ಶಾಮ ಸುಂದರ ಪ್ರೇಮವÀ ತೋರೆಲೊ ಪ
ತಾಮಸವಿಲ್ಲದೆ ಕಾಮಿತಗಳ ನೀಡೊ ಅ.ಪ
ಹಿಂದೆ ಅಜಮಿಳ ಒಂದನರಿಯದೆ
ಕಂದನನ್ನು ನಾರಾ ಎಂದು ಕರೆಯಲು
ಬಂಧುವೆಂದರಿತು ಮಂದಹಾಸದಿಂದ
ಬಂದು ರಕ್ಷಿಸಿದೆ ಎಂದು ಕೇಳಿರುವೆ 1
ಕ್ರೂರ ಶಾಸನ ನಾರಿ ದ್ರೌಪದಿಯ
ಸೀರೆ ಸೆಳೆದು ಮಾನ ಸೂರೆಗೊಳುತಿರೆ
ಸಾರಿ ಕೂಗಲು ಭೂರಿದಯವನು
ತೋರಿರುವೆ ಎಂದು ಕೋರಿರುವೆ ನಿನ್ನ 2
ಮುನ್ನ ಮಾಡಿದ ಎನ್ನ ಪಾಪಗಳಿಗೆ
ಖಿನ್ನನಾಗಿರುವೆ ಎನ್ನ ಮನದಲಿ
ಮನ್ನಿಸುತ್ತ ಸುಪ್ರಸನ್ನನಾಗಿ ಸದಾ
ಎನ್ನ ಹೃದಯ ಶುದ್ಧಿಯನ್ನೆ ಮಾಡಿ ಪೊರೆಯೊ 3