ಒಟ್ಟು 3 ಕಡೆಗಳಲ್ಲಿ , 3 ದಾಸರು , 3 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

(ಏ) ವಿಶೇಷ ಸಂದರ್ಭದ ಹಾಡುಗಳು ಬರಗಾಲ ಮತ್ತು ಯುದ್ಧವನ್ನು ಕುರಿತು ನಿರ್ದಯನಾಗಬೇಡವೋ ಭಗವಂತ ದುರ್ದಿನ ದೂರಮಾಡೋ ದೇಶಕ್ಕೆ ಪ್ರಶಾಂತ ಪ ಮಳೆಗಾಲ ಮರೆತುಹೋಗಿ ಬೇಸಗೆ ಬೆಳೆದು ಬಂದು ನೆಲವೆಲ್ಲ ದುರ್ಭಿಕ್ಷ ತಾಂಡವವಾಡುತಿದೇ 1 ಕೆರೆಕಟ್ಟೆತೊರೆಭಾವಿ ಹೊಳೆಯಲ್ಲಿ ನೀರಿಲ್ಲ ಧರೆಯಲ್ಲಿ ತೃಣವಿಲ್ಲ ಬರಿಗಾಡಾಯ್ತೋ 2 ಹೊಲಗದ್ದೆ ತೋಟಗಳ ಬೆಳೆಯೆಲ್ಲ ಒಣಗಿತು ಫಲವಿಲ್ಲ ಜನವೆಲ್ಲ ಗೋಳಾಡುತಿಹರೋ 3 ಅನ್ನಾಹಾರಗಳಿಲ್ಲ ಗೋಗಳಿಗೆ ಗ್ರಾಸವಿಲ್ಲ ಚಿನ್ನದಂಥ ಮಕ್ಕಳೆಲ್ಲ ಉಣಿಸಿಲ್ಲದಿಹರೋ4 ಧನಿಕರ್ಗೆ ಧನದಾಸೆ ಬಡವರ್ಗೆ ಕೂಳಿಲ್ಲ ದಿನಕಳೆವುದು ಕಷ್ಟವಾಗಿ ಬರಗಾಲ ಬಂತೋ 5 ಕಳವು ಕೊಲೆಯು ದಂಗೆ ದಾರಿದರೋಡೆಯು ಉಳಿಗಾಲ ಬರಲಿಲ್ಲ ಯುದ್ಧದ ಭಯವು6 ಒಂದೊಂಬತ್ತಾರೈದು ಹತ್ತು ಹನ್ನೊಂದರ ಮಧ್ಯೆ ಬಂದು ಜಗದ ಕುತ್ತು ಕತ್ತಿಯಂತೆ ಕಂಡಿತು 7 ಬೆಳಗುಪೂರ್ವ ಆಶ್ವಿಜ ಕಾರ್ತಿಕದೆ ಧೂಮಕೇತು ಇಳೆಗಂಡಕಳೆ ಯಮದ್ವಾರವ ಮುಚ್ಚಿ 8 ಅವಿಶ್ವಾಸದ ವಿಶ್ವವಸುವ ಪರಾಭವದಿಂ ಪ್ರೀತಿತೋರಿ ಭಂಗ ಹರಿಸೋ 9 ಪಾಕಿ-ಚೀನಾ ಪತನಗೈದು ಜೋಕೆಯಿಂ ಭಾರತವ ರಕ್ಷಿಸಿ ಲೋಕಕ್ಕೆ ಕ್ಷಾಮಹರಿಸಿ ಕ್ಷೇಮಕೊಟ್ಟು ಪೊರೆಯೋ10 ನಗೆಯಿಲ್ಲ ಸಂತೋಷ ಸುದ್ಧಿ ಕೇಳುತಲಿಲ್ಲ ಮಿಗಿಲಾಗಿ ಜನರೆಲ್ಲ ಸೊರಗಿ ಸುತ್ತುವರೋ11 ಕನ್ನಡದ ನಾಡಿಗೆ ಹೊನ್ನಿನ ಬಿರುದಿದೆ ಖಿನ್ನತೆ ತಾರದೆ ಉನ್ನತಿ ಕಾಪಾಡು 12 ಮುಂದೆಮಗೆ ಗತಿಯೇನು ಬಾಳುವಬಗೆಯೆಂತು ಬಂಧು ನೀನಿದ್ದುಕೊಂಡು ಅನ್ಯಾಯವಾಗಿದೆ13 ತಂದೆ ತಾಯಿಯು ನೀನು ಹೊಂದಿದ ಬಳಗ ನೀನು ಕುಂದಿಲ್ಲದೆಮ್ಮನ್ನು ಕಾವ ಪ್ರಭು ನೀನು 14 ಸುವೃಷ್ಟಿ ಸಸ್ಯವೃದ್ಧಿ ಜೀವನ ಸಮೃದ್ಧಿಯು ಸುವೃತ್ತಿ ಕರುಣಿಸಿ ಪೊರೆ ಜಾಜಿಶ್ರೀಶ 15
--------------
ಶಾಮಶರ್ಮರು
ಹೃದಯೇಶ ನಿನ್ನಂತೆ ಸದಯರಿನ್ನಿಹರೇನು ವಿಧುಸನ್ನಿಭಾನನಾ ಪದ್ಮನಯನ ಶ್ಯಾಮಲಾಂಗನೆ ಎನ್ನ ಕಾಮಿತಮಿದೆಲ್ಲಮಂ ಪ್ರೇಮದಿಂ ಪಾಲಿಸೈ ಕ್ಷೇಮಧಾಮ ಏಲಾಲವಂಗದಿಂ ಬಾಲ್ಮೆಣಸುಪತ್ರೆಯಿಂ ಮೇಲೆನಿಸಿ ಘಮಘಮಿಪ ವೀಳ್ಯಮಿದನು ಮೆಚ್ಚಿ ನೀಡುವೆ ನಾನು ನೆಚ್ಚಿನಿಂ ಕೊಂಡಿದನು ಅಚ್ಯುತನೆ ನೀನಿನ್ನು ರಕ್ಷಿಸೆನ್ನ ರನ್ನದಟ್ಟೆಯ ಪಿಡಿದು ನಿಂದು ನಿಂದು ಖಿನ್ನತೆಯನಾಂತೆನ್ನ ಕರವು ನೊಂದು - ದಿನ್ನಾದೊಡೆನ್ನ ಕಣ್ದೆರೆದು ನೋಡು ಚನ್ನಶೇಷಾದ್ರೀಶ ಕರವನೀಡು
--------------
ನಂಜನಗೂಡು ತಿರುಮಲಾಂಬಾ
ಸತತಕಲ್ಯಾಣಅಚ್ಯುತಭಟರಿಗೆರತಿಪತಿಪಿತನಂಘ್ರಿರತ ಮಹಾತ್ಮರಿಗೆ ಪ.ಆಧಿ ವ್ಯಾಧಿಗಳಿಲ್ಲ ಅಶುಭವಾರ್ತೆಗಳಿಲ್ಲಕ್ರೋಧ ನೃಪಭಯವಿಲ್ಲ ಕಾಕುಮತಿ ಇಲ್ಲಖೇದಮನಕಿಲ್ಲ ಖಿನ್ನತೆಯು ಮುಖಕಿಲ್ಲಶ್ರೀಧವನ ನವ ಭಕುತಿಶೀಲ ಜೀವರಿಗೆ 1ಅರಿಗಳೆ ಸಖರಕ್ಕು ಅತಿವಿಷ ಅಮೃತವಕ್ಕುಉರಗಪೂಮಾಲೆಯಕ್ಕು ಉರಿ ತಣ್ಣಗಕ್ಕುಶರಧಿಗೋಷ್ಪದವಕ್ಕು ಶರಘಾತ ಬೆಂಡಕ್ಕುನರಹರಿಯ ನಾಮವನು ನಂಬಿ ತುತಿಪರಿಗೆ 2ಪಾಪ ತಾಪಗಳ್ಗೋಟ ಪರಿದುಬಹ ಎಡರ್ಗೋಟಆಪತ್ತುಗಳಿಗೋಟ ಆಲಸ್ಯಕೋಟಕೋಪದಾರಿದ್ರ್ರ್ಯಕೋಟ ಕಲಿವ್ಯಸನ ಮದಕೋಟಶ್ರೀ ಪ್ರಸನ್ವೆಂಕಟನ ಭಜಿಪ ಭಕ್ತರಿಗೆ 3
--------------
ಪ್ರಸನ್ನವೆಂಕಟದಾಸರು