ಒಟ್ಟು 5 ಕಡೆಗಳಲ್ಲಿ , 2 ದಾಸರು , 2 ಕೀರ್ತನೆಗಳಲ್ಲಿ ಈ ಪದವನ್ನು ಬಳಸಿರುತ್ತಾರೆ

ಇಂದಿರೆಯರಸನಾಡಿದ ಆಟನೋಡಿ|ನಲಿದಾಡಿ| ಬಂದರಜಮುಖ್ಯರೋಡಿ|ಬಹುಜನ ಕೂಡಿ ಪ ಅರುಣ ತಳದಿರಂಜಿಪ ದ್ವಯ|ಚರಣದಿಂದ ಕಾಳಿ ಅಹಿ| ವರನಸಿರವ ಮೆಟ್ಟಿಸೂರ್ಯ|ಕಿರಣದಂತೆ ಪೊಳೆವಾ| ಸ್ಪುರಣಗೆಜ್ಜಯ ಝಣ ಝಣ|ಝಣಕು ಝಣಕೆಂಬ ತೆರದಿಂದ| ಕರುಣ ಧಿಗಿ ಧಿಗಿಯೆಂದು|ವಾರುಣದಲಿ ಕುಣಿಯೇ 1 ವೀಣೆಯಲಿತಾಸರಿಗ ಮಪಧನಿ|ಸೆಂಬಮೆಟ್ಟಿಕೆಯೊಳ| ತ್ರಾಣದಿಂದ ಝಿಂ ಝಿಂ ಝಿಂ ಝಿಂ ಕೆನಿಪ ದ್ವನಿಯಗಳನು| ಮಾಣುತಲಿ ಸಿರಿರಾಗ ಘನಮಲಾಹರ ಮೊದಲು| ವಾಣಿಪತಿಸುತ ಪಾಡಿದ ನಾನಾ ರಾಗದಲಿ 2 ಅಂಬುಜಾಕ್ಷಪ್ರಿಯನಾದ|ಅಂಬುಜಭವ ಪದ ಕರ್ತ| ಕುಂಭಿಯೊಳಹಸ್ತಿನಿಕು|ರಂಬಾರಿ ಕೋಟಿ ದ್ವನಿ| ವೆಂಬಂತೆ ಕಹಳೆಗಳು|ತುಂಬಿ ಪೂರೈಸಿದನು| ಭುಂ ಭುಂ ಭುಂ ಭುಂ|ಭುಂ ಮೆಂದು ಗಂಭೀರ ಸಪರದಿ 3 ತತ್ತಥೈಯ್ಯಾ ಥೈಯ್ಯಾ ಥರಿಕೆಂದು|ಧತ್ತೆರಿಕುಥಲಿ| ಒತ್ತಿ ಖಿಣಿ ಖಿಣಿ ಖಿಣಿಲೆಂಬ|ಮೊತ್ತತಾಳು ವಿಡಿದು| ಮತ್ತ ಏಕತಾಳ ಝಂಪೆ|ತಾಳ ಅಟ್ಟತಾಳಗಳು| ಉತ್ತುಮದಾ ಕರದಿ ಹರ ಅರ್ಥಿಯಲಿ ನಿಂದಾ 4 ಇಂದೀವರಜ ಮದ್ಯಸ್ಥಲ ಒಂದು ನೆಗೆದು ಜವದಿಂದಾ| ದಂ ದಂ ದಂ ದಂ ದಮುಕೆಂದು|ಛಂದದಿ ಮುಟ್ಟಿದನು| ಧಿಂಧಿಂಧಿಂಧಿಂಧಿಮಿಕೆಂದು|ದುಂಧುಂಪೊಡದರು ಸುರರು| ತಂದೆ ಮಹಿಪತಿ ನಂದನ ವಂದ್ಯನೊಲುವಂತೆ 5
--------------
ಕಾಖಂಡಕಿ ಶ್ರೀ ಕೃಷ್ಣದಾಸರು
