ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಕಾಲವೆಂತು ಕಳೆಯಲೆನ್ನಯ್ಯ ಪ ಕಾಲಕಳೆಯಲೆಂತು ನಾನು ತಾಳಿಮೂಗುತಿ ಕಾಣದೊನಿತೆಯ ಹಾಳುಮುಖವ ನೋಡೆವೆಂದು ಶೀಲಮುತ್ತೈದೇರ್ಹಳಿಯುತಿಹ್ಯರು ಅ.ಪ ಏಳುಸುತ್ತಿನಕೋಟಿ ಪಟ್ಟಣದಿ ಖೂಳರುಪಟಳ ಹೇಳಲಳವಲ್ಲ ಸೇರಿ ವಿಧ ವಿಧದಿ ದಾಳಿನಿಕ್ಕಿ ಹಾಳು ಮಾಡ್ವರು ಮನಕೆ ಬಂದತೆರದಿ ಗೋಳು ಕೇಳುವರಿಲ್ಲವೋರ್ವರು ತಾಳೆನೀಬಾಧೆ ಶೀಲದೆನ್ನ ಬಹು ಜೋಕಿಯಿಂ ಮೇಲ್ಮಾಲಿನೋಳಿಟ್ಟು ಆಳುವಂಥ ಮೂಲಪುರಷನಿಲ್ಲದಿನ್ನು 1 ಆರು ಕೇಳುವರಿಲ್ಲ ಇವಳಿಗೆಯೆನುತ ಕೀಳ ಮೂರು ಮಂದಿ ಊರ ಬೀದಿಯೊಳಗೆ ದಾರಿ ತರುಬಿ ಸಾರಿ ತರಿವರು ಮಾರಕೇಳಿಗೆ ಸೈರಿಸಲಿ ಹ್ಯಾಗೆ ಚೋರನೋರ್ವನು ಮೀರಿ ಬಾಧಿಪ ಆರು ಮಂದಿ ಬಿಡದೆ ಎನ್ನನು ಘೋರಿಸುವರು ನಾನ ವಿಧದಿ ಪಾರುಗಾಣೆನು ವ್ರತದಿ ಇನ್ನು 2 ಪತಿಯು ಇಲ್ಲದ ಜನ್ಮವ್ಯಾತಕ್ಕೆ ಕ್ಷಿತಿಯಮೇಲೆ ಸತಿಗೆ ಪರಮ ಗತಿಯ ಕೊಡಲಿಕ್ಕೆ ಪತಿಯೆ ಬಾಧ್ಯ ಇತರರು ಕಾರಣಲ್ಲ ಕಾಯಕ್ಕೆ ಜತನ ಗೈಲಿಕ್ಕೆ ಪ್ರಥಮ ಮುತ್ತಿನ ಮೂಗುತಿಯನು ಹಿತದಿ ಕರುಣಿಸಿ ಪತಿಯಾಗೆನಗೆ ಗತಿಯ ನೀಡಿ ಹಿತದಿಂ ಸಲಹು ಪತಿತ ಪಾವನೆನ್ನ ಪ್ರಾಣ ಶ್ರೀರಾಮ 3
--------------
ರಾಮದಾಸರು
ಮಾನ ನಿನ್ನದು ಅಭಿಮಾನ ನಿನ್ನದು | ದಾನವಾಂತಕ ರಂಗ ದಯಮಾಡಿ ಸಲಹೊಪ ಒಡೆಯಳು ಕುಳಿತಿರಲು ತೊತ್ತಿನ ಮುಂದಲಿಯ | ಪಿಡಿದೆÀಳೆದೊಯ್ದು ಘಾಸಿಯನು ಮಾಡಿ || ಅಡಿಗಡಿಗೆ ಅಪಮಾನಗೊಳಿಸಿ ಕೊಲೆ ಮಾಡಿದರೆ | ಒಡತಿಗಲ್ಲದೆ ಕೊರತೆ ಅವಳಿಗೇನಯ್ಯಾ1 ಸದನದೊಳು ಪುರುಷನು ಇರುತಿರಲು ಹೆಂಡತಿಯ | ಎದೆಯ ಮೇಲಿನ ಸೆರಗು ಸೆಳೆದುಕೊಂಡು|| ಒದೆದು ಕೈ-ಕಾಲಿಂದ ಮಾನಹಾನಿ ಮಾಡಿದರೆ | ಅದು ಪುರುಷಗಲ್ಲದೆ ವಧುವಿಗೇನಯ್ಯಾ 2 ಪಿತನ ಬಳಿಯಲಿ ಮಗನು ಕುಳಿತಿರಲು ವರ ಮನುಜ | ಖರೆಯಿಂದ ಕೆಡಹಿ ಪಾಶದಲಿ ಕಟ್ಟಿ ಬಿಗಿಯಾಗಿ || ಮತಿಗೆಡಿಸಿ ನಾನಾ ಪ್ರಕಾರ ಭಂಗವ ಮಾಡೆ | ಕ್ಷತಿ ತಂದೆಗಲ್ಲದೆ ಕುವರಗೇನಯ್ಯಾ3 ಆಳುವ ದೊರೆಯ ಸಮ್ಮುಖದಲಿ ಬಂಟನಿರೆ | ಖೂಳರು ಬಂದು ಶಸ್ತ್ರವನು ತೆಗೆದು || ಕೀಳು ಮಾಡಿ ಬಂಟನ ಅಭಿಮಾನ ಕೊಂಡರೆ ಏಳಲವು ಅರಸಗಲ್ಲದೆ ಬಂಟನಿಗೇನು 4 ಸತ್ಯ ಸಂಕಲ್ಪ ಸರ್ಮೋತ್ತಮ ಸುರಪಾಲ | ಅತ್ಯಂತ ಪಾಲಸಾಗರ-ಸದನನೆ || ಭೃತ್ಯರಪಮಾನ ಅಭಿಮಾನ ನಿನ್ನದು ಸದಾ | ಸಿರಿ ವಿಜಯವಿಠ್ಠಲರೇಯಾ 5
--------------
ವಿಜಯದಾಸ
ಶ್ರೀ ರಮೇಶನೆ | ಶ್ರೀ ನಾರಸಿಂಹ ಶ್ರೀ ರಮೇಶನೆ ಪ. ಶ್ರೀ ರಮೇಶ ಸುರ ಸಾರ್ವಭೌಮ ಭವ ತಾರಕಗೊಳಿಸುವ ಕಾರಣಪುರುಷ ಅ.ಪ. ಆದಿಮೂಲನೆ | ಅಪಾರ ಮಹಿಮ ಖೇದದೂರನೆ ವಾದಿಪ ಪಿತನೊಳು ಸಾಧಿಪೆ ನಿನ ಮತ ಮೋದಗೊಳಿಸಿ ಪ್ರಹ್ಲಾದನ ಪೊರೆದೆ 1 ಶೌರಿ ಭೂಧರಾ ದೊರೆ ಕಾದಿದ ದುಷ್ಟ ದೈತ್ಯಾದಿಗಳ ಕೊಂಡು ಮೋದವಿತ್ತೆ ಭೂದೇವಿಗೆದೆ ಶ್ರೀಶಾ 2 ಭೂಪರೈವರು | ಎದುರಲ್ಲಿ ಇರಲು ಪಾಪಿ ಖೂಳರು ದ್ರೌಪದಿ ವಸನವ ಕೈಪಿಡಿದೆಳೆಯಲು ಪತಿ ಸಲಹೆನೆ ತಾಪವ ಬಿಡಿಸದೆ 3 ನೀರೊಳಾಡಿದೆ | ನೀ ಕಲ್ಲು ಪೊತ್ತು ನಾರಿಯ ತಂದೆ ನಾರಸಿಂಹ ವಟು ವೀರರಾಮಚಂದ್ರ ಜಾರಚೋರ ವಸ್ತ್ರದೂರನೆ ಕಲ್ಕಿ 4 ಗೋಪಾಲಕೃಷ್ಣ | ವಿಠ್ಠಲದೇವ ಕಾಪಾಡೊ ಕೃಷ್ಣ ರೂಪ ರೂಪಾಂತರ ವ್ಯಾಪಿಸಿ ಜಗದೊಳು ಶ್ರೀಪತಿ ಹೃದಯದಿ ರೂಪವ ತೋರೊ 5
--------------
ಅಂಬಾಬಾಯಿ