ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಂಡೆ ಕಂಡೆನು ಸ್ವಾಮಿಯ ಸುಪ್ರೇಮಿಯಾ ಪ ಕಂಡೆ ಕಂಡೆನು ಕೃಷ್ಣರಾಯನ ಪುಂಡರೀಕ ದಳಾಯತಾಕ್ಷನ ಪಾಂಡವಪ್ರಿಯ ಪಾರ್ಥಸಖನ ಉ ದ್ದಂಡ ಮಹಿಮ ಸುರೇಂದ್ರವಂದ್ಯನ ಅ.ಪ. ಕನಕ ನವಮಣಿ ಖಚಿತ | ವಾಗಿಹ ಸಿಂಹಾ ಸನದೊಳು ಸಲೆ ಶೋಭಿತ | ಸುರುಚಿರ ದಿವ್ಯ ಘನನೀಲನಿಭರಂಜಿತ | ನಿರ್ಮಲಗಾತ್ರ ಕುಂಡಲ ಮಣಿ ಗಣದ ಹಾರಾದಿ ಬಹು ಭೂ ಷಣಗಳನುಪಮ ಕಾಂತಿಯಿಂದಲಿ ಮಿನುಗುವತಿ ಲಾವಣ್ಯ ಮೂರ್ತಿಯ 1 ಕೋಟಿ ಮನ್ಮಥರೂಪನ | ಶ್ರೀಕೃಷ್ಣನ ಹಾಟಕಾಂಬರಧಾರನ | ಕರುಣಾಮಯ ಕಂಬು ಕಂಠನ ಆಟಮಾತ್ರದಿ ಪ್ರಬಲ ದೈತ್ಯ ಮ ಹಾಟವಿಯ ನಿರ್ಧೂಮಗೈದನ ಖೇಟವಾಹನನೆನಿಪ ತ್ರಿಜಗದಿ ಸಾಟಿಯಿಲ್ಲದ ದೇವದೇವನ 2 ಮೆರೆವ ದ್ವಾರಕಾಧೀಶನ | ದ್ರೌಪದಿದೇವಿ ಮೊರೆ ಕೇಳಿ ಸಲಹಿದನ | ಭಜಿಪರ ಅವ ಸರಕೊದಗುವ ದೇವನ | ಶ್ರೀ ಕೃಷ್ಣನ ತರಳತನದಲಿ ಗೋಕುಲದಿ ತಾ ಪರಿಪರಿಯ ಲೀಲೆಗಳ ತೋರಿದ ಪರಮ ಪುರುಷನ ಕರಿಗಿರೀಶನ ಸರಿಯಧಕರಿಲ್ಲದ ಸುರೇಶನ 3
--------------
ವರಾವಾಣಿರಾಮರಾಯದಾಸರು
ರಥವನೇರಿದ ರಥಿಕನಾರೇ ಪೇಳಮ್ಮಯ್ಯ ಕಥಿತಧ್ಯಾತ ಸಂಸ್ತುತ ವಿತತಾನತ ಹಿತಕರ ದಿವಿಷÀತ್ಪತಿ ಕಾಣಮ್ಮ ಪ ಕೋಟಿ ಭಾಸ್ಕರ ಪ್ರಭಾಟೋಪದಿ ರಾಜಿಸುವ ಪೇಳಮ್ಮಯ್ಯ ಅ.ಪ. ತಾಟಂಕಯುತ ವಧೂಟಿಯರಿಕ್ಕೆಲದಲಿಹ ನೋಡಮ್ಮಯ್ಯ ಆಟದೆ ಕುರುಜ ಮಹಾಟವಿ ಸವರಿ ಕಿ ರೀಟಯ ಸಲಹಿದ ಖೇಟವಾಹನನೇ ಕೇಳಮ್ಮಯ್ಯ 1 ಭುಜಗರಾಜ ಫಣಿಮಣಿ ಮಂಡಲ ಮಂಡಿತನೇ ನೋಡಮ್ಮಯ್ಯ ವಿಜಯವರದ ಅರಿಗದಾಂಬುಜಧರ ಭುಜನೇ ನೋಡಮ್ಮಯ್ಯ ಗಜಚರ್ಮಧರಾದ್ಯನಿಮಿಷಗಣಸೇವಿತನ ನೋಡಮ್ಮಯ್ಯ ಅಜನ ನಾಭಿಯಲಿ ಪಡೆದು ಚರಾಚರ ಸೃಜಿಸಿ ಪೇಳ್ದ ನೀರಜಲೋಚನ ಕಾಣಮ್ಮ 2 ಏತಾದೃಶ ಮಹಾಮಹಿಮ ರಮಾವಲ್ಲಭನೆ ಪೇಳಮ್ಮಯ್ಯ ಶ್ವೇತ ದ್ವೀಪಾನಂತಾಸನ ವೈಕುಂಠನುಳಿದು ಪೇಳಮ್ಮಯ್ಯ ವೀತಭಯ ಜಗನ್ನಾಥವಿಠಲ ಬರಲೇಕೆ ಪೇಳಮ್ಮಯ್ಯ ಭೂತಳ ಜನರಭಿಲಾಷೆ ಸಲಿಸಲು ವಾತಾಶನ ಗಿರಿಗಿಳಿದ ಕಾಣಮ್ಮಯ್ಯ 3
--------------
ಜಗನ್ನಾಥದಾಸರು
ಹರೇ ಹರೇ ಕೃಷ್ಣ ಹರೇ ಕೃಷ ಹರೇ ಹರೇ ಹರೇ ಪ ಕೌಸಲ್ಯ ವರವಂಶೋದ್ಭವ ಸುರ ಸಂಸೇವಿತ ಪದರಾಮ ಹರೇ ವಂಶೋದ್ಭವ ಶ್ರೀ ಕೃಷ್ಣಹರೇ 1 ಮುನಿಮಖರಕ್ಷಕ ದನುಜರಶಿಕ್ಷಕÀ ಘಣಿಧರ ಸನ್ನುತರಾಮಹರೇ ಘನವರ್ಣಾಂಗ ಸುಮನಸರೊಡೆಯ ಶ್ರೀ - ವನಜಾಸನ ಪಿತ ಕೃಷ್ಣ ಹರೇ 2 ಶಿಲೆಯ ಪಾದರಜದಲಿ ಸ್ತ್ರೀ ಮಾಡಿದ ಸುಲಲಿತ ಗುಣನಿಧಿ ರಾಮ ಹರೇ ಬಲುವಕ್ರಾಗಿದ್ದ ಬಲೆಯ ಕ್ಷಣದಲಿ ಚಲುವೆಯ ಮಾಡಿದ ಕೃಷ್ಣ ಹರೇ 3 ಹರಧನುಭಂಗಿಸಿ ಹರುಷದಿಜಾನಕಿ ಕರವಪಿಡಿದ ಶ್ರೀರಾಮ ಹರೇ ಸಿರಿ ರುಕ್ಮಿಣಿಯನು ತ್ವರದಲಿ ವರಿಸಿದ ಶರಣರ ಪಾಲಕ ಕೃಷ್ಣ ಹರೇ 4 ಜನಕ ಪೇಳೆ ಲಕ್ಷ್ಮಣ ಸೀತಾ ಸಹ ವನಕೆ ತೆರಳಿದ ರಾಮ ಹರೇ ವನಕೆ ಪೋಗಿ ತನ್ನಣುಗರೊಡನೆ ಗೋ - ವನು ಪಾಲಿಪ ಶ್ರೀ ಕೃಷ್ಣ ಹರೇ5 ತಾಟಕೆ ಖರಮಧು ಕೈಟಭಾರಿಪಾ ಪಾಟವಿ ಸುರಮಖ ರಾಮಹರೇ ಆಟದಿ ಫಣಿಮೇಲ್ ನಾಟ್ಯವನಾಡಿದ ಖೇಟವಾಹ ಶ್ರೀ ಕೃಷ್ಣ ಹರೇ 6 ಚದುರೆ ಶಬರಿಯಿತ್ತ ಬದರಿಯ ಫಲವನು ಮುದದಿ ಸೇವಿಸಿದ ರಾಮ ಹರೇ ವಿದುರನ ಕ್ಷೀರಕೆ ವದಗಿ ಪೋದ ಶ್ರೀ ಪದುಮನಾಭ ಜಯ ಕೃಷ್ಣ ಹರೇ 7 ಸೇವಿತ ಹನುಮ ಸುಗ್ರೀವನ ಸಖಜಗ - ತ್ಪಾವನ ಪರತರ ರಾಮಹರೇ ದೇವ ದೇವ ಶ್ರೀ ಕೃಷ್ಣ ಹರೇ 8 ಗಿರಿಗಳಿಂದ ವರಶರಧಿ ಬಂಧಿಸಿದ ಪರಮ ಸಮರ್ಥ ಶ್ರೀರಾಮ ಹರೇ ಗಿರಿಯ ತನ್ನ ಕಿರಿ ಬೆರಳಿಲೆತ್ತಿ ಗೋ - ಪರನ ಕಾಯ್ದ ಶ್ರೀ ಕೃಷ್ಣ ಹರೇ 9 ಖಂಡಿಸಿದಶಶಿರ ಚಂಡಾಡಿದ ಕೋ - ದಂಡಪಾಣಿ ಶ್ರೀ ರಾಮ ಹರೇ ಪಾಂಡುತನಯರಿಂ ಚಂಡಕೌರವರ ದಿಂಡುಗೆಡಹಿಸಿದ ಕೃಷ್ಣ ಹರೇ 10 ತವಕದಯೋಧ್ಯಾ ಪುರಕೈದಿದ ತ - ನ್ಯುವತಿಯೊಡನೆ ಶ್ರೀ ರಾಮ ಹರೇ ರವಿಸುತ ತನಯಗೆ ಪಟ್ಟವಗಟ್ಟಿದ ಭವತಾರಕ ಶ್ರೀ ಕೃಷ್ಣ ಹರೇ 11 ಭರತನು ಪ್ರಾರ್ಥಿಸಲರಸತ್ವವ ಸ್ವೀ - ಕರಿಸಿದತ್ವರದಲಿ ರಾಮ ಹರೇ ವರಧರ್ಮಾದ್ಯರ ಧರಿಯೊಳು ಮೆರೆಸಿದ ಪರಮಕೃಪಾಕರ ಕೃಷ್ಣ ಹರೇ 12 ಧರೆಯೊಳಜ್ಞಜನರನು ಮೋಹಿಪುದಕೆ ಹರನ ಪೂಜಿಸಿದರಾಮ ಹರೇ ಹರನ ಪ್ರಾರ್ಥಿಸಿವರವನು ಪಡೆದಾ ಚರಿತೆಯಗಾಧವು ಕೃಷ್ಣ ಹರೇ 13 ಅತುಳಮಹಿಮ ಸದ್ಯತಿಗಳ ಹೃದಯದಿ ಸತತ ವಿರಾಜಿಪÀರಾಮಹರೇ ಸಿತವಾಹನ ಸಾರಥಿಯೆನಿಸಿದ ಸುರತತಿ ಪೂಜಿತ ಪದ ಕೃಷ್ಣ ಹರೇ 14 ರಾಮ ರಾಮ ಯಂದ್ನೇಮದಿ ಭಜಿಪರ ಕಾಮಿತ ಫಲದ ಶ್ರೀ ರಾಮಹರೇ ಪ್ರೇಮದಿ ಭಕ್ತರ ಪಾಲಿಪ ಶ್ರೀ ವರ - ದೇಶವಿಠಲ ಶ್ರೀ ಕೃಷ್ಣ ಹರೇ 15
--------------
ವರದೇಶವಿಠಲ