ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ತನ್ನ ತಾ ತಿಳಿಯುವದೆ ಜ್ಞಾನ ಮನಮುಟ್ಟು ಪೂರ್ಣ ಚೆನ್ನಾಗಿ ಸದ್ಗುರುವಿನ ಕೇಳಿರೊ ಖೂನ ಧ್ರುವ ತನು ಮನವಿಟ್ಟು ತಿಳಿವದೀ ಗುರುಗುಟ್ಟು ಧನ ದ್ರವ್ಯಾರ್ಜಿತವನಿಟ್ಟು ಕೇಳಿ ಕಿವಿಗೊಟ್ಟು ಅನುಬವದ್ಹೆಚ್ಚಿ ಮೆಟ್ಟು ಸಾಧಿಸಿ ವೈರಾಗ್ಯ ಕೊಟ್ಟು ಖೂನಮಾಡಿಕೊ ಬೇಕಿಟ್ಟು ಅನುಮಾನ ಬಿಟ್ಟು 1 ಗಿಳಿಯಾಡಿದಂತೆ ನುಡಿಯಾತಕ ಬಾಹುದು ನೋಡಿ ಹೇಳ್ಯಾಡಕೊಂಬುದೀಡ್ಯಾಡಿ ಮಾತಿನ ರೂಢಿ ಬೆಳಗಿನೊಳು ಬೆರದಾಡಿ ಘನಕ ಘನ ಕೂಡಿ 2 ನುಡಿ ನಡಿ ಒಂದಾದರೆ ವಸ್ತು ತಾನಿಹುದು ದೂರ ಬಿಡಲರಿಯದು ಹಾಂಗಾದರ ಎಂದಿಗಾರು ಒಡಗೂಡಿ ನೋಡಿದರೆ ತನ್ನೊಳು ತಾಂ ನಿಜ ಖರೆ ಸಾರ 3
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ತಾನಾ ತಂದನಾನಾ ಧ್ರುವ ತಾನಾ ತಂದನಾನಾ ತಾನೆಂಬುವದರ ಖೂನ ಏನೆಂದರಿಯ ಹೀನ ಮನುಜ ಪಾಮರ ಪೂರ್ಣ 1 ತಾನೆಂಬುದೆ ತಾ ದೈವ ನಾನೆಂಬುದೆ ತಾ ಜೀವ ಜ್ಞಾನದಿಂದ ತಿಳಿವ ಅನುಭವ ಆಶ್ರೈಸುವ2 ತಾನೆ ತಂದರ ನಾನಾ ತನ್ನಿಂದವೇ ಜೀವನ ನಾನೆಂಬುದವಗುಣ ಜನ್ಮಕಿದೆ ಸಾಧನ 3 ತಾನೆ ತಂದರ ತಾರಕ ನಾನೆಂದರೆ ನರಕ ಜ್ಞಾನ ಗುರುಮುಖ ಖೂನ ತಿಳಿವುದು ಸುಖ 4 ತಾನೆಂದವ ತಾ ಬ್ರಹ್ಮ ನಾನೆಂದರ ಅಹಮ್ಮ ಅನುಭವದಿಂದ ವರ್ಮ ಖೂನಾದರ ಸಂಭ್ರಮ 5 ಅರ್ಕ ನಾನೆಂದರೆ ತಾ ತರ್ಕ ಹೀನಗುಣ ಸಂಪರ್ಕ ಏನೆಂದರಿಯ ಮೂರ್ಖ 6 ತಾನೆಂದರೆ ತಾಂ ಮಾನ್ಯ ನಾನೆಂದರಮಾನ್ಯ ಖೂನಮಾಡಿ ತಾರ್ಕಣ್ಯ ಅನುಭವಿಸಲು ಧನ್ಯ 7 ತಾನೆಂದರೆ ತಾ ಬಂದೆ ನಾನೆಂದು ಬಲು ನೊಂದೆ ಅನೇಕ ಜನ್ಮದಿಂದ ದಣಿದು ನಾ ಸಾಕೆಂದೆ 8 ತಾನೆಂಬುದು ಸುಜ್ಞಾನ ನಾನೆಂಬುದು ಅಜ್ಞಾನ ತಾನೆಂದರೆ ಅಣುರೇಣು ನಾನೆಂದರನುಮಾನ 9 ತಾನೆಂಬುದ ತೋರಿಸಿ ನಾನೆಂಬುದ ಮರಸಿ ತಾನೆತಾನಾದ ಋಷಿ ಆನಂದೋಬ್ರಹ್ಮ ಸೂಸಿ 10 ತಾನೆ ತಾನಾಗಿ ಒಂದೆ ಖೂನ ದೋರಿದ ತಂದೆ ಭಾನುಕೋಟಿ ತೇಜೊಂದೆ ಪೂರ್ಣ ಮಹಿಪತಿಗೊಂದೆ11
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ನೀನೆ ನುಡಿಸಿದಂತೆ ನುಡಿಯುವೆನು ಮಿಕ್ಕ ಜ್ಞಾನವಿಲ್ಲ ಎನಗೇನೇನು ಪ ನೀನೆ ಜಗತ್ರಾಣ ಶ್ರೀಹರಿಯೆಂಬುದೊಂದೆ ಖೂನಮಾಡಿ ಕೊಂಡಾಡುವೆನು ಅ.ಪ ನೀ ನಡೆಸಲು ನಾ ನಡೆಯುವೆನು ಹರಿ ನೀನಾಡಿಸಲು ನಾನಾಡುವೆನು ನೀನೀಡದಿರೆ ಬಲು ಮಿಡುಕುತ ಬಳಲುವೆ ನೀ ನುಣಿಸಲು ಉಂಡು ನಲಿವೆ ಪುಂಡನಾಗಿ 1 ಕಡುಪ್ರೇಮದಿ ಚರಾಚರಗಳನು ಕಾಯ್ವಿ ಪೊಡವಿ ಈರೇಳುವ್ಯಾಪಕ ನೀನು ಕೊಡುವ ಕರ್ತ ನೀನೆ ಮೂಲೋಕಕೆಂಬ ನುಡಿ ದೃಢದಿ ನಂಬಿ ಗಟ್ಟಿಮಾಡಿಹೆನು 2 ಹೋಮ ಯಜ್ಞ ಯಾಗ ತಿಳಿಯೆ ನಾನು ಮತ್ತು ನೇಮನಿತ್ಯದ ಗುರುತರಿಯೆನು ಭೂಮಿಗಧಿಕ ಮಮಸ್ವಾಮಿ ಶ್ರೀ ರಾಮನ ಪೂರ್ಣನಂಬಿಕೊಂಡಿಹೆನು 3
--------------
ರಾಮದಾಸರು