ನಿನ್ನ ನಂಬಿದೆ ಶಾರದೇ | ಭಕ್ತಿಗೆ ಮತಿ- |
ಯನ್ನು ಪಾಲಿಸ ಬಾರದೇ ಪ
ನಿನ್ನ ನಂಬಿದೆ ನಾನು | ಎನ್ನ ಜಿಹ್ವೆಯೊಳ್ ನೀನು |
ಖಿನ್ನತ್ವಗೊಳ್ಳದೆ | ಸನ್ನುತೆ ನೆಲಸವ್ವ ಅ.ಪ
ಜಡಮತಿಯನು ತ್ಯಜಿಸಿ | ನೀ ದಯದಿಂದ |
ದೃಢಮತಿಯನು ಪಾಲಿಸಿ ||
ಕಡಲ ಶಯನ ಸೊಸೆ | ಪೊಡವಿಗಧಿಕವಾದ |
ಮೃಡನ ಸ್ಮರಿಪ ಜ್ಞಾನ | ತಡೆಯದೆ ಕರುಣಿಸು 1
ತ್ವತ್ಸಂಗವನು ಪಾಲಿಸಿ | ನೀ ದಯದಿಂದ |
ದುಸ್ಸಂಗವನು ಛೇದಿಸಿ ||
ಸತ್ಸಂಗವೆನಗಿತ್ತು | ಮತ್ಸಂಗ ನೀನಾಂತು |
ತ್ವತ್ಸುಗುಣ ನುಡಿಗಳ | ಹೃತ್ಸರೋಜದೊಳಿರಿಸೆ 2
ಸನುಮತ ಪಥಗಾಣಿಸಿ | ಕಏತೆಗಳ |
ಮನದಲ್ಲಿ ಸ್ಥಿರಗೊಳಿಸಿ ||
ಜನನ ಮರಣವೆಂಬ | (ವನ) ದೊಳಗೆನ್ನನು |
ವಿನಯದಿ (ಂದಲಿ) ಪಾರ | ಗಾಣಿಸೆ ಶಾರದೆ 3
ದಾಸನೆಂದೆನಿಸೆಯೆನ್ನ | ಕೀತಿ9ಗಹಿತ |
ದೋಷವ ತ್ಯಜಿಸೆ ಮುನ್ನ ||
ಕ್ಲೇಶಗೈವರ ಮನ | ಲೇಸಿನೊಳ್ ವಂಚಿಸಿ |
ವಾಸವ ಕರುಣಿಸೆ 4
ಚಿನುಮಯಾತ್ಮಕನಿರುವ | ವೈಕುಂಠದ |
ಘನತರ (ಸತ್) ಪದವಿಯ ||
ಪತಿ | ಪಿತ ಶ್ರೀನಿವಾಸನ |
(ಅನುಯಾಯಿ) ಸೇವೆಗ | ಳೆನಗಿತ್ತು ಪಾಲಿಸೆ 5