯ ಭಂಡಾರೆಲ್ಲ ಮುಳುಗಿತು ತಿಳಿ ನೀತಿ ಅರಿತು ಮಾತುಮಾತಿಗ್ವಾದಿಸಿ ಕುಲಘಾತಕ್ಕಾದನು ಕೌರವೇಂದ್ರನು ಸೋತಜನರಭಿಮಾನಿ ಶ್ರೀರಾಮ 3
--------------
ರಾಮದಾಸರು