ಒಟ್ಟು 3 ಕಡೆಗಳಲ್ಲಿ , 2 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಎನಗಾಧಿಯೋ ಗುರು ಅಧಿಯೋ ಧ್ರುವ ಒಬ್ಬಗೆ ಶ್ರುತಿಪುರಾಣಾದಿ ಒಬ್ಬಗೆ ಶ್ರೋತ್ರಾಧಿ ಒಬ್ಬಗೆ ಸ್ಮಾರ್ತಾಧಿ ಒಬ್ಬಗೆ ಜ್ಯೋತಿಷ್ಯದಾಧಿ ಮಿತವಾಕ್ಯದಾಧಿ ಶ್ರೀಪಾದದಾಧಿ 1 ಒಬ್ಬಗೆ ವೃತ್ತಾಧಿ ಒಬ್ಬಗೆ ವಿತ್ತಾಧಿ ಒಬ್ಬಗೆ ಸ್ತುತಿಸುವದಾಧಿ ಯಂತ್ರ ಮಂತ್ರದಾಧಿ ಒಬ್ಬಗೆ ಶೈವಾಧಿ ಒಬ್ಬಗೆ ಶಕ್ತ್ಯಾಧಿ ಒಬ್ಬಗಾಗಮಯುಕ್ತಿ ಆಧಿ ಶ್ರೀಪಾದದಾಧಿ 2 ಒಬ್ಬಗೆ ಹಟದಾಧಿ ಒಬ್ಬಗೆ ದಿಟದಾಧಿ ಒಬ್ಬಗೆ ತಟಕೂಪದಾಧಿ ಒಬ್ಬಗೆ ಪಟದಾಧಿ ಬಗೆ ಪಠಣ್ಯಾದಿ ಒಬ್ಬಗೆ ಮಠಮಾನದ್ಯಾಧಿ ಒಬ್ಬಗೆ ಕುಟಲಾಧಿ ಒಬ್ಬಗೆ ಜಟದಾಧಿ ಒಬ್ಬಗೆ ಫಟಿಸುವ ಆಧಿ ಶ್ರೀಪಾದದಾಧಿ 3 ಒಬ್ಬಗೆ ರಸದಾಧಿ ಒಬ್ಬಗೆ ಕಸದಾಧಿ ಒಬ್ಬಗೌಷಧಮಣಿ ಆಧಿ ಒಬ್ಬಗೆ ಕೃಷದಾಧಿ ಒಬ್ಬಗೆ ದೇಶಿ ಆಧಿ ಒಬ್ಬಗೆ ಹುಸಿಹುಟ್ಟಣ್ಯಾಧಿ ಒಬ್ಬಗೆ ವೃಷದಾಧಿ ಒಬ್ಬಗೆ ದ್ವೇಷಾಧಿ ಒಬ್ಬಗೆ ಪ್ರಶಂಸದಾಧಿ ನಿಮ್ಮ ಶ್ರೀಪಾದದಾಧಿ 4 ಮನಕೆ ಮರೆಯಾಗಿ ಜನಕ ಠವಿಸುವ ಅನೇಕಪರಿ ಲೋಕದಾಧಿ ಖೂನಕೆ ಬಾರದೆ ಙÁ್ಞನಕೆ ತಾನೊಂದು ಅನುಭವಕಿಲ್ಲದಾಧಿ ಉಂಟಾಗಿಹ್ಯದಾಧಿ ಮಹಿಪತಿಗೆ ಅಧಿ 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು
ಏನೆಂದ್ಹೇಳಲಿರಂಗನಟ್ಟುಳಿ ಮಾನವರಂತಿವನಲ್ಲಾ ತಾನಾರಿಗೆ ತನ್ನೆಲೆಗುಡ ಗೋಪೀ ಮಾನಿನಿಮಗ ಬಲುಹೊಲ್ಲಾ ಪ ಕೆಳಗಿಲ್ಲದಲಿರೆ ಗೋರಸ ಭ್ಯಾಂಡ್ಯವು | ನೆಲವಿನ ಅಡಕಲ ನೋಡಿ ಅದು | ನಿಲಕದಲಿರೆ ಕೈಗೂಡಿ ಕಡ | ಗೋಲಿಲಿ ಯಜ್ಞ ಮಾಡೀ | ಗೆಳೆಯರ್ವೆರ ಸೈದ ಬಲುಸೂರ್ಯಾಡಿ | ಸಿಲುಕದ ಲ್ಹೋಗುವ ಪೋಡಿ | 1 ಇಕ್ಕಿದ ಕದಗಳು ಇಕ್ಕಿರಬೇಕು | ಫಕ್ಕನೆ ಮನೆಯೊಳು ಸುಳಿದು | ಚಿತ್ತಕ ಮೋಹಿನಿಂದು ಅವ | ರಕ್ಕರದಲಿ ನೆರೆದು ಚಿಕ್ಕ ಬಾರಕೆ | ಠಕ್ಕಿಸಿ ಹೊರುವ ಆ ಮಕ್ಕಳಾಟಿಕೇನಿದು2 ಖೂನಕೆ ಬಾರದೆ ತಾನಲ್ಲಿದಲಿಹ | ನಾನಾ ವೃತ್ತಿಗೆ ಬಂದು ಇದು | ಧೇನಿಸಿ ನೆಲೆ ತಿಳಿಯದ | ನಾನಾ ನೆಂಬವರಿಗೆ ಇದು | ಶ್ರೀನಿಧಿ ಗುರುಮಹಿಪತಿ ಪ್ರಭುವಿನ | ಅನುಮಾನದಲೇ ದೂರುವುದು3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಭ್ರಮಮೂಲಮಿದಂ ಜಗತು ನೇಮದ ನಿಜಮಾತು ಧ್ರುವ ಭ್ರಮೆಯಿಂದಲಿ ಭ್ರಮಣ್ಹತ್ಯದ ನೋಡಿ ಭ್ರಮೆ ನೆಲೆಗೊಳಿಸದು ಮನ ಸ್ಥಿರಮಾಡಿ ಭ್ರಮಿಸೇದನೇಕ ಜನ್ಮ ತಿರುಗಾಡಿ ಭ್ರಮಿಯಲಿ ಬಾರದು ನಿಜ ಕೈಗೊಡಿ 1 ಭ್ರಮೆಯಕ ಭ್ರಮೆ ಹತ್ತೇದ ಬಲು ಬಹಳ ಭ್ರಮಯು ಮಾಡೇದ ಸಂಸಾರದ ಮೇಳ ಭ್ರಮೆ ಇಲ್ಲದ್ಯಾತಕೆ ಏನ್ಹೇಳ ನೇಮದಿ ಹೊಳೆವುದು ವಸ್ತು ಅಚಲ 2 ನಾ ನೀನೆಂಬುದು ಭ್ರಮೆಯದ ಮೂಲ ಅನುದಿನ ಬೆನ್ನಟ್ಟಿದೆ ಬಹುಕಾಲ ಖೂನಕೆ ಬಾರದೆ ಆತ್ಮಾನುಕೂಲ ತಾನೆ ಮುಸುಕ್ಯದೆ ಭ್ರಮಿ ಸಕಲ 3 ನಿಶ್ಚಲವಾಗದೆ ಜ್ಞಾನದ ಉಗಮವು ಹೆಚ್ಚು ಕುಂದಿಗೆ ಹೊಡೆದಾಡುದು ಭ್ರಮೆಯು ಹುಚ್ಚುಮಾಡೇದ ವಿಷಯ ಭ್ರಮೆಯು ಎಚ್ಚರಿಸುವ ಸದ್ಗುರು ದಯಕ್ರಮವು 4 ನಾ ಮವನಿಷ್ಟರೊಳಾಡಿದ ಮಾತು ನಿಮಿಷಾರ್ಧದಲಿ ಭ್ರಮೆಯಗಳೆಯಿತು ಸ್ವಾಮಿಸದ್ಗುರು ಕೃಪೆಯಲಿ ತಿಳದೀತು ನೇಮಿಸಿ ತಿಳಿಕೊ ಮಹಿಪತಿನಿವಾಂತು 5
--------------
ಕಾಖಂಡಕಿ ಶ್ರೀ ಮಹಿಪತಿರಾಯರು