ಒಟ್ಟು 1 ಕಡೆಗಳಲ್ಲಿ , 1 ದಾಸರು , 1 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಭೀಮ ಭುಜಬಲೋದ್ದಾಮ ಸವರಿದಿ ಕುರುಪನ ಕುಲವ ನಿಸ್ಸೀಮ ಪ ವಿಷದಿ ಕಜ್ಜಾಯ ತಿನಿಸಿ ಮುಸುಕಿನಿಂ ಬಂಧಿಸಿ ಎಸೆಯಲು ನದಿಯೊಳು ಕುಶಲದಿಂ ಬಂದೆಯೊ 1 ಜನನಿ ಗೌರಿಯ ವ್ರತವನು ಮಾಳ್ಪೆನೆಂದೆನಲು ಅಣ್ಣ ನನುಮತಿಯಂತೆ ಘನ ಸುರಲೋಕ ಕೈದ್ಯೊ 2 ನಿರುತದಿಂ ಸುರಧೇನು ವರ ಪರುಷಮೃಗವನ್ನು ಕರೆತಂದು ಗಜಗೌರಿ ವ್ರತವ ಪೂರೈಸಿದಿಯೊ 3 ಬಕನ ಮರ್ದಿಸಿ ಹಿಡಿಂಬಕನ ತರಿದು ಹಿಡಿಂ ಬಿಕಿಯಳ ಕರಗ್ರಹಣ ಕೈಕೊಂಡ್ಯೊ ರಣಶೂರ 4 ಬಲ್ಲಿದತನದಿ ಆ ಖುಲ್ಲಕೀಚಕನೊದೆದು ಪುಲ್ಲನಯನೆಯ ಕಾಯ್ದೊ ಬಲ್ಲಿದ ಶ್ರೀರಾಮನ ದೂತ 5
--------------
ರಾಮದಾಸರು