ದಾಸರಾದವರೆಲ್ಲರು ವ್ಯಾಸರಾಯರನ್ನ ಪಾಡಿ ಪ
ಡಿಂಭ ಪ್ರಲ್ಹಾದನೆನಿಸಿ ಕಂಭ ಜಾತನ ಆಯಾ ಪಿಡಿದಾ
ಡಂಭದಯ್ಯನ ಸುವಾನರಸಿ ಕಂಭಣಿಯೊಳ್ ಖ್ಯಾತನಾದಾ 1
ಯತಿವರ ವ್ಯಾಸನೆನಿಸಿ ಕ್ಷಿತಿಪತಿ ಕೃಷ್ಣನ ಪಿಡಿದಾ
ಚ್ಯುತಿಗಳೆಲ್ಲವನಳಿಸಿ ಶೃತಿ ಸ್ಮøತಿ ಸ್ವಾದವ ಪೇಳ್ದಾ 2
ಗುರು ರಾಘವೇಂದ್ರನೆನಿಸಿ ನರಹರಿ ಪೂಜೆಯ ಗೈದಾ
ದುರಿತಕಾನನ ದುರಿತಾನೆನಿಸಿ ನರಸಿಂಹವಿಠಲನ ನೆನೆದಾ 3