ನೀನೆ ಕರುಣಿ ದೀನಪಾಲ
ದಾನವಾಂತಕನಾಥಬಂಧು ಪ
ಕಾಸಾರಕಿಳಿದು ಕರಿಯ ಕಾಯ್ದಿ
ಹೇಸದೆ ತರುಣಿ ಮೊರೆಯ ಕೇಳ್ದಿ
ಬೇಸರಿಲ್ಲದೆ ದಾಸಜನರ
ಆಸೆ ಪೂರೈಸಿ ಪೊರೆದಿ ಪ್ರಭು 1
ಬಾಲಗೈದ ತಪಕೆ ಒಲಿದಿ
ಮೇಲುಪದವಿ ಕರುಣಿಸಿದಿ
ಕಾಲಗೆ ಕಾಲನಾಗಿ ಮೆರೆವ
ಖೂಳರಕ್ಕಸನುದರ ಸೀಳ್ದಿ 2
ನಿಗಮ ತಂದಿ
ಭಾರಬೆನ್ನಲಿ ಪೊತ್ತು ನಿಂದಿ
ಹಾರೈಸಿ ಕರೆವ ಭಕುತ ಜನಕಾ
ಧಾರ ಮಮಪ್ರಾಣೇಶ ಶ್ರೀರಾಮ 3