ನೋಡು ನೋಡು ನೋಡಯ್ಯ ರಂಗ
ಮಾಡು ದಯ ಕರುಣಾಂತರಂಗ ಪ
ಖೋಡಿಸಂಸಾರದ ಪೀಡೆಯ ಕಡೆಹಾ
ಕರ ಭವಭಂಗ ಅ.ಪ
ಮಡದಿಮಕ್ಕಳುಯೆಂಬ ಕಡುತೊಡರಿನ ಬಳ್ಳಿ
ತೊಡರಿಕೊಂಡೆನ್ನನು
ಕಡುವಿಧ ನೋಯಿಸುವುದೊಡೆಯನೆ ಕಡಿ ಗಡ1
ಸಜ್ಜಾಗಿಲ್ಲೊಲ್ಲೆ ನಾನು ಪ್ರಪಂಚವಿದು
ಹೆಜ್ಜೆ ಹೆಜ್ಜೆಗೆ ಕಷ್ಟ
ಗರ್ಜಲ್ಲೊರ್ಜಿಸು ಸುಜನರಜ್ಜನೆ 2
ಪ್ರೇಮದಿಂ ಕಂದನ ಪಾಮರಮನಸಿನ
ಕಾಮಿತವಳುಕಿಸಿ
ಕ್ಷೇಮವ ಪಾಲಿಸು ಸ್ವಾಮಿ ಶ್ರೀ ರಾಮನೆ 3