ಲೇಸು ಮಾಡಿದೆ ಮಾತೆ ಪುಣ್ಯದ ರಾಶಿ ಎನಗೊದಗಿತು ಭಲ ಪ
ಆಶೆಯನು ಪೂರೈಪೆನಿಂದಿನ ಘಾಸಿಯಾಕೆ ದ್ವಿಜರಿಗಲಾ ಅ.ಪ
ಬಂಡಿಯನ್ನವು ಪಾಯಸವುಸುಖಿ
ವುಂಡು ತೇಗುತ ಬರುವೆನು1
ಶಾನೆ ಖಾರದಪ್ಪಳ ಸಂಡಿಗೆಯು
ನೂರಾರು ಬೆಂಡು ಪುಟ್ಟಿಗೆಗಳು 2
ದೋಸೆ ಕೋಡುಬಳೆಯಪ್ಪಗಳು | ಸೋ-
ಮಾಸಿ ಹೂರಗಿ ಮಾಡಿಸು
ಸೂಸಲುಪ್ಪಿನಕಾಯಿಗಳನ್ನು
ರಾಸಿ ರಾಸಿಯು ತುಂಬಿಸು 3
ಎಲ್ಲವನು ಹೆಚ್ಚಾಗಿ ಮಾಡಿಸು
ನಿಲ್ಲದೀಗಲೆ ಪೋಗುತಾ
ಸುಳ್ಳಿದಲ್ಲವು ತಿಳಿಯುತ 4
ಕುಡಿವೆ ಭುಜವಪ್ಪಳಿಸಿ ನಾಂ
ಸಡಗರವೆನಗೆ ಗೈದ ತಾಂ 5