ಮಂಗಲಂ ಮಂಗಲಂ ಭವತು ತೇ ಮಂಗಲಂ ಪ.
ವಿಜ್ಞಾನಶಕ್ತಿ ಪ್ರಕಾಶಗೆ ಈಶಗೆ
ಸಜ್ಜನನಿವಹಾರಾದಿತಗೆ
ಅಜ್ಞಾನತಿಮಿರಮಾರ್ತಾಂಡ ಪ್ರಚಂಡಗೆ
ಮೂಜದೊಡೆಯ ಮನೋಜ್ಞ ಮೂರುತಿಗೆ 1
ಚಂದ್ರಶೇಖರಸುಕುಮಾರಗೆ ಮಾರನ
ಸುಂದರರೂಪ ಪ್ರತಾಪನಿಗೆ
ನಿಂದಿತ ಖಲಜನವೃಂದವಿದಾರಗೆ
ಸ್ಕಂದರಾಜ ಕೃಪಾಸಿಂಧು ಪಾವನಗೆ 2
ತಾರಕದೈತ್ಯಸಂಹಾರಗೆ ಧೀರಗೆ
ಶೂರಪದ್ಮಾಸುರನ ಗೆಲಿದವಗೆ
ಸೇರಿದ ಭಕ್ತರ ಸುರಮಂದಾರಗೆ
ನಾರದಾದಿ ಮುನಿವಾರವಂದಿತಗೆ 3
ವಲ್ಲೀವಲ್ಲಭನಿಗೆ ಒಲಿದರ್ಗೆ ವರದಗೆ
ಎಲ್ಲ ಭೂತಾಶ್ರಯ ಬಲ್ಲವಗೆ
ಖುಲ್ಲದಾನವರಣಮಲ್ಲ ಮಹೇಶಗೆ
ಬಿಲ್ಲುವಿದ್ಯಾಧೀಶ ಭೀಮವಿಕ್ರಮಗೆ 4
ಕಂಜಾಕ್ಷ ಲಕ್ಷ್ಮೀನಾರಾಯಣ ತೇಜಗೆ
ಮಂಜುಳಕಾಂತಿ ವಿರಾಜನಿಗೆ
ನಂಜುಂಡನ ಕರಪಂಜರಕೀರ ಪಾ-
ವಂಜೆ ಕ್ಷೇತ್ರಾದಿವಾಸ ಸುರೇಶನಿಗೆ 5