ಶ್ರೀಹರಿ ಸ್ತವನ ಅರ್ಜುನಗಾನಂದಾ ಮಾಡಿದ ಗೋವಿಂದಾ ಪ ರಥದಿ ಮಂಡಿಸಿ ಚತುರತನದಲಿಂದಾ ಚತುರ ಹಸ್ತದಿಂ ವಾಜಿಯಂ ಪಿಡಿದು ರಥಕನ ಬೆನ್ಹಿಂದಿಟ್ಟುಕೊಂಡು ಸಾ- ರಥಿಯು ತಾನೆ ಅಶ್ವವ ನಡಿಸುತಲಿ ರತಿಪತಿಪಿತನತಿಚಮತ್ಕಾರದಿಂ ಪೃಥಿವಿಯ ಮೇಲೆ ನರನಟನ ತೋರುತಲಿ ಪತಿತ ಪಾವನನು ಫಲ್ಗುಣ ಸಖನು ನುತಿಸಿದವರ ನೆರೆ ಪಾಲಿಸುತಿಹನು ಅತುಳ ಶಂಖದಿಂ ಭೌಂ ಭೌಂ ಎನಿಸುತ ರಥದ ಗಾಲಿ ಛಿಟ್ ಛಿಟ್ ಛಿಟಿಲೆನುತ ಕುದುರೆ ಖುರಪುಟಧ್ವನಿ ಫಳ್ ಫಳ್ ಫಳ್ಳೆ ಗೋವಿಂದನು ರಭಸದಿ ಭಕ್ತನೂಳಿಗಾ1 ಮಂದಜಭವ ಮುಖ್ಯಾಮರ ವೃಂದವು ನಂದತನುಜನಾರಂದಲೀಲೆಯಂ ಛಂದದಿ ನೋಡುತ ನಭೋಮಾರ್ಗದೊಳ್ ಬಂದು ಕುಸುಮಗಳ ವೃಷ್ಟಿಯ ಸುರಿದು ಸಿಂಧುಶಯನ ನಾಮಾಮೃತ ಸುರಿದು ಬೃಂದಾರಕ ನಿಕರವು ಕೈಯೆತ್ತಿ ಇಂದುಕಲಾಧಿಪ ಪ್ರಾರ್ಥನೆ ಸೈ ಸೈ ಎಂದು ದೇವದುಂದುಭಿ ಧೋಂ ಧೋಂ ಕಂಸಾ- ಳದರವ ಖಿಣಿಖಿಣಿ ಖಿಣಿ ಭೇರಿ ನಾದ ಖಡ್ ಖಡ್ ಖಡಲ್ ಭಾರಿ ತಾ- ಹತಜಂತರಿಧೂಂ ನರ್ತನಗೈವುತ ತೆರಳುತ 2 ಮಂಗಳ ರವದಿಂ ಜಯಜಯ ಎನಿಸುತ ಮಂಗಳಾಂಗಿ ರುಕ್ಮಿಣಿ ವಲ್ಲಭನು ರಂಗಿನಿಂದ ರಥವಿಳಿದು ಗೆಳೆಯನ ಮುಂಗೈಯನೆ ಪಿಡಿದು ಅಂಗಜನಯ್ಯ ರಂಗುಮಣಿಯ ಉಂಗುರದಿ ಒಪ್ಪುತಲಿ ಭಂಗಾರಕೆ ಮಿಗಿಲೆನಿಪ ದುಕೂಲದಿ ಶೃಂಗರದಲ್ಲಿ ಉತ್ತುಂಗ ಪರಾಕ್ರಮ ಅಂಗಳದೋಳ್ ನಲಿದಾಡುತ ರಂಗನು ತಿಂಗಳ ಕುಲದೀಪನ್ನ ನೋಡುತಲಿ ರಂಗ ಕದರುಂಡಲಗೀಶನ ಒಡೆಯನು ತಾ 3
--------------
ಕದರುಂಡಲಗೀಶರು