ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇದೇವೆ ಬಂದದಾ ಖೂನವು | ಇದೇವೆ ಸಾರ್ಥಕ ಜನುಮವು ಪ ಹೊತ್ತು ಹೋಗದ ಬೀದಿ ಮಾತುಗಳಾಡದೆ ಚಿತ್ತಕ ಆಲೇಶ ತರಗುಡನು ಉತ್ತಮರೊಳುಕೂಡಿ ಶ್ರೀಹರಿ ಮಹಿಮೆಯಾ ನಿತ್ಯ ಕಥಾಮೃತ ಸೇವಿಪನು 1 ಹಾಲವನೆರೆದರೆ ಸರಕನೆ ಕುಡಿಯದ ಬಾಲಕನಂದದಿ ಈ ಮನವು ಕಾಲಕಾಲಕ ಸದ್ಭೋದವ ಕೇಳಿಸಿ ಮ್ಯಾಲ ಸ್ವಹಿತ ಕೊಡುವನು 2 ಉದರದ ಧಾವತಿಗನುದಿನ ಬೆರತಿರ ಇದರೊಳಗೆಚ್ಚರ ಹಿಡಿದಿಹನು ಮದಮತ್ಸರಳಿದು ಗುರುಮಹಿಪತಿ ಪದ ಪದುಮದಹಿಷ್ಠೆಯ ಜಡಿದಿಹನು 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ನಂಬಬೇಕು ಹರಿಯ ನಾಮಾ ಪ ನಾಮವೇ ಸ್ನಾನವು ನಾಮವೇ ಸಂಧ್ಯಾನವು| ನಾಮವೇ ಜಪ ತಪ ನಾಮವೇ ಖೂನವು| ನಾಮವೇ ಜ್ಞಾನಾ ನಾಮವೇ ಧ್ಯಾನಾ| ನಾಮವೇ ಧಾರಣ ನಾಮ ನಿಧಾನಾ 1 ಕಾನನ ಮಾರ್ಗದಿ| ಗುಣದ ಪಶುಪರಿ ಕಾಣದೇ ತಿರುಗುವಿ| ಏನು ಪಲವೋ ಮತಿ ಹೀನ ಗುರು| ಜ್ಞಾನದ ಮನಿ ನಿಧಾನದಿ ಕೇಳು2 ಪೋಡವಿಲಿ ಗಂಗೆಯ ತಡಿಯೋಳು ಕುಳಿತಿರೆ| ಕುಡಿಯಲು ಜಲವನು ಹುಡುಕುವ ಭಾವಿಯ| ನಡತಿದು ಛಂದವೆ ಬಿಡು ಬಿಡು ಸಂಶಯ| ಹಿಡಿಗುರು ಮಹಿಪತಿ ಒಡಿಯನ ಬೋಧಾ3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ಘನ ಸುಖದಿಂಬು 1 ಅನುದಿನ ನೋಡಾ ನಂಬದೆ ನಿಜವನು ನೀ ಕೆಡಬ್ಯಾಡ 2 ಬ್ಯಾಡೆಂಬುದು ಈ ಮಾತನೆ ಕೇಳು ಬೇಡದೆ ಬಯಸದೆ ನಿಜದಲಿ ಬಾಳು 3 ಬಾಳುವದೀಪರಿ ಜನದಲಿ ಲೇಸು ತಿಳಿಯದೆ ಬಯಸುವದ್ಯಾತಕೆ ಸೋಸು 4 ಸೋಸ್ಹಿಡಿದರ ಬೇಕಾಹುದು ಜನ್ಮ ಕರ್ಮ 5 ಭವ ಬಂಧ ಮರ್ಮವ ತಿಳಿಯದವನೆ ತಾ ಅಂಧ 6 ಅಂಧಗ ತಿಳಿಯದು ಆತ್ಮದ ಗೂಢ ಸಂಧಿಸಿ ಬೀಳಲು ವಿಷದಲಿ ಮೂಢ 7 ಮೂಢಗೆಲ್ಲಿಹ್ಯ ಆತ್ಮದ ವಿಚಾರ ನೋಡುವ ನೋಟವು ಇದು ಬಲುದೂರ 8 ದೂರಕೇ ನೀ ದೂರಾಗಿಬ್ಯಾಡ ಅರಿಯಲು ತನ್ನೊಳು ಸಾರವೆ ನೋಡಾ 9 ನೋಡುವುದಿದು ಗುರುಙÁ್ಞನದ ಗುಟ್ಟು ಆಡಿದ ಅನುಭವ ಮಾತಿಗೆ ಮುಟ್ಟು 10 ಮುಟ್ಟಿದ ಖೂನವು ಮಿಸುಕಲಿ ಬ್ಯಾಡ ಘಟ್ಯಾಗಿ ನಿಜಘನ ಬೆರೆ ಗಾಢಾ 11 ಗಾಢಾಗಿಹುದು ನಿಜಗುರು ಙÁ್ಞನ ಮಾಡುವ ಧ್ಯಾನಕೆ ಅನುಸಂಧಾನ 12 ಉನ್ಮನದಲಿ ತಿಳಿವುದು ಗುರುಮುಖ 13 ಗುರು ಮುಖದಲಿ ಬೆಳಗಾಹುದು ಪೂರ್ಣ ಬೀರುವ ಪ್ರಭೆ ಸದ್ಗುರು ಕರುಣ 14 ಕರುಣದ ಸಾಗರ ಗುರುವರ ಮೂರ್ತಿ ಇರುಳ್ಹಗಲೆ ಕೊಂಡಾಡುವೆ ಕೀರ್ತಿ 15 ಕೀರ್ತಿಯ ಕೊಂಡಾಡುವನೀ ಮಹಿಪತಿ ಸಾರ್ಥಕವಿದು ಅನುಭವ ಮನೆಮೂರ್ತಿ 16
--------------
ಕಾಖಂಡಕಿ ಶ್ರೀ ಮಹಿಪತಿರಾಯರು