ಬಗಿಯಲಿ ಬ್ಯಾಡಣ್ಣಾ | ಮದದಲಿ ಪ
ಒಳ್ಳೆವರಾ ನುಡಿಯಳ್ಹಲಿ ಮಾಡಿ |
ಖುಳ್ಳತನದಲೆ ದಿನ ಹೋಗಾಡಿ 1
ಮಾನವ ಸರಿ ಬಗಿಬ್ಯಾಡ |
ಹವಣಿಸಿ ಚರಣಕ ನಮಿಸೆಲೋ ಮೂಢಾ 2
ಶಿಷ್ಟಗೆರಗನು ದಾವನು ಬಾಗಿ |
ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ 3
ಸಣ್ಣ ದೊಡ್ಡವರೆನಬಾರದು ಕೇಳು |
ಮನ್ನಣೆ ಗೆಲ್ಲಗವರೇ ಮೇಲು 4
ಗುರುವರ ಮಹಿಪತಿ ಸಾರಿದ ನಿಜವಚನಾ |
ಧರೆಯೊಳಗಿದೆ ಪರಗತಿ ಸೋಪಾನಾ 5