ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತೆರಳಿದರು ಶ್ರೀ ಜಗನ್ನಾಥದಾಸಾರ್ಯರು ಸಿರಿಪತಿಯ ಸ್ಮರಿಸಿ ಹರಿಪುರಕೆ ಹರುಷದಲಿ ಪ ವರಶುಕ್ಲವತ್ಸರದ ಭಾದ್ರಪದ ಶಿತಪಕ್ಷ ಹರಿವಾರ ನವಮಿಯಲ್ಲಿ ಸುರಸಿದ್ಧ ಸಾಧ್ಯ ಸನ್ಮುನಿಗಣಾರ್ಚಿತ ಪಾದ ಹರಿಯೆ ಪರನೆಂದೆನುತಲಿ ಧರಣಿಯನು ತ್ಯಜಿಸಿ ಬಹುಮಾನಪೂರ್ವಕವಾಗಿ ಬೆರೆದು ಸುರಸಂದಣಿಯಲಿ ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು ವರವಿಷ್ಣುದೂತ ವೈಮಾನಿಕರ ಒಡಗೂಡಿ 1 ಅತಿಪ್ರೇಮಿಗಳು ಹಸನ್ಮುಖರು ದಯೆ ಬೀರುವರು ಖತಿದೂರರಿವರು ಜಗದೀ ಮಿತಿಮೀರಿ ಶ್ರೀಹರಿಯ ಕಥೆ ನಾನಾ ಪರಿಯಲ್ಲಿ ಅತಿಶಯದಿ ಪೇಳಿ ಇಹಕೆ ಸತತವು ಶರಣರ್ಗೆ ಗತಿಯಾಗುವಂತೆ ಸ ತ್ವಥವಿಡಿಸಿ ಕರುಣದಿಂದ ಹಿತವಂತರೆನಿಸಿ ಸಮ್ಮತವಾಗಿ ಸರ್ವರಿಗೆ ಮತಿದೋರಿ ಕೊಟ್ಟು ಸದ್ಗತಿಯಗೋಸುಗವಾಗಿ 2 ಆಚರಣೆಯಲಿ ಒಂದರಘಳಿಗೆ ಬಿಡದೆ ಬಲು ಖೇಚರಾರೂಢ ಹರಿಯಾ ಸೋಚಿತಾರಾಧನೆಯ ಮಾಡಿ ಮರೆಯದಲೆ ಮಹಾ ವೈಚಿತ್ರ್ಯವನು ತೋರಿ ಈ ಚರಾಚರದಿ ಸಂಗೀತ ಸಾಹಿತ್ಯದಲಿ ಪ್ರಾಚಾರ್ಯವಂತರೆನಿಸೀ ಆ ಚತುರ್ದಶಭುವನಪತಿ ಶ್ರೀದವಿಠಲನ ಯೋಚನೆಯ ಬಿಡದೆ ಮಂಗಳ ಶಬ್ದವಾದ್ಯದಿಂ 3
--------------
ಶ್ರೀದವಿಠಲರು
ಶ್ರೀಕರಾರ್ಚಿತ ವಿಠಲ | ಸಾಕ ಬೇಕಿವಳಾ ಪ ವಾಕು ಮನ್ನಿಸುತಾ ಅ.ಪ. ಕಂಸಾರಿ ತವಪಾದಪಾಂಸು ಸೇವಾ ಸಕ್ತೆ | ಸಂಶಯ ನಿರಹಿತಾಅಂಶ ಆವೇಶ ಅವ | ತಾರಗಳ ತಿಳಿಸುತಲಿಶಂಸನದಿ ತವನಾಮ | ಸಂಪ್ರೀತನಾಗೊ 1 ದುಷ್ಕರ್ಮಗಳ ಭಾದೆ | ದೂರಾಗುವಂತೆಸಗೊನಿಷ್ಕಾಮ ಕರ್ಮಕ್ಕೆ | ಮಾರ್ಗವನೆ ತೊರೋ |ಶುಷ್ಕ ಆಚಾರಗಳ | ತ್ಯಜಿಸುತ್ತ ತವನಾಮಅಕ್ಕರದಿ ಭಜಿಪಂಥ | ಚೊಕ್ಕಮನವೀಯೊ 2 ಶರ್ವವಂದ್ಯನೆ ದೇವ | ತವನಾಮ ಸಂಸ್ಕøತಿಯಸರ್ವದಾ ಸರ್ವತ್ರ | ಇವಳಿಗೊದಗಿಸುತಾಭವವನದಿ ಉತ್ತರಿಸೊ | ಭವರೋಗ ಭೇಷಜನೆದರ್ವಿಜೀವಿಯ ಕಾಯೊ | ಪವನಂತರಾತ್ಮ 3 ಸೃಷ್ಟಾದಿಕರ್ತನೇ | ಸುಗುಣಮೂರುತಿ ದೇವಕಷ್ಟಂಗಳ ಪರಿಹರಿಸಿ | ಕಾಪಾಡೊ ಹರಿಯೇಕೃಷ್ಣಮೂರುತಿ ದೇವ | ಕಾರುಣ್ಯ ಸಾಗರನೆಸುಷ್ಠಮನ ನಿಲಿಸೊ ತವ | ಚರಣದೊಳು ಹರಿಯೆ 4 ಸೂಚಿಸಲು ತೈಜಸನು | ಯೋಚನೆಯ ಕೈಕೊಂಡುವಾಚಿಸಿಹೆ ಅಂಕಿತದಿ | ದಾಸ ಸದ್ವೀಕ್ಷಾ |ಮೋಚ ಕೇಚ್ಛೆಯ ಮಾಡಿ | ಕೈಪಿಡಿಯೊ ಈಕೆಯನುಖೇಚರಾಂತಕ ಗುರು | ಗೋವಿಂದ ವಿಠಲಾ 5
--------------
ಗುರುಗೋವಿಂದವಿಠಲರು
ರಕ್ಷೀಸಬೇಕೆಮ್ಮನನುದಿನದಲ್ಲಿ |ಪಕ್ಷಿರಾಜನೆ ಹರೀಸ್ಯಂದನಾ ಸ್ವಾಮಿ ಪಇಂದ್ರಲೋಕಕ್ಕೆ ಪೋಗಿ ಕಲಹ ಮಾಡಿಪೀಯೂಷ|ತಂದನುಜರಿಗಿತ್ತ ಧೀರನೆ |ಸಿಂಧೂವಿನೊಳಗಿದ್ದಕೂರ್ಮಗಜಮಂದಿಯಾ |ತಿಂದು ದಕ್ಕಿಸಿಕೊಂಡ ವೀರನೇ 1ಪಾದಪ ಮುರಿದು ವಾಲಖಿಲ್ಲ್ಯೆರ ಪೋಷಿಸಿ |ಮೋದದಿಂದ ವರವು ಪಡಿಯೋ ||ಮಾಧವನಂಘ್ರಿ ಕಮಲದೊಳಗೆ ಇಟ್ಟ |ಹೇ ದಯಾಂಬುಧಿ ನಿನಗೆಣೆ ಯಾರೋ 2ಅರುಣಾನುಜ ಮಾತೆಯ ಬಯಕೆ ಪೂರೈಸೀದ |ಪರಮಸಮರ್ಥ ಭಕ್ತವತ್ಸಲಾ ||ಉರಗಾಶನನೆ ನಿನ್ನ ಪ್ರಾರ್ಥಿಸುವೆನುನಿತ್ಯ|ಹರಿಸೇವೆ ವಿನಹ ಮತ್ತೊಂದೊಲ್ಲೆನೊ 3ಪ್ಲವಗರ ಪಾಲಿಸಿದೆ ರಘುಜಾನ ಒಲಿಸಿದೆ |ತವಕಬಲಿವೈದ ಮುಕುಟ ತಂದೆ ||ದಿವಿಜರಿಗೆ ಸಹಾಯವಾದೆ ವಿಪ್ರರ ಕಾಯ್ದೆ |ಅವರಾರೇನರಿಯರೊ ನಿನ್ನ ಲೀಲೆ 4ಶ್ರೀನಾಥನ ಪಾದಾಬ್ಜದಲ್ಲಿನಿರತಮನ |ತಾನಿರುವಂತಾಗಲಿ ಖೇಚರಾ ||ಮೌನಿ ಕಶ್ಯಪ ಜಾತಾ ಲಾಲಿಸುವದೆನ್ನ ಮಾತಾ |ಪ್ರಾಣೇಶ ವಿಠಲನ ನಿಜದೂತ 5
--------------
ಪ್ರಾಣೇಶದಾಸರು