ಒಟ್ಟು 2 ಕಡೆಗಳಲ್ಲಿ , 1 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ದಾರಿಯ ವಿಡಿರಣ್ಣ | ಸ್ವಹಿತದ ದಾರಿಯ ಹಿಡಿರಣ್ಣಾ ಪ ದಾರಿಯ ವಿಡಿನಿಜ ಸಾರಿಹ ಶೃತಿಗಳ | ಚಾರು ಭಕುತಿಯಾ ಅ.ಪ ಬಲ್ಲವರಿಗೆ ಬೆಸಗೊಳ್ಳುತ ಮನಸಿನ | ಖುಳ್ಳತನದ ಗುಣವೆಲ್ಲವು ಹೋಗಿ | ಬಲ್ಲವರನು ಕಂಡು ಮೆಲ್ಲಡಿಗಳ ವಿಡಿ | ದುಳ್ಳ ಸಿದ್ಧಾಂತದ ಸೊಲ್ಲವ ಕೇಳಿ | ಉಲ್ಹಾಸದಿಂದಲಿ ಮೆಲ್ಲನ ಭ್ಯಾಸವ | ಮೆಲ್ಲನೆ ಮಾಡುತ ಸುಲ್ಲಭ ತೆರದಾ 1 ಕಂಡ ಪಥಕ ಹರಿದಂಡಲೆಯದೆನೆರೆ | ತಂಡಿಸುತಿಹ ಪಾಷಾಂಡ ಹೋಗಿ | ಚಂಡ ಸುಜ್ಞಾನದ ಲುಂಡನು ಭವದೃಢ | ಗಂಡು ಸದ್ಭೋಧದಿ ಪಂಡಿತನಾಗಿ | ಹಿಂಡ ಭಾಗವತರ ಮಂಡಲದೊಳು ಕೂಡಿ | ಪುಂಡರೀಕಾಕ್ಷನ ಕೊಂಡಾಡುತ ನಿಜ 2 ಹಿಂದಿನ ಸುಕೃತಗಳಿಂದ ನೃದೇಹದಿ | ಬಂದೆನು ನಾನಿನ್ನು ಮುಂದಣ ಗತಿಯಾ | ಹೊಂದುವೆ ನಾವದುಯಂದು ವಿಚಾರವಾ | ತಂದು ಸದ್ಭಾವಲಿಂದೇ ನಿಷ್ಠೆಯಲಿ ತಂದೆ ಮಹಿಪತಿ ಪ್ರಭುಪದ ಭವ ಬಂಧನ ಹರಿವಾ 3
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಬಗಿಯಲಿ ಬ್ಯಾಡಣ್ಣಾ | ಮದದಲಿ ಪ ಒಳ್ಳೆವರಾ ನುಡಿಯಳ್ಹಲಿ ಮಾಡಿ | ಖುಳ್ಳತನದಲೆ ದಿನ ಹೋಗಾಡಿ 1 ಮಾನವ ಸರಿ ಬಗಿಬ್ಯಾಡ | ಹವಣಿಸಿ ಚರಣಕ ನಮಿಸೆಲೋ ಮೂಢಾ 2 ಶಿಷ್ಟಗೆರಗನು ದಾವನು ಬಾಗಿ | ಹುಟ್ಟುವ ಕಾಡ ಬೊಬ್ಬುಲಿ ಮರವಾಗಿ 3 ಸಣ್ಣ ದೊಡ್ಡವರೆನಬಾರದು ಕೇಳು | ಮನ್ನಣೆ ಗೆಲ್ಲಗವರೇ ಮೇಲು 4 ಗುರುವರ ಮಹಿಪತಿ ಸಾರಿದ ನಿಜವಚನಾ | ಧರೆಯೊಳಗಿದೆ ಪರಗತಿ ಸೋಪಾನಾ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು