ಮುದದಿ ಪಾಲಿಸೊ ಮುದತೀರಥರಾಯಾ
ಸದ್ಭುಧ ಜನಗೇಯಾ ಪ
ಪದುಮನಾಭ ಪದ ಪದುಮ ಮಧುಪ ಸದಯಾ
ಸದಮಲ ಶುಭಕಾಯಾ ಅ.ಪ
ವದಗಿ ರಾಮಕಾರ್ಯದಿ ನೀ ಮನಸಿಟ್ಟಿ
ಲಂಕಾಪುರ ಮೆಟ್ಟಿ ಹೆದರದೆ ದಿತಿಜರನೆಲ್ಲ ಕೊಂದುಬಿಟ್ಟೆ
ಪುಚ್ಛದಿ ಪುರಸುಟ್ಟ ಕದನದಿ ಭೀಮ ವೃಕೋದರ
ಜಗಜಟ್ಟಿ ಸಂನ್ಯಾಸತೊಟ್ಟಿ1
ಸೀತಾಶೋಕ ವಿನಾಶನ ಮಹಂತಾ
ಮಹಬಲಿ ಹನುಮಂತ
ವಾತಜ ವಾರಿಜ ಜಾತನಾಗುವಂತಾ ಖ್ಯಾತಿಯುಳ್ಳ ವಂಥಾ
ಜಯವಂತಯತಿನಾಥನೆ ಶಾಂತಾ 2
ಶಿರಿಗೋವಿಂದ ವಿಠಲನ ಪ್ರೀತಿ ಕಂದಾ
ಭೀಮನೆ ಆನಂದಾಗರಿದು ಮುರಿದು
ಪರಮತವನೆ ಆನಂದಾ ಮುನಿ ರೂಪದಲಿಂದ
ಬದರಿಗೆ ನಡೆತಂದಾ 3