ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದು ಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ 4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ 5
--------------
ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ
ಓಡದಿರು ಓಡದಿರು ಖೋಡಿ ಮನವೆ ಮೂಢತನದಲಿ ಬರುವ ಕೇಡುಗಳನರಿದರಿದುಪ. ಬೀಸುವದು ಬಿರುಗಾಳಿ ಸೂಸುವದು ಉರಿಮಳೆಯು ಪೆಸರಿಲ್ಲದೆ ಕತ್ತಲೆಯು ಮುಸುಕುತಿಹುದು ಈಸು ನೆಲಸಿಹ ಘೋರ ಭೀಷಣಾಟವಿಯೊಳಗೆ ಬೀಸುವನು ಬೇಡನೊಬ್ಬನು ಬಲೆಯನಿಕದಕೊ1 ಅತ್ತೆಯೆಂಬುವಳು ನಿನ್ನ ನೆತ್ತಿಯಲಿ ತೈಲವನು ಒತ್ತಿ ಮೋಹದಿ ವಹಿಸಿಕೊಂಡಿರುವಳು ಅತ್ತ ಕಡೆ ಬೇಡ ಹಿಂದೊತ್ತಿ ಬರುವರೆ ಬೇಗ ತುತ್ತಾಗ ಎನುತ ಬಾಯ್ ತೆರೆದಿರುವಳು 2 ಮುಂಗಡಯೊಳ್ ಸಾಲಾಗಿ ಅಂಗಡಿಗಳಿರುತಿಹವು ಹಂಗಿಗನು ನೀನಾಗಿ ಬೇಡ ಅವರ ಸಂಗ ಗೈಯುತ ವ್ಯಾಪಾರಂಗಳನು ಮಾಡಿದರೆ ಭಂಗಿಯನು ಕೊಟ್ಟು ಬಲು ಭಂಗಪಡಿಸುವರಯ್ಯ 3 ಖೂಳತನ ಬೇಡ ಬಾ ಮಾಳಿಗೆಗೆ ಹೋಗುವ ಏಳು ಮೆಟ್ಟಲ ದಾಂಟಿ ಲೋಲತನದಿ ಅಲದೆಲೆ ಮಂಚದಲಿ ಲೋಲನಾಗಿಹನ ಪದ ಆಲಿಂಗನದಿ ಬಲು ಕುಶಾಲಿನಲ್ಲಿರು ಕಂಡ್ಯ4 ಈ ರೀತಿಯಲಿ ನಿನಗೆ ಸಾರಿ ಪೇಳಿದೆ ನೋಡು ಭೂರಿ ಮಾಯಾಭ್ರಾಂತಿಗೊಳಗಾಗದೆ ಕಾರಣಿಕ ಲಕ್ಷ್ಮೀನಾರಾಯಣನ ಪಾದ ವಾರಿಜದಿ ನಲಿದು ಸುಖಿಯಾಗು ನೀ ಮನವೆ5
--------------
ತುಪಾಕಿ ವೆಂಕಟರಮಣಾಚಾರ್ಯ
ತನ್ನ ಸ್ಮರಣೆ ತಾನರಿಯದ ಮನವು ಚಿನುಮಯ ರೂಪನ ಬೆನ್ನವಿಡಿವುದುಂಟೆ ಪ ಹಾವಿನ ಹೆಜ್ಜೆಯ ಹಾವರಿವಂದದಿ ಭಾವಿಸಿಕೊಳ್ಳದೆ ತಗ್ಗು ಮುಗ್ಗುಗಳ ಗೋವಳನಿಲ್ಲದ ಗೋವಿನ ತೆರನಂತೆ ಜೀವನುಂಗುವ ವ್ಯಾಘ್ರನಗ್ರಕೆ ಸುಳಿಯಲು 1 ಕನ್ನಡಿ ಶುದ್ಧವಾಗಿಯೆ ಕಾಣದ ದೃಷ್ಟಿ ಚಿನ್ನವಾರಿಕೆಯನ್ನು ಮಾಡುವ ಪರಿಯು ನಗದ ಮನ ಮನ್ನಣೆಯಿಲ್ಲದ ಮನೆಯೊಳುಂಬರೆ ಹೇಸ2 ಹೇಳಿದ ಮಾತನು ಕೇಳಿ ಮಾನಸದೊಳು ಮೇಳವಾಗುವೆನೆಂದು ಖೂಳತನದಿ ಪೋಗಿ ಕೇಳಿದ ಉತ್ತರಕುತ್ತರ ಹರಿಸದೆ ಆಳು ಬಾವಿಯ ಹಾರಿ ಹೊಳಚುವ ತೆರನಂತೆ 3 ಕಾಗೆಯು ಗರುಡನ ಸರಿಯೆಂದು ಜೂಜಾಡಿ ಸಾಗರವನು ಹಾರಿ ನಡುವೆ ಬಿದ್ದಂದದಿ ಯೋಗಿಯ ಪರಿಯಂತೆ ತಪವೆಂದು ತನ್ನಯ ಮೂಗ ಮುಚ್ಚಲು ಭವರೋಗ ಹಾರುವುದಂತೆ 4 ಮೀಸಲಿಗೊದಗುವ ಶೇಷಗಿರೀಶನ ಆಸೆಯಗ್ರಾಸವ ಬೇಡಿಕೊಳ್ಳದ ಮನ ಸಾಸಿರ ವೆಗಡದ ಭಾಂಡದೊಳೋಗರ ಬೇಯಿಸಿ ಭುಂಜಿಪೆಯೆಂದು ಮೋಸ ಮಾಡುವದಿಂದು 5 ಚಿತ್ರಿಕ ರಚಿಸಿದ ಸೇನೆ ಸೇನೆಗಳಲ್ಲ ಪ್ರಸ್ತುತಕೊದಗುವದೆನುತಿಹ ರಾಯನ ಮುತ್ತಿಕೊಂಡಿಹ ಪರಸೇನೆಯ ಇದಿರೊಳು ಮೃತ್ಯುದೇವತೆ ಬಂದು ಮೂದಲಿಸುವಳೆಂದು6 ಮೊಸರನ್ನ ತನ್ನ ಕೈಯೊಳಗಿದ್ದಂತೆ ಹಸಿವಾದ ವೇಳ್ಯದಿ ಹಸಿಯ ಮೆಲ್ಲುವದೇಕೆ ಕುಶಲದಿ ನೆನೆಯಲು ಹಸನದಿ ಸಲುಹುವ 7
--------------
ವರಹತಿಮ್ಮಪ್ಪ