ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಯೋ ಕಾಯೋ ಪ ಕಾಯೋ ಕಾಯೋ ಕಮಲಯತಾಕ್ಷ ಭವ ತೋಯಧಿಯೊಳು ಬಿದ್ದು ಬಾಯ ಬಿಡುವನ ಅ ಅದ್ವೈತ ತ್ರಯದಧ್ವ ಪ್ರವರ್ತಕ ಸದ್ವೈಷ್ಣವರ ಪದದ್ವಯತೋರಿ 1 ಸಂಜೆಯ ತೋರಿ ಧನಂಜಯನುಳುಹಿದ ನಿರಂಜನ ಮೂರ್ತೆ 2 ಸತ್ಯಕಾಮ ತವ ಭೃತ್ಯೆಗೆ ಬಂದಪ ಮೃತ್ಯು ಕಳೆದು ಸಂಪತ್ತು ಪಾಲಿಸಿದೆ 3 ಕುಕ್ಷಿಯೊಳಂದು ಪರೀಕ್ಷಿದ್ರಾಜನ ರಕ್ಷಿಸಿದಂತೆ ಪ್ರತಿಕ್ಷಣದಲಿ 4 ಎಲ್ಲರೊಳಿಹ ಕೈವಲ್ಯದರಸು ನೀ ಬಲ್ಲಿದನೆಂಬುದ ಬಲ್ಲೆ ಬಹು ಬಗೆ 5 ನೀ ದಯ ಮಾಡದಿರೀ ದಿವಿಜರು ಒಲಿ ದಾದರಿಸುವರೆ ವೃಕೋದರ ವಂದ್ಯ 6 ಅಧಮ ನಾನಹುದುದಧಿ ಮಥನ ಸ ನ್ಮುದ ಮುನಿಮತ ಪೊಂದಿದವರಣುಗನು 7 ಕ್ಷುದ್ರ ಭೂಮಿಪರುಪದ್ರವ ಕಳೆದು ಸು ಭದ್ರವೀಯೋ ಕ್ಷುದ್ರುಮದಂತೆ 8 ವೀತಭಯ ಜಗನ್ನಾಥ ವಿಠಲ ಸುಖೇತರ ಕಳೆದು ಮಹಾತಿಶಯದಲಿ 9
--------------
ಜಗನ್ನಾಥದಾಸರು
ದಯಮಾಡೋ ದಯಮಾಡೋ ಪ ಭಯಕರ ಸುಮಹ -ದ್ಭಯಹರ ಯತಿವರ ಅ.ಪ ಮೋಕ್ಷದ ಕರುಣ - ಕಟಾಕ್ಷದಿ ಎನ್ನನು ವೀಕ್ಷಿಸಿ ನಿನ್ನ ನಿರೀಕ್ಷಿಸುವಂತೆ 1 ಲಕ್ಷ್ಯಾಧೀಶರ ಲಕ್ಷಿಲ್ಲದೆ ಙÁ್ಞ - ನಾಕ್ಷದಿ ತವಪದ ಲಕ್ಷಿಸುವಂತೆ 2 ಸತ್ಯಾಭಿದ - ನಪ - ಮೃತ್ಯುಹರಿಸಿ ಮುದ ವಿತ್ತು ಪಾಲಿಸಿದ - ಉತ್ತಮ ಎನಗೇ 3 ಬಲ್ಲಿದತರ ಮಹ - ಪ್ರಲ್ಹಾದ ನಿನ್ನೊಳು ನಿಲ್ಲಿಸು ಎನಮನ - ಎಲ್ಲಿ ಚಲಿಸದಂತೆ 4 ದಾತಗುರು ಜಗನ್ನಾಥ ವಿಠಲನ ದೂತಾಗ್ರಣಿ ಸು - ಖೇತರ ಕಳೆದು 5
--------------
ಗುರುಜಗನ್ನಾಥದಾಸರು
ಪ್ರದೋಷಕಾಲವಿದೀಗ ನೀ ಮರೆ- ಯದೇ ನೆನೆಯೊ ಶಿವನಾ ಶಂಕರನಾ ಪ ಸದಾ ಸಕಲ ಸುರರಿಂದ ಕೂಡಿ ತಕ ತಧಿಂ ಎನುತ ಕುಣಿಯುವ ಶಿವನೀಗಲೂ ಅ.ಪ ಸಕಲ ವಾದ್ಯಗಳೂ ಶಂಭೋ ಎಂಬ ಸುವಾದಗಳೂ ತುಂಬುರ ನಾರದರೂ ನುಡಿಸಿ ಹೇ- ರಂಬ ಜನಕ ವಿಶ್ವಂಭರ ಎಂದು ದಿ- ಗಂಬರನಾಗಿ ಚಿದಂಬರ ಕುಣಿಯುವ 1 ಭೂಷಣಗಳ ಮಾಡಿ ಭಿಕ್ಷವನೂ ಬೇಡಿ ತಾತನಾಗಿ ಮೆರೆದು ಹಿಮ ಶೈಲ- ಜಾತೆ ಸಹಿತ ಪ್ರಖ್ಯಾತನಾಗಿ ಭವ- ಭೀತಿ ಬಿಡಿಸಿ ದುಃಖೇತರ ಕೊಡುವನು 2 ಗಿರಿರಾಜಕುಮಾರಿ ಕೈಮುಗಿದು ತನಗರುಹು ತತ್ವವೆನಲು ಸುರರು ಭಲಾ ಎನಲು ಪರಮ ಗುಣಸಾಂದ್ರ | ಕೇಳು ದಿನ- ಪರಾತ್ಪರನು ಶ್ರೀ ಗುರುರಾಮವಿಠಲ ವರತಾರಕ ಮಂತ್ರವಿದೇ ಎಂದನು 3
--------------
ಗುರುರಾಮವಿಠಲ