ಕರುಣಿಸೊ ಗುರು ಎನಗೆ
ಅರಘಳಿಗಿ ನೀ ಎನ್ನ ಹೃದಯದಿಂದಲಗದ್ಹಾಂಗೆ ಧ್ರುವ
ಕಣ್ಣಿನೊಳಗ ನಿನ್ನ ಕಾಣದಿದ್ದರೆ ಪೂರ್ಣ
ಪ್ರಾಣನಿಲ್ಲದೊ ನಿಮಿಷಾರ್ಧದಲಿ
ಕ್ಷಣಕ್ಷಣಕ್ಕೊದಗಿ ನೀ ಖೂನದೋರದಿದ್ದರೆ
ತನು ವಿಕಳಿತವಾಗಿ ಕ್ಷೀಣಹೊಂದುವದೊ 1
ಬೇಡುವದೊಂದೆ ನಾ ಬಿಡದೆ ನಿಜರೂಪ
ಪೊಡವಿಯೊಳಗೆ ದೃಢ ನಿಶ್ಚಯಲಿ
ಎಡಬಲವು ನೋಡದೆ ಒಡಲ ಹೊಕ್ಕಿದೆ ನಿನ್ನ
ಕಡೆಗಾಣಿಸುವದೆನ್ನೊಡೆಯನೆ ಪಿಡಿದು ಕೈಯ 2
ಸುತ್ತಸೂಸುತಲಿನ್ನು ಚಿತ್ತದಿಂದಗಲದೆ
ನಿತ್ಯವಾಗಿರೊ ನೀ ಹೃತ್ಕಮಲದಲಿ
ಹೆತ್ತ ತಾಯಿಯೋಪಾದಿ ತುತ್ತುತುತ್ತಿಗೆ ಒಮ್ಮೆ
ಹತ್ತಿಲಿದ್ದು ಸಂತತ ಸಲಹೊ ಮಹಿಪತಿಗೆ 3