ಸದ್ಬಾವಮಾಡಿ ಸ್ಥಿರ ಸದ್ಗುರು ತಾನಿದ್ದಲ್ಲಿ ದೂರ
ಸಾರ ಸದ್ಗೈಸುವ ಮನೋಹರ ಧ್ರುವ
ಕಣ್ಣಿಂದ ಕಡಿಯಲಿಲ್ಲ ಚೆನ್ನಾಗೆಲೆವೆ ನೋಡಿ
ಉನ್ನಂಥ ಮಹಿಮ ಪೂರ್ಣ ತಾನೆತಾನಾಗಿಹ್ಯ ಕೂಡಿ
ಉನ್ಮನವಾಗಿ ಬ್ಯಾಗ ಘನಸುಖ ಬೆರೆದಾಡಿ
ಪುಣ್ಯಕ ಪಾರವಿಲ್ಲ ಖೂನದೋರುದಿದರಡಿ 1
ಸದ್ಬಕ್ತಿಗಿದೇ ಕೀಲ ಸಾಧಿಸುವದೀ ವಿಚಾರ
ಸದ್ಗತಿಗಿದೆಮೂಲ ಸಾಧುಜನರ ಸಹಕಾರ
ಸಾಧಕರ ಸುಶೀಲ ಬುಧಜನರ ಮಂದಾರ
ಸದ್ಫನದ ಕಲ್ಲೋಳ ವಸ್ತುದೋರುವ ವಿವರ 2
ಗುರುದಯದಿಂದ ನೋಡಿ ಇದೆರಿಟ್ಟುವಂತೀ ಖೂನ
ಕರುಣಾಳು ಸ್ವಾಮಿ ನಮ್ಮ ತಾನೆದೋರಿದ ಸಾಧನ
ತರಣೋಪಾಯಕ ಪೂರ್ಣ ತೋರುದಿದನು ಸಂಧಾನ
ತರಳಮಹಿಪತಿಗಿದೆ ಇಹ್ಯ ಪರಕ ನಿಧಾನ 